ಪ್ರತಿವರ್ಷ ಅಮಿತಾಬ್ ಮಗಳಿಗೆ ಪತ್ರ ಬರೆಯುತ್ತಿದ್ದರಂತೆ ಅಮೀರ್ ಖಾನ್
ಅಮಿತಾಬ್ ಬಚ್ಚನ್ ಮಗಳು ಶ್ವೇತಾ ಬಚ್ಚನ್ ಬಗ್ಗೆ ಹೆಚ್ಚಿನ ಜನಕ್ಕೆ ಗೊತ್ತಿಲ್ಲ. ಆಕೆ ನಟನೆಯಿಂದ ದೂರವೇ ಉಳಿದ ಕಾರಣಕ್ಕೆ ಆಕೆಯ ಪರಿಚಯ ಹೆಚ್ಚಿಗಿಲ್ಲ. ಆದರೆ ಶ್ವೇತಾ ಬಚ್ಚನ್ ಆಗಾಗ್ಗೆ ತಮ್ಮ ಅಪ್ಪ ಅಥವಾ ಅಣ್ಣನೊಂದಿಗೆ ಟಾಕ್ ಶೋ ಗಳಿಗೆ ಬರುತ್ತಿರುತ್ತಾರೆ.
ಸಿನಿಮಾ ಬಗ್ಗೆ ರಕ್ತಗತವಾದ ಆಸಕ್ತಿ ಶ್ವೇತಾ ಬಚ್ಚನ್‌ಗೂ ಬಂದಿದೆ. ಶ್ವೇತಾ ವಿದ್ಯಾರ್ಥಿ ಆಗಿದ್ದಾಗಿನಿಂದಲೂ ಸಿನಿಮಾಗಳೆಂದರೆ ಅದರಲ್ಲೂ ಸಲ್ಮಾನ್ ಖಾನ್, ಅಮೀರ್ ಖಾನ್ ಸಿನಿಮಾಗಳು ಎಂದರೆ ಪಂಚಪ್ರಾಣವಂತೆ.
Recommended Video
ಅದರಲ್ಲಿಯೂ ಸಲ್ಮಾನ್ ಖಾನ್ ಅವರ 'ಮೈ ನೆ ಪ್ಯಾರ್ ಕಿಯಾ' ಸಿನಿಮಾವನ್ನು ನೋಡಿ ಬಹುವಾಗಿ ಮೆಚ್ಚಿಕೊಂಡಿದ್ದರಂತೆ. ವಿಸಿಆರ್ ನಲ್ಲಿ ಆ ಸಿನಿಮಾವನ್ನು ನೋಡಿ, ಪೂರ್ತಿ ಸಿನಿಮಾವನ್ನು ಧ್ವನಿ ರೂಪದಲ್ಲಿ ಕ್ಯಾಸೆಟ್‌ನಲ್ಲಿ ರೆಕಾರ್ಡ್ ಮಾಡಿಟ್ಟುಕೊಂಡು ಕೇಳಿಸಿಕೊಳ್ಳುತ್ತಿದ್ದರಂತೆ.

ಅಭಿಷೇಕ್ ಬಚ್ಚನ್ ತಂಗಿಯ ಭೇಟಿಗೆ ವಿದೇಶಕ್ಕೆ ಹೋದಾಗ, ಮೈ ನೆ ಪ್ಯಾರ್ ಕಿಯಾ ನಲ್ಲಿ ಸಲ್ಮಾನ್ ಧರಿಸಿದ್ದ ಮಾದರಿ 'ಫ್ರೆಂಡ್' ಹೆಸರಿನ ಟೋಪಿಯನ್ನು ತೆಗೆದುಕೊಂಡು ಹೋಗಿದ್ದರಂತೆ. ಆ ಟೋಪಿಯನ್ನು ದಿಂಬಿನ ಕೆಳಗಿಟ್ಟುಕೊಂಡೇ ಮಲುಗುತ್ತಿದ್ದರಂತೆ ಶ್ವೇತಾ ಬಚ್ಚನ್.
ಅಮೀರ್ ಖಾನ್ ಎಂದರೂ ಬಹಳ ಇಷ್ಟವಂತೆ ಶ್ವೇತಾ ಗೆ. ಅಮೀರ್ ಖಾನ್ ಅನ್ನು ಭೇಟಿಯಾದಾಗ ಈ ವಿಷಯ ಹೇಳಿದ್ದರಂತೆ ಶ್ವೇತಾ. ಆ ನಂತರ ಶ್ವೇತಾ ಅವರ ಹುಟ್ಟುಹಬ್ಬಕ್ಕೆ ಪ್ರತಿ ವರ್ಷವೂ ತಪ್ಪದೆ ಪತ್ರ ಬರೆಯುತ್ತಿದ್ದರಂತೆ ಅಮೀರ್ ಖಾನ್. ಈ ವಿಷಯವನ್ನು ಶ್ವೇತಾ ಹಾಗೂ ಅಭಿಷೇಕ್ ಅವರು ಟಾಕ್ ಶೋ ನಲ್ಲಿ ಹೇಳಿಕೊಂಡಿದ್ದರು.


Click it and Unblock the Notifications











