For Quick Alerts
  ALLOW NOTIFICATIONS  
  For Daily Alerts

  ಆಮಿರ್ ಖಾನ್ v/s ಅಕ್ಷಯ್ ಕುಮಾರ್: ಬಾಕ್ಸ್‌ ಆಫೀಸ್‌ನಲ್ಲಿ ಗೆದ್ದವರು ಯಾರು?

  |

  ದೊಡ್ಡ ಸಿನಿಮಾಗಳ ನಡುವೆ ಬಾಕ್ಸ್ ಆಫೀಸ್ ಫೈಟ್ ಸದಾ ಕುತೂಹಲಕಾರಿ. ಅದರಲ್ಲಿಯೂ ಒಂದೇ ಚಿತ್ರರಂಗದ ಇಬ್ಬರು ಸ್ಟಾರ್ ನಟರ ಸಿನಿಮಾಗಳು ಒಂದೇ ದಿನ ಬಿಡುಗಡೆ ಆದರಂತೂ ಸಿನಿ ಪ್ರೇಮಿಗಳಿಗೆ, ಸಿನಿಮಾ ಬಾಕ್ಸ್ ಆಫೀಸ್ ಪಂಡಿತರಿಗೆ ಹಬ್ಬವೇ ಸರಿ.

  ಇದೀಗ ಆಮಿರ್ ಖಾನ್ ನಟನೆಯ 'ಲಾಲ್ ಸಿಂಗ್ ಚಡ್ಡ' ಹಾಗೂ ಅಕ್ಷಯ್ ಕುಮಾರ್ ನಟನೆಯ 'ರಕ್ಷಾ ಬಂಧನ್' ಒಂದೇ ದಿನ ಬಿಡುಗಡೆ ಆಗಿದೆ. ಎರಡೂ ಕೌಟುಂಬಿಕ ಕತೆ ಹೊಂದಿರುವ ಸಿನಿಮಾಗಳು. ಇಬ್ಬರಲ್ಲಿ ಯಾರು ಗೆಲ್ಲುತ್ತಾರೆ? ಎಂಬುದು ಕುತೂಹಲ ಮೂಡಿಸಿದೆ.

  ಆಮಿರ್ ಖಾನ್ ನಟನೆಯ 'ಲಾಲ್ ಸಿಂಗ್ ಚಡ್ಡ' ಮೊದಲ ದಿನ ಗಳಿಸಿದ್ದೆಷ್ಟು? ಆಮಿರ್ ಖಾನ್ ನಟನೆಯ 'ಲಾಲ್ ಸಿಂಗ್ ಚಡ್ಡ' ಮೊದಲ ದಿನ ಗಳಿಸಿದ್ದೆಷ್ಟು?

  ಆಮಿರ್ ಖಾನ್ ಹಾಗೂ ಅಕ್ಷಯ್ ಕುಮಾರ್ ಇಬ್ಬರ ನಡುವಿನ ಸ್ಪರ್ಧೆ ಹೆಚ್ಚು ಗಮನ ಸೆಳೆಯಲು ರಾಜಕೀಯ ಕಾರಣವೂ ಇದೆ. ಹಿಂದುಪರ ಸಂಘಟನೆಗಳು ಆಮಿರ್ ಖಾನ್ ಅನ್ನು ತೀವ್ರವಾಗಿ ವಿರೋಧಿಸಿದರೆ ಅಕ್ಷಯ್ ಕುಮಾರ್ ಅನ್ನು ಬೆಂಬಲಿಸುತ್ತಾ ಬಂದಿವೆ. ಅಂತೆಯೇ ಹಿಂದುತ್ವದ ಐಡಿಯಾಲಜಿಯ ವಿರೋಧದಲ್ಲಿರುವವರು ಆಮಿರ್ ಖಾನ್ ಅನ್ನು ಪ್ರೀತಿಸುತ್ತಾರೆ. ಅಕ್ಷಯ್ ಬಗ್ಗೆ ಅವರಿಗೆ ತಮ್ಮದೇ ಆದ ಭಿನ್ನಾಭಿಪ್ರಾಯವಿದೆ. ಹಾಗಾಗಿ ಇವರಿಬ್ಬರ ನಡುವಿನ ಬಾಕ್ಸ್ ಆಫೀಸ್ ಫೈಟ್ ಹೆಚ್ಚು ಕುತೂಹಲಕಾರಿ.

  ಮೊದಲ ದಿನ ಗೆಲುವು ಯಾರದ್ದು?

  ಮೊದಲ ದಿನ ಗೆಲುವು ಯಾರದ್ದು?

  ಇಬ್ಬರ ಸಿನಿಮಾಗಳು ಒಂದೇ ದಿನ ಬಿಡುಗಡೆ ಆಗಿದ್ದು, ಮೊದಲ ದಿನದ ಬಾಕ್ಸ್ ಆಫೀಸ್ ರಿಪೋರ್ಟ್ ಇದೀಗ ಹೊರಬಿದ್ದಿದೆ. ಬಾಲಿವುಡ್ ಸಿನಿಮೋದ್ಯಮ ಪ್ರಸ್ತುತ ಅನುಭವಿಸುತ್ತಿರುವ ಹಿನ್ನಡೆಯನ್ನು ಗಮನದಲ್ಲಿಟ್ಟುಕೊಂಡು ಸೂಕ್ಷ್ಮವಾಗಿ ಗಮನಿಸಿದರೆ ಇಬ್ಬರ ಸಿನಿಮಾಗಳೂ ಸೋತಿವೆ ಎಂದೇ ಹೇಳಬೇಕಾಗುತ್ತದೆ. ಎರಡೂ ಸಿನಿಮಾಗಳೂ ಸಹ ಬಾಕ್ಸ್‌ ಆಫೀಸ್‌ನಲ್ಲಿ ಬಹಳ ಸಾಧಾರಣ ಓಪನಿಂಗ್ ಪಡೆದುಕೊಂಡಿವೆ. ಒಂದೊಮ್ಮೆ ಇದೇ ಪ್ರದರ್ಶನ ವೀಕೆಂಡ್‌ನಲ್ಲಿ ಮುಂದುವರೆದರೆ ಎರಡೂ ಸಿನಿಮಾಗಳೂ ಸೋಲುತ್ತವೆ.

  ಲಾಲ್ ಸಿಂಗ್ ಚಡ್ಡ ಗಳಿಸಿದ್ದದೆಷ್ಟು?

  ಲಾಲ್ ಸಿಂಗ್ ಚಡ್ಡ ಗಳಿಸಿದ್ದದೆಷ್ಟು?

  ಆಮಿರ್ ಖಾನ್ ನಟನೆಯ 'ಲಾಲ್ ಸಿಂಗ್ ಚಡ್ಡ' ಸಿನಿಮಾ ಮೊದಲ ದಿನ ಅಂದರೆ ಗುರುವಾರ ಭಾರತದಲ್ಲಿ 12 ಕೋಟಿ ಗಳಿಸಿದೆ. ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ಚೆನ್ನಾಗಿ ಕಲೆಕ್ಷನ್ ಮಾಡಿದೆ ಆದರೆ ನಾನ್ ಮಲ್ಟಿಪ್ಲೆಕ್ಸ್ ಅಥವಾ ಸಿಂಗಲ್ ಸ್ಕ್ರೀನ್‌ ಚಿತ್ರಮಂದಿರಗಳಲ್ಲಿ ಸಿನಿಮಾ ಹೆಚ್ಚು ಗಳಿಸಿಲ್ಲ. ಇದೇ ಪ್ರದರ್ಶನ ಮುಂದುವರೆದರೆ ಸಿನಿಮಾ ಸೋಲುವುದು ಖಂಡಿತ ಎಂದಿದ್ದಾರೆ ಟ್ರೇಡ್ ವಿಶ್ಲೇಷಕರು.

  ಅಕ್ಷಯ್ ಕುಮಾರ್ ಸಿನಿಮಾ ಗಳಿಸಿದ್ದೆಷ್ಟು?

  ಅಕ್ಷಯ್ ಕುಮಾರ್ ಸಿನಿಮಾ ಗಳಿಸಿದ್ದೆಷ್ಟು?

  ಇನ್ನು ಅಕ್ಷಯ್ ಕುಮಾರ್ ನಟನೆಯ 'ರಕ್ಷಾ ಬಂಧನ್' ಸಿನಿಮಾ ಗುರುವಾರ ಗಳಿಸಿರುವುದು ಕೇವಲ 8.20 ಕೋಟಿ ಅಷ್ಟೆ. ಮೆಟ್ರೊ ಸಿಟಿಗಳಲ್ಲಿ ಈ ಸಿನಿಮಾ ಒಳ್ಳೆಯ ಪ್ರದರ್ಶನ ಕಂಡಿಲ್ಲ ಎನ್ನಲಾಗುತ್ತಿದೆ. ಆದರೆ ಪಟ್ಟಣ ಪ್ರದೇಶಗಳಲ್ಲಿ ಸಿನಿಮಾ ಚೆನ್ನಾಗಿ ಓಡಿದೆ. ವಾರಾಂತ್ಯದಲ್ಲಿ ಕುಟುಂಬಗಳು ಚಿತ್ರಮಂದಿರದತ್ತ ಬರುವ ವಿಶ್ವಾಸ ಚಿತ್ರತಂಡದ್ದು. ರಕ್ಷಾ ಬಂಧನ್ ಹಬ್ಬದ ದಿನವೇ ಬಿಡುಗಡೆ ಆದರೂ ಸಹ ಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಕ್ಕೆ ಸೆಳೆಯಲು ಸೋತಿದೆ ಈ ಸಿನಿಮಾ.

  ಆಮಿರ್ ಖಾನ್‌ಗೆ ಮುನ್ನಡೆ

  ಆಮಿರ್ ಖಾನ್‌ಗೆ ಮುನ್ನಡೆ

  ಮೊದಲ ದಿನದ ಕಲೆಕ್ಷನ್ ಅನ್ನು ಲೆಕ್ಕಾ ಹಾಕಿ ಹೇಳುವುದಾದರೆ ಆಮಿರ್ ಖಾನ್ ಹಾಗೂ ಅಕ್ಷಯ್ ಕುಮಾರ್ ನಡುವಿನ ಬಾಕ್ಸ್ ಆಫೀಸ್‌ನ ಯುದ್ಧದಲ್ಲಿ ಆಮಿರ್ ಖಾನ್‌ಗೆ ಮುನ್ನಡೆಯಾಗಿದೆ. ಆದರೆ ವಾರಾಂತ್ಯದ ಕಲೆಕ್ಷನ್ ಎರಡೂ ಸಿನಿಮಾಗಳ ಭವಿಷ್ಯ ನಿರ್ಧಾರ ಮಾಡುವ ಕಾರಣ ವಾರಾಂತ್ಯದ ಕಲೆಕ್ಷನ್ ರಿಪೋರ್ಟ್ ಬರುವವರೆಗೆ ಕಾಯಬೇಕಾಗುತ್ತದೆ. ಆದರೆ ಈ ಎರಡೂ ಸಿನಿಮಾಗಳು ಮೊದಲ ದಿನ ಮಾಡಿರುವ ಕಲೆಕ್ಷನ್ ಬಹಳ ಸಾಧಾರಣ ಎನ್ನಬೇಕಾಗುತ್ತದೆ. ಆಮಿರ್ ಖಾನ್‌ರ ಸಿನಿಮಾ ಕನಿಷ್ಟ 15 ಕೋಟಿ ಮಾಡುತ್ತದೆ ಎಂದು ಲೆಕ್ಕ ಹಾಕಲಾಗಿತ್ತು. ಆದರೆ ಅದು ಸಾಧ್ಯವಾಗಿಲ್ಲ.

  Recommended Video

  ಗುರೂಜಿಯಾ ಹೊಸ ಅವತಾರ ನೋಡಿದ್ರೆ ಶಾಕ್‌ ಆಗೋದು ಪಕ್ಕಾ | Bigg boss OTT *Bigg Boss
  English summary
  Aamir Khan Starer Laal Singh Chaddha v/s Akshay Kumar's Raksha Bandhan movie box office fight. Who won on the first day.
  Friday, August 12, 2022, 19:50
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X