ಅಪಾಯದ ಅರಿವಿದ್ದರು 'ಮಹಾರಾಜ' ಚಿತ್ರವನ್ನು ಹಿಂದಿಗೆ ರಿಮೇಕ್ ಮಾಡ್ತಾರಾ ಅಮೀರ್ ಖಾನ್..?

ಕೆಲ ಸಿನಿಮಾಗಳೇ ಹಾಗೇ. ಭಾರೀ ನಿರೀಕ್ಷೆ ಮೂಡಿಸಿ ಆ ನಂತರ ನಿರಾಸೆ ಮಾಡುತ್ತವೆ. ಆದರೆ ಇನ್ನೂ ಕೆಲವು ಯಾವ ನಿರೀಕ್ಷೆಯನ್ನೂ ಮೂಡಿಸದೇ ದಿಗ್ಗನೆ ಬಂದು ಆ ನಂತರ ಸದ್ದು ಮಾಡುತ್ತವೆ. ಕಾಡುತ್ತವೆ. ನಿಥಿಲನ್ ಸ್ವಾಮಿನಾಥನ್ ನಿರ್ದೇಶನದ 'ಮಹಾರಾಜ' ಈ ಎರಡನೇ ಸಾಲಿನಲ್ಲಿ ನಿಲ್ಲುವ ಸಿನಿಮಾ.

ಯಾರೆಂದರೆ ಯಾರು ಊಹಿಸದ ಗೆಲುವನ್ನೂ ಕಂಡ 'ಮಹಾರಾಜ' ಚಿತ್ರಕ್ಕೆ ಓಟಿಟಿಯಲ್ಲಂತೂ
ಚಿನ್ನದ ಬೆಲೆ ಇದೆ. ಓಟಿಟಿಯಲ್ಲಿ ದಿನದಿಂದ ದಿನಕ್ಕೆ ಚಿತ್ರ ನೋಡುವವರ ಸಂಖ್ಯೆ ಹೆಚ್ಚಾಗ್ತಿದೆಯೆ ಹೊರತು ಕಡಿಮೆಯಾಗುತ್ತಿಲ್ಲ. ಇನ್ನೂ.. ಸಾಮಾಜಿಕ ಜಾಲತಾಣ 'ಮಹಾರಾಜ'ನ ಗುಣಗಾನ ಮಾಡುತ್ತಿದೆ. ಭಾಷೆಯ ಭೇದ-ಭಾವ ಇಲ್ಲದೇ ಪ್ರೇಕ್ಷಕರ ವರ್ಗ ಮಕ್ಕಳ ಸೆಲ್ವನ್ ವಿಜಯ್ ಸೇತುಪತಿ ಮತ್ತು ಅನುರಾಗ್ ಕಶ್ಯಪ್ ಅಭಿನಯವನ್ನೂ ಮನಸಾರೆ ಹೊಗಳುತ್ತಿದೆ. ಹೀಗಿರುವಾಗ 'ಮಹಾರಾಜ' ಬಾಲಿವುಡ್ಡಿಗೆ 'ರಿಮೇಕ್' ಆಗಲಿದೆ ಎನ್ನುವ ಸುದ್ದಿಯೊಂದು ಮಾಯಾನಗರಿ ಮುಂಬೈನಲ್ಲಿ ಕೇಳಿ ಬರುತ್ತಿದೆ.

aamir-khan-to-take-over-vijay-sethupathi-s-role-in-maharaja-remake

ಹೌದು, ಎಲ್ಲ ಭಾಷೆಯಲ್ಲಿ ಪ್ಯಾನ್ ಇಂಡಿಯಾ ಭಜನೆ ನಡೆಯುತ್ತಿರುವಾಗ, ಬಾಲಿವುಡ್‌ 'ಮಹಾರಾಜ' ಚಿತ್ರವನ್ನೂ ಹಿಂದಿಗೆ ರಿಮೇಕ್ ಮಾಡಲಿದೆ ಎಂಬ ಸುದ್ದಿ ಸದ್ಯಕ್ಕೆ ಹಬ್ಬಿದೆ. ಇನ್ನೂ ವಿಶೇಷ ಅಂದರೆ ಈ ಚಿತ್ರದ ರಿಮೇಕ್ ಹಕ್ಕು ಪಡೆದಿರುವುದು ಬೇರೆ ಯಾರು ಅಲ್ಲ ಬದಲಿಗೆ ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಅನ್ನುವ ಸುದ್ದಿ ಕೂಡ ಕೇಳಿ ಬರುತ್ತಿದೆ. ತಮ್ಮ ಅಮೀರ್ ಖಾನ್ ಪ್ರೊಡಕ್ಷನ್‌ ಬ್ಯಾನರ್‌ ಅಡಿ ಚಿತ್ರವನ್ನೂ ನಿರ್ಮಾಣ ಮಾಡುವುದಲ್ಲದೇ ವಿಜಯ್ ಸೇತುಪತಿ ನಿರ್ವಹಿಸಿರುವ ಪಾತ್ರವನ್ನೂ ಕೂಡ ಅಮೀರ್ ನಿರ್ವಹಿಸಲಿದ್ದಾರೆ ಎನ್ನುವ ಸುದ್ದಿ ಸದ್ಯಕ್ಕೆ ಎಲ್ಲೆಡೆ ಗುಲ್ಲಾಗಿದೆ.

ಸೌತ್ To ನಾರ್ತ್ ಹಬ್ಬಿರುವ ಈ ಸುದ್ದಿಯಲ್ಲಿರುವ ಸತ್ಯಾಂಶ ಎಷ್ಟು ಅನ್ನುವುದು ಸದ್ಯಕ್ಕೆ ಗೊತ್ತಿಲ್ಲವಾದರೂ, ಅಮೀರ್ ಖಾನ್ ಇಂತಹ ಹುಂಬುತನದ ಕೆಲಸವನ್ನು ಮಾಡಲಾರರು ಅನ್ನುವ ವಾದವನ್ನೂ ಒಂದು ವರ್ಗ ಸದ್ಯಕ್ಕೆ ಮಾಡುತ್ತಿದೆ. ಯಾಕೆಂದರೆ.. 'ಮಹಾರಾಜ' ತಮಿಳಿನವನಾದರೂ, ಹಿಂದಿಗೆ ಚಿತ್ರ ಡಬ್ ಆಗಿದೆ. ಇನ್ನೂ ಓಟಿಟಿಯಲ್ಲಿ ದಕ್ಷಿಣದವರಂತೆಯೇ ಉತ್ತರದವರು ಕೂಡ ಈ ಚಿತ್ರವನ್ನು ನೋಡುತ್ತಿದ್ದಾರೆ. ಇನ್ನೂ ನೋಡುತ್ತಲೇ ಇದ್ದಾರೆ. ಹೀಗಿರುವಾಗ ಅಮೀರ್ ಖಾನ್‌ಗೆ 'ಮಹಾರಾಜ' ಚಿತ್ರವನ್ನು ಹಿಂದಿಗೆ ರಿಮೇಕ್ ಮಾಡುವ ದರ್ದಾದರೂ ಏನು..? ಎಂಬ ಪ್ರಶ್ನೆ ಹಲವರದ್ದು.

aamir-khan-to-take-over-vijay-sethupathi-s-role-in-maharaja-remake

ಎಲ್ಲಕ್ಕಿಂತ ಹೆಚ್ಚಾಗಿ ಅಮೀರ್ ಖಾನ್ ಸತತ ಸೋಲುಗಳಿಂದ ಕಂಗಾಲಾಗಿದ್ದಾರೆ. 'ಲಾಲ್‌ ಸಿಂಗ್ ಚಡ್ಡಾ' ಸೋಲು ಅಮೀರ್ ಖಾನ್‌ ಇನ್ನೂ ಮರೆತಿಲ್ಲ. 'ಲಾಲ್ ಸಿಂಗ್ ಚಡ್ಡಾ' ಕೂಡ ಹಾಲಿವುಡ್‌ನ 'ಫಾರೆಸ್ಟ್ ಗಂಪ್‌' ಚಿತ್ರದ ನಕಲು. ವರ್ಷಾನುವರ್ಷ ಈ ಚಿತ್ರಕ್ಕೆ ಬೆವರು ಹರಿಸಿ, ಕೋಟ್ಯಂತರ ಹಣವನ್ನೂ ಹೂಡಿದ್ದರು ಅಮೀರ್ ಖಾನ್. ಆದರೂ.. ವಿಜಯಲಕ್ಷ್ಮೀ ಅಮೀರ್ ಖಾನ್‌ಗೆ ಒಲಿಯಲಿಲ್ಲ. ಹೀಗಾಗಿಯೇ ಈ ಸೋಲಿನಿಂದ ಪಾಠ ಕಲಿತಿರುವ ಅಮೀರ್ ಖಾನ್ ಮತ್ತೊಮ್ಮೆ ರಿಮೇಕ್ ಮಾಡುವ ದುಸ್ಸಾಹಸಕ್ಕೆ ಮುಂದಾಗಲ್ಲ ಅನ್ನುವ ಅಭಿಪ್ರಾಯವನ್ನೂ ಅನೇಕರು ವ್ಯಕ್ತಪಡಿಸುತ್ತಿದ್ದಾರೆ.

ಇನ್ನೂ ಅಮೀರ್ ಖಾನ್ 'ಮಹಾರಾಜ' ಚಿತ್ರವನ್ನು ರಿಮೇಕ್ ಮಾಡಲು ಮುಂದಾಗಿದ್ದೇ ಆದಲ್ಲಿ, ಆರಂಭದಿಂದಲೇ ನಿರೀಕ್ಷೆ ಹೆಚ್ಚಾಗುತ್ತೆ. ಅಮೀರ್ ಖಾನ್ ಮೇಲೆ ಜವಾಬ್ಧಾರಿ ಕೂಡ ಹೆಚ್ಚಾಗುತ್ತೆ. ನಿರೀಕ್ಷೆಯ ಮಟ್ಟವನ್ನೂ ತಲುಪುವುದು ಕೂಡ ಕಷ್ಟವಾಗುತ್ತದೆ. ಈ ಕಾರಣಕ್ಕೆ 'ಮಹಾರಾಜ' ರಿಮೇಕ್‌ನ ಭವಿಷ್ಯವನ್ನು ಈಗಲೇ ಹೇಳುವುದು ಅಸಾಧ್ಯ ಅನ್ನುವ ಮಾತುಗಳು ಕೂಡ ಸದ್ಯಕ್ಕೆ ಮುಂಬೈನಲ್ಲಿ ಕೇಳಿ ಬರುತ್ತಿವೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X