ಅರೆಹುಚ್ಚನಂತೆ ಬೀದಿಯಲ್ಲಿ ಅಲೆದಾಡಿದ ಸೂಪರ್ ಸ್ಟಾರ್, ಈ ಪರಿಸ್ಥಿತಿಗೆ ಕಾರಣವೇನು ?

ಸೆಲೆಬ್ರಿಟಿಗಳ ಹತ್ತಿರ ಎಲ್ಲವೂ ಇರುತ್ತೆ. ಆದರೆ .. ಬದುಕಲು ಬೇಕಾಗುವ ಮೂಲವಸ್ತುವಾದ ಸಂತೋಷ ಅವರಿಗೆ ಇರಲ್ಲ. ಯಾಕೆಂದರೆ.. ಆ ಸಂತೋಷವನ್ನು ಖ್ಯಾತಿ ಮತ್ತು ಸಾರ್ವಜನಿಕತೆ ಕಸಿದುಕೊಂಡು ಬಿಟ್ಟಿರುತ್ತೆ. ಇನ್ನೂ.. ಕೆಲವೊಮ್ಮೆ ಸೆಲೆಬ್ರಿಟಿ ಫಿಗರ್ ಎಂಬ ಭಾರ ಮಾನಸಿಕ ನೆಮ್ಮದಿಗೆ ಕೊಳ್ಳಿಯನ್ನೂ ಇಡುತ್ತೆ. ಮನೆಯಿಂದ ಒಂಚೂರು ಹೊರ ನಡೆದು ಕಾಲು ಕೆ.ಜಿ ಬದನೇ ಕಾಯಿ ತರುವ ಸಾರ್ವಜನಿಕ ಸ್ವಾತಂತ್ರ್ಯವೂ ಇವರಿಗೆ ಇರುವುದಿಲ್ಲ. ಅಷ್ಟರ ಮಟ್ಟಿಗೆ ಇವರ ಖಾಸಗಿತನಕ್ಕೆ ಧಕ್ಕೆ ಆಗುತ್ತೆ.

ಹೀಗಾಗಿಯೇ ಸೂಪರ್ ಸ್ಟಾರ್ ರಜಿನಿಕಾಂತ್ ಸೇರಿ ಅನೇಕರು ಯಾವುದಾದರೂ ಸಾಧು, ಸನ್ಯಾಸಿಯ ಗೆಟಪ್ಪಿನಲ್ಲಿ ತಮ್ಮ ಪಾಡಿಗೆ ತಾವು ಓಡಾಡುತ್ತಾ, ತಮ್ಮ ಹಳೆಯ ದಿನಗಳನ್ನೇ ಮತ್ತೆ ಮತ್ತೆ ನೆನಪು ಮಾಡಿಕೊಳ್ಳುತ್ತಿರುತ್ತಾರೆ. ಬರಿಗೈ ದಾಸನಂತೆ, ತನಗಿರುವ ಅಂತಸ್ತು, ಐಶ್ವರ್ಯಗಳನ್ನು ಲೆಕ್ಕಕ್ಕೇ ತೆಗೆದುಕೊಳ್ಳದೆ ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕುವ ಪ್ರಯತ್ನ ಮಾಡುತ್ತಾರೆ. ಇದಕ್ಕೆ ಅಮೀರ್ ಖಾನ್ ಮತ್ತೊಂದು ಉದಾಹರಣೆ.

Aamir Khan worth 1900 Cr stunned fans as an unrecognizable caveman on Mumbai streets

ಹೌದು, ತಮ್ಮ ಚಿತ್ರ ಮತ್ತು ಪಾತ್ರಗಳ ಮೂಲಕವೇ ಹೆಸರುವಾಸಿಯಾದವರು ಅಮೀರ್ ಖಾನ್. ತಮ್ಮ ಪ್ರತಿ ಚಿತ್ರಕ್ಕೂ ಅದಕ್ಕೇ ಬೇಕಾದ ತಯಾರಿಯನ್ನೆಲ್ಲ ಮಾಡಿಕೊಂಡೇ ಅಖಾಡಕ್ಕೆ ಇಳಿಯುವ ಅಮೀರ್ ಖಾನ್ ಕೇವಲ ಮಿಸ್ಟರ್ ಪರ್ಫೆಕ್ಷನಿಸ್ಟ್ ಮಾತ್ರ ಅಲ್ಲ ಬಾಲಿವುಡ್‌ನ ಗೇಮ್ ಚೇಂಜರ್ ಕೂಡ ಹೌದು. ಇಂಥಾ ಅಮೀರ್ ಖಾನ್ ಮೊನ್ನೆ ಭಿಕ್ಷುಕನ ವೇಷ ಹಾಕಿಕೊಂಡು ಮುಂಬೈನ ಬೀದಿ ಬೀದಿ ಸುತ್ತಾಡಿದ್ದಾರೆ.

ಹೌದು, ಲಾಲ್ ಸಿಂಗ್ ಚಡ್ಡಾ ಚಿತ್ರದ ಸೋಲಿನಿಂದ ಇನ್ನೂ ಹೊರ ಬಾರದ ಅಮೀರ್ ಖಾನ್ ಮೊನ್ನೆ ಆದಿ ಮಾನವನಂತೆ ಮುಂಬೈನಲ್ಲಿ ಓಡಾಡಿದ್ದಾರೆ. ಕೆದರಿದ ತಲೆ ಕೂದಲು, ಮೈಗೆ ಸುತ್ತಲಾದ ಪ್ರಾಣಿಗಳ ಚರ್ಮದಂತಹ ವಸ್ತು, ಕಾಲಿಗೆ ಬೂಟು ಹಾಕಿಕೊಂಡು, ಮುಂಬೈನ ಜನನಿಬಿಡ ಪ್ರದೇಶದಲ್ಲಿ ಕೈಗಾಡಿಯನ್ನು ತಳ್ಳಿದ್ದಾರೆ. ರಸ್ತೆ ಬದಿ ಅಂಗಡಿಯ ಬಳಿ ತೆರಳಿ ಊಟ ಕೇಳಿದ್ದಾರೆ. ಇನ್ನು ಕೆಲ ಕಡೆ ತರಲೆ ತಮಾಷೆಯನ್ನು ಮಾಡಿದ್ದಾರೆ. ಆದರೆ, ತಮ್ಮ ಕಣ್ಣೆದುರು ಇರುವುದು ಅಮೀರ್ ಖಾನ್ ಎಂದು ಗುರುತಿಸದ ಅನೇಕರು ಮಾನಸಿಕ ಅಸ್ವಸ್ಥ ಎಂದುಕೊಂಡು ಅಮೀರ್ ಖಾನ್ ಅವರಿಂದ ದೂರ ಓಡಿ ಹೋಗಿದ್ದಾರೆ.ಹಿಡಿ ಶಾಪ ಹಾಕಿದ್ದಾರೆ. ಆದಿ ಮಾನವನಂತೆ ಅಮೀರ್ ಖಾನ್ ಮೇಕಪ್ ಮಾಡಿಕೊಳ್ಳುತ್ತಿರುವ ಫೋಟೊಗಳು ವೈರಲ್ ಆದ ನಂತರ ಅಯ್ಯೋ, ನಮ್ಮ ಕಣ್ಣೆದುರು ಸಾಕ್ಷಾತ್ ಅಮೀರ್ ಖಾನ್ ಇದ್ದರೂ ನಾವು ಗುರುತಿಸಲಿಲ್ಲವಲ್ಲಾ ಎಂದು ಪಶ್ಚಾತಾಪ ಪಡುತ್ತಿದ್ದಾರೆ. ಚಡಪಡಿಸುತ್ತಿದ್ದಾರೆ.

ಅಂದ್ಹಾಗೇ ಅಮೀರ್ ಖಾನ್ ಈ ತರಹದ ಪ್ರಯತ್ನ-ಪ್ರಯೋಗಗಳನ್ನು ತಮ್ಮ ಚಿತ್ರಕ್ಕೆ ಮಾಡ್ತಾರೆ. ಹೀಗಾಗಿಯೇ ಇದು ಕೂಡ ಯಾವುದಾದರೂ ಚಿತ್ರಕ್ಕೆ ಸಂಬಂಧಿಸಿದ್ದು ಎನ್ನುವುದು ಅನೇಕರ ಅಭಿಪ್ರಾಯ. ಆದರೆ ಇನ್ನೂ ಕೆಲವರ ಪ್ರಕಾರ ಜಾಹೀರಾತಿಗಾಗಿ ಅಮೀರ್ ಖಾನ್ ಈ ವೇಷವನ್ನು ಹಾಕಿದ್ದಾರೆ. ಇನ್ನು ಅಮೀರ್ ಖಾನ್ ಅವರ ಮಗ ಜುನೈದ್ ಖಾನ್ ಅಭಿನಯದ 'ಲವ್ಯಪಾ' ಚಿತ್ರ ಈ ಫೆಬ್ರವರಿ 7ರಂದು ತೆರೆಗೆ ಬರಲಿದೆ. ಹೀಗಾಗಿ ಮಗನ ಚಿತ್ರವನ್ನು ನೋಡಿ ಅಮೀರ್ ಖಾನ್ ಈ ರೀತಿ ಹುಚ್ಚರಂತೆ ಆಗಿದ್ದಾರೆ ಎಂದು ಕೆಲವರು ಕಾಲೆಳೆಯುತ್ತಿದ್ದಾರೆ. ಸದ್ಯ ಆದಿಮಾನವನಂತೆ ಅಮೀರ್ ಖಾನ್ ಮುಂಬೈನ ಬೀದಿ ಬೀದಿಯಲ್ಲಿ ಸುತ್ತಾಡಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇನ್ನುಳಿದಂತೆ ಅಮೀರ್ ಖಾನ್ ಅಭಿನಯದ ಸಿತಾರೆ ಜಮೀನ್ ಪರ್ ಚಿತ್ರ ಈ ವರ್ಷ ತೆರೆಗೆ ಬರಲಿದೆ.

More from Filmibeat

Read more about: aamir khan viral video bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X