ಅಮೀರ್ ಖಾನ್ 'ಮಹಾಭಾರತ'ದಲ್ಲಿ ಪ್ರಭಾಸ್.! ಯಾವ ಪಾತ್ರಕ್ಕೆ.?

By Bharath Kumar

ತೆಲುಗಿನಲ್ಲಿ ಬಾಹುಬಲಿ, ಕನ್ನಡದಲ್ಲಿ ಕುರುಕ್ಷೇತ್ರ....ಈಗ ಬಾಲಿವುಡ್ ನಲ್ಲಿ 'ಮಹಾಭಾರತ' ಚಿತ್ರದ್ದೇ ಸದ್ದು. ಅಮೀರ್ ಖಾನ್ ಸಾರಥ್ಯದಲ್ಲಿ ತಯಾರಾಗಲಿರುವ 'ಮಹಾಭಾರತ' ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಗಳು ಆರಂಭವಾಗಿದೆ.

ಈ ಮಧ್ಯೆ 'ಮಹಾಭಾರತ' ಚಿತ್ರಕ್ಕೆ ಕಲಾವಿದರ ಆಯ್ಕೆ ಪ್ರಕ್ರಿಯೆಯನ್ನ ಸೈಲೆಂಟ್ ಆಗಿ ಶುರು ಮಾಡಿದ್ದಾರೆ ಅಮೀರ್ ಖಾನ್. ರಿಲಯನ್ಸ್ ಸಹಭಾಗಿತ್ವದಲ್ಲಿ ಈ ಮೆಗಾ ಪ್ರಾಜೆಕ್ಟ್ ನ್ನ ನಿರ್ಮಾಣ ಮಾಡಲಿರುವ ಅಮೀರ್ ಖಾನ್ ಈಗ ಬಾಹುಬಲಿ ಖ್ಯಾತಿಯ ಪ್ರಭಾಸ್ ಅವರನ್ನ ಈ ಚಿತ್ರಕ್ಕಾಗಿ ಕರೆತರಲು ಚಿಂತನೆ ನಡೆಸಿದ್ದಾರೆ.

ಈ ಬಗ್ಗೆ ಪ್ರಭಾಸ್ ಗೆ ಆಫರ್ ಕೂಡ ಮಾಡಲಾಗಿದೆ ಎಂಬ ಮಾತುಗಳು ಬಿಟೌನ್ ಇಂಡಸ್ಟ್ರಿಯಲ್ಲಿ ಕೇಳಿ ಬರುತ್ತಿದೆ. ಹಾಗಿದ್ರೆ, ಅಮೀರ್ ಖಾನ್ ಮಹಾಭಾರತದಲ್ಲಿ ಪ್ರಭಾಸ್ ಗೆ ನೀಡಲು ಬಯಸಿರುವ ಪಾತ್ರ ಯಾವುದು.? ಮುಂದೆ ಓದಿ....

ಅರ್ಜುನ ಆಗ್ತಾರಾ ಪ್ರಭಾಸ್.?

ಅರ್ಜುನ ಆಗ್ತಾರಾ ಪ್ರಭಾಸ್.?

ಸದ್ಯದ ಮಾಹಿತಿ ಪ್ರಕಾರ, ಬಾಹುಬಲಿ ಖ್ಯಾತಿಯ ಸೂಪರ್ ಸ್ಟಾರ್ ಪ್ರಭಾಸ್ ಗೆ ಅಮೀರ್ ಖಾನ್ ಮಹಾಭಾರತದಲ್ಲಿ ಅರ್ಜುನನ ಪಾತ್ರ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ. ಒಂದು ವೇಳೆ ಪ್ರಭಾಸ್ 'ಮಹಾಭಾರತ'ದಲ್ಲಿ ಅಭಿನಯಿಸಲು ಮನಸ್ಸು ಮಾಡಿದ್ರೆ, ಮಧ್ಯಮ ಪಾಂಡವನಾಗೋದು ಖಚಿತವಂತೆ.

ಅಮೀರ್ ಖಾನ್ ಪಾತ್ರವೇನು.?

ಅಮೀರ್ ಖಾನ್ ಪಾತ್ರವೇನು.?

'ಮಹಾಭಾರತ' ಚಿತ್ರದಲ್ಲಿ ಅಮೀರ್ ಖಾನ್ ದ್ವಿಪಾತ್ರ ನಿರ್ವಹಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಅಮೀರ್ ಗೆ ಕೃಷ್ಣನ ಪಾತ್ರ ತುಂಬ ಇಷ್ಟವಂತೆ. ಅದರ ಜೊತೆ ಕರ್ಣನ ಪಾತ್ರ ಮಾಡಬೇಕು ಎನ್ನುವುದು ಆಸೆ ಕೂಡ. ಹೀಗಾಗಿ, ಇವರೆಡು ಪಾತ್ರಗಳು ಅಮೀರ್ ಅವರೇ ಮಾಡಬಹುದು ಎಂಬ ನಿರೀಕ್ಷೆ.

ಹಿಂದಿ ಚಿತ್ರವನ್ನ ರಿಜೆಕ್ಟ್ ಮಾಡಿರುವ ಪ್ರಭಾಸ್

ಹಿಂದಿ ಚಿತ್ರವನ್ನ ರಿಜೆಕ್ಟ್ ಮಾಡಿರುವ ಪ್ರಭಾಸ್

ಬಾಲಿವುಡ್ ಬಹುದೊಡ್ಡ ನಿರ್ಮಾಪಕ ಕರಣ್ ಜೋಹರ್ ಅವರ ಚಿತ್ರವೊಂದಕ್ಕೆ ಪ್ರಭಾಸ್ ಅವರನ್ನ ಅಪ್ರೋಚ್ ಮಾಡಲಾಗಿತ್ತು. ಆದ್ರೆ, ಸಂಭಾವನೆ ವಿಚಾರದಲ್ಲಿ ಮಾತುಕತೆ ಸರಿಹೋಗದ ಕಾರಣ ಈ ಪ್ರಾಜೆಕ್ಟ್ ನ್ನ ಪ್ರಭಾಸ್ ರಿಜೆಕ್ಟ್ ಮಾಡಿದ್ದಾರಂತೆ. ಹೀಗಿರುವಾಗ, ಪ್ರಭಾಸ್ ಅವರನ್ನ ಅಮೀರ್ ಖಾನ್ ಕರೆತರ್ತಾರಾ.?

ಪ್ರಭಾಸ್ ವರ್ಸಸ್ ಅಮೀರ್ ಖಾನ್

ಪ್ರಭಾಸ್ ವರ್ಸಸ್ ಅಮೀರ್ ಖಾನ್

ಒಂದು ವೇಳೆ ಪ್ರಭಾಸ್ ಈ ಚಿತ್ರವನ್ನ ಒಪ್ಪಿಕೊಂಡಿದ್ದೇ ಆದ್ರೆ, ಅಮೀರ್ ಖಾನ್ ಮತ್ತು ಪ್ರಭಾಸ್ ಎಂಬ ಇಬ್ಬರು ಸೂಪರ್ ಸ್ಟಾರ್ ಗಳು ಈ ಚಿತ್ರವನ್ನ ತುಂಬಾ ಎತ್ತರಕ್ಕೆ ಕರೆದುಕೊಂಡು ಹೋಗ್ತಾರೆ ಎಂಬ ಮಾತುಗಳಿವೆ. ಸದ್ಯ, 'ಸಾಹೋ' ಚಿತ್ರದಲ್ಲಿ ಪ್ರಭಾಸ್ ನಟಿಸುತ್ತಿದ್ದಾರೆ. ಈ ಕಡೆ ಅಮೀರ್ ಖಾನ್ 'ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರವನ್ನ ಮುಗಿಸಿದ್ದಾರೆ.

ಐದು ಭಾಗದಲ್ಲಿ ಮಹಾಭಾರತ

ಐದು ಭಾಗದಲ್ಲಿ ಮಹಾಭಾರತ

'ಮಹಾಭಾರತ' ಚಿತ್ರವನ್ನ ಐದರಿಂದ ಆರು ಭಾಗದಲ್ಲಿ ತಯಾರು ಮಾಡುವ ಯೋಚನೆಯಲ್ಲಿದ್ದಾರೆ ಅಮೀರ್ ಖಾನ್. ಈ ಚಿತ್ರದ ಮೊದಲ ಭಾಗವನ್ನ 'ಸೀಕ್ರೆಟ್ ಸೂಪರ್ ಸ್ಟಾರ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ನಿರ್ದೇಶಕರು ಕೆಲಸ ಮಾಡುವ ಸಾಧ್ಯತೆ ಇದೆ. ಉಳಿದ ಭಾಗದ ಚಿತ್ರಗಳಿಗೆ ಸ್ವತಃ ಅಮೀರ್ ಖಾನ್ ನಿರ್ದೇಶನ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇನ್ನು ಮುಖೇಶ್ ಅಂಬಾನಿ ಬಂಡವಾಳ ಹೂಡಲಿದ್ದಾರಂತೆ.

More from Filmibeat

English summary
As per our sources, Actor Aamir Khan wants southern star & Baahubali star Prabhas to sign for his upcoming period film. There is a high chance that they will share the screen.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X