ನಾನು ಅವಳ ತಂದೆಯೂ ಅಲ್ಲ, ಲವ್ವರೂ ಅಲ್ಲ : ಆ ನಟಿಯ ಜೊತೆಗಿನ ಸಂಬಂಧದ ಬಗ್ಗೆ ಕೇಳಿದ್ದಕ್ಕೆ ಆಮಿರ್ ಖಾನ್ ಕಿಡಿ

ಸಾಮಾನ್ಯವಾಗಿ ಮದುವೆಯ ನಂತರ ನಾಯಕಿಯರು ಚಿತ್ರರಂಗದಿಂದ ದೂರವಾಗುತ್ತಾರೆ. ಅದೆಷ್ಟೇ ಎತ್ತರಕ್ಕೆ ಬೆಳೆದಿದ್ದರು, ಎಷ್ಟೇ ಅವಕಾಶಗಳು ಕೈಯಲ್ಲಿದ್ದರು ಕೂಡ, ಮದುವೆಯಾದ ನಂತರ ಹೊಸ ಬದುಕಿನ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದರಲ್ಲಿಯೇ ಮಗ್ನರಾಗಿ ಬಿಡುತ್ತಾರೆ. ಇನ್ನು, ಬಣ್ಣದ ಲೋಕ ಕೂಡ ಅಷ್ಟೇ. ಮದುವೆಯಾದರೆ ನಾಯಕಿಯರಿಗೆ ಕೊಡುವ ಗೌರವವೇ ಬೇರೆ. ಮೊದಲೆಲ್ಲ ನೀವು ಇಲ್ಲದೆ ನಮ್ಮ ಚಿತ್ರವಾಗಲ್ಲ ಎನ್ನುತ್ತಿದ್ದವರೆಲ್ಲ ಆ ನಂತರ ಅದೇ ನಾಯಕಿಗೆ ಅಕ್ಕ-ತಾಯಿಯ ಪಾತ್ರವನ್ನು ನೀಡಲು ಮುಂದಾಗುತ್ತಾರೆ.

ಇನ್ನು ಕೆಲವರು ಪೋಷಕ ನಟಿಯಾಗಿ ಬಡ್ತಿ ಪಡೆಯುತ್ತಾರೆ. ಆದರೆ ನಾಯಕರ ವಿಚಾರದಲ್ಲಿ ಇದು ತದ್ವಿರುದ್ದ. ಅದರಲ್ಲಿಯೂ ಸೂಪರ್ ಸ್ಟಾರ್ ಆಗಿದ್ದರಂತೂ ವಯಸ್ಸು 60 ಅಲ್ಲ 70 ಆದರೂ ಕೂಡ ಅವರಿಗೆ ಹೊಡಿ ಬಡಿ ಕಥೆ ಹೆಣೆಯುತ್ತಾರೆ. ಮಗಳ ವಯಸ್ಸಿನ ಹೀರೋಯಿನ್‌ನ ಕರೆತಂದು ರೊಮ್ಯಾನ್ಸ್ ಮಾಡಲು ಹೇಳುತ್ತಾರೆ. ಕೆಲ ಒಮ್ಮೆ ಈ ವಿಚಾರಕ್ಕೆ ಅನೇಕ ಸ್ಟಾರ್ ನಾಯಕರು ಟ್ರೋಲ್ ಆಗಿದ್ದು ಇದೆ. ನಿಂದನೆಗೆ ಗುರಿಯಾಗಿದ್ದು ಇದೆ. ಉದಾಹರಣೆಗೆ ಆಮಿರ್ ಖಾನ್.

Aamir Khan s Bold Stance on Fatima Sana Shaikh On-Screen Romance Not Her Father Not Her Boyfriend

ಹೌದು.. ಸದ್ಯ ಸಿತಾರೆ ಜಮೀನ್ ಪರ್ ಚಿತ್ರದ ಗೆಲುವಿನ ಸಂಭ್ರಮದಲ್ಲಿರುವ ಆಮಿರ್ ಖಾನ್, 2018ರಲ್ಲಿ ಪರಮ ತೋಪು ಚಿತ್ರವೊಂದನ್ನು ಮಾಡಿದ್ದರು. ಆ ಚಿತ್ರದ ಹೆಸರು 'ಥಗ್ಸ್ ಆಫ್ ಹಿಂದೂಸ್ತಾನ್'.

ಬಾಕ್ಸಾಫೀಸ್ ನಲ್ಲಿ ಮಕಾಡೆ ಮಲಗಿದ ಈ ಚಿತ್ರದಲ್ಲಿ ಫಾತಿಮಾ ಸನಾ ಶೇಖ್ ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದರು. ಈ‌ ಫಾತಿಮಾ ಸನಾ ಶೇಖ್ ಬೇರೆ ಯಾರು ಅಲ್ಲ ಬದಲಿಗೆ ಇದೇ ಆಮಿರ್ ಖಾನ್ ಅಭಿನಯದ ಬ್ಲಾಕ್ ಬಸ್ಟರ್ ಚಿತ್ರ ದಂಗಲ್ ನಲ್ಲಿ ಗೀತಾ ಫೋಗಟ್ ಪಾತ್ರವನ್ನು ನಿರ್ವಹಿಸಿದ್ದರು.

ದಂಗಲ್ ಚಿತ್ರದಲ್ಲಿ ತಂದೆ ಮತ್ತು ಮಗಳ‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಇಬ್ಬರು ಆ ನಂತರ ಥಗ್ಸ್ ಆಪ್ ಹಿಂದೂಸ್ತಾನ್ ಚಿತ್ರದಲ್ಲಿ ಪ್ರಮುಖ ನಾಯಕ-ನಾಯಕಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದರು.

ಆ ಕಾಲಕ್ಕೆ ಈ ವಿಚಾರ ಟ್ರೋಲಿಗರಿಗೆ ಆಹಾರ ಆಗಿತ್ತು. ತಂದೆ ಮತ್ತು ಮಗಳ ಪಾತ್ರವನ್ನು ನಿರ್ವಹಿಸಿ ಈಗ ರೊಮ್ಯಾನ್ಸ್ ಮಾಡಲು ನಾಚಿಕೆಯಾಗಲ್ವಾ ಎಂದು ಅನೇಕರು ಇಬ್ಬರ ವಿರುದ್ಧ ಕಿಡಿ ಕಾರಿದ್ದರು. ಇದು ಸಾಲದು ಎಂಬಂತೆ ಅದಾಗಲೇ ಇಬ್ಬರು ಪತ್ನಿಯರಿಂದ ದೂರವಾದ ಆಮಿರ್ ಖಾನ್, ಫಾತಿಮಾ ಸನಾ ಶೇಖ್ ಅವರ ಪ್ರೇಮ ಜಾಲದಲ್ಲಿ ಸಿಲುಕಿದ್ದಾರೆ, ಈ ಕಾರಣದಿಂದಾಗಿಯೇ ಫಾತಿಮಾಗೆ ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರದಲ್ಲಿ ಅವಕಾಶ ಸಿಕ್ಕಿದೆ ಎಂದು ಒಂದು ವರ್ಗ ಹುಯಿಲೇಬ್ಬಿಸಿತ್ತು. ಆಮಿರ್ ಖಾನ್ ಅವರ ಭುಜದ ಮೇಲೆ ಬಂದೂಕು ಇಟ್ಟು ಫಾತಿಮಾ ಸನಾ ಶೇಖ್ ಅವರ ವಿರುದ್ಧ ಸಮರವನ್ನು ಕೂಡ ಈ ವರ್ಗ ಸಾರಿತ್ತು.

Aamir Khan s Bold Stance on Fatima Sana Shaikh On-Screen Romance Not Her Father Not Her Boyfriend

ಈ ವಿಚಾರದ ಕುರಿತು 7 ವರ್ಷಗಳ ನಂತರ ಆಮಿರ್ ಖಾನ್ ಮಾತನಾಡಿದ್ದಾರೆ. ನಾನು ಆಕೆಯ ಅಪ್ಪನೂ ಅಲ್ಲ ಬಾಯ್ ಫ್ರೆಂಡ್ ಕೂಡ ಅಲ್ಲ ಎಂದು ಕಿಡಿ ಕಾರಿದ್ದಾರೆ.

''The Lallantop''ಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಆಮಿರ್ ಖಾನ್, ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರಕ್ಕೆ ದೀಪಿಕಾ ಪಡುಕೋಣೆ, ಆಲಿಯಾ ಭಟ್, ಶ್ರದ್ಧಾ ಕಪೂರ್ ಸೇರಿದಂತೆ ಬಾಲಿವುಡ್‌ನ ಬಹುತೇಕ ನಾಯಕಿಯರನ್ನು ಸಂಪರ್ಕಿಸಲಾಗಿತ್ತು ಎಂದು ಹೇಳಿದ್ದಾರೆ.

ಯಾರು ಕೂಡ ಆ ಚಿತ್ರ ಮತ್ತು ಆ ಪಾತ್ರ ಮಾಡಲು ಮುಂದಾಗದಿದ್ದಾಗ ಚಿತ್ರದ ನಿರ್ಮಾಪಕ ಆದಿತ್ಯ ಚೋಪ್ರಾ ಮತ್ತು ನಿರ್ದೇಶಕ ವಿಜಯ್ ಕೃಷ್ಣ ಆಚಾರ್ಯ ಫಾತಿಮಾ ಸನಾ ಶೇಖ್ ಅವರನ್ನು ಕರೆತಂದರು, ಫಾತಿಮಾ ಅವರ ಆಡಿಷನ್ ಮಾಡಿದ್ದೇವೆ ಚೆನ್ನಾಗಿ ಅಭಿನಯಿಸಿದ್ದಾರೆ, ಅವರನ್ನೇ ಆಯ್ಕೆ ಮಾಡೋಣ ಎಂದು ಹೇಳಿದರು ಎಂದಿರುವ ಆಮಿರ್ ಖಾನ್ ಆದರೆ ದಂಗಲ್ ನಲ್ಲಿ ನಾವು ತಂದೆ-ಮಗಳ ಪಾತ್ರ ಮಾಡಿರುವುದು ಇವರಿಗೆ ಸಮಸ್ಯೆಯಾಗಿತ್ತು ಎಂದು ಹೇಳಿದ್ದಾರೆ.

ಮುಂದುವರೆದು ದಂಗಲ್‌ನಲ್ಲಿ ತಂದೆ-ಮಗಳ ಪಾತ್ರದಲ್ಲಿ ಅಭಿನಯಿಸಿದ್ದೀರಾ ಹೀಗಾಗಿ ಇಲ್ಲಿ ರೊಮ್ಯಾನ್ಸ್ ಬೇಡ, ಪ್ರೇಕ್ಷಕರು ಇದನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಇಬ್ಬರು ಹೇಳಿದರು, ಆಗ ಇದೆಲ್ಲದರಲ್ಲಿ ನನಗೆ ನಂಬಿಕೆ ಇಲ್ಲ. ನಾನು ಅವಳ ನಿಜವಾದ ತಂದೆ ಅಲ್ಲ, ನಿಜವಾದ ಗೆಳೆಯನಲ್ಲ. ನಾವು ಮಾಡುತ್ತಿರುವುದು ಚಿತ್ರ ಮಾತ್ರ, ಪ್ರೇಕ್ಷಕರು ನಾನೇ ಅವಳ ನಿಜವಾದ ತಂದೆ ಎಂದು ಭಾವಿಸುವಷ್ಟು ಮೂರ್ಖರಲ್ಲ. ನಾವು ಪ್ರೇಕ್ಷಕರನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಿದ್ದೇವೆ ಎಂದು ಹೇಳಿದೆ ಎಂದಿರುವ ಆಮಿರ್ ಖಾನ್, ಅಮಿತಾಬ್ ಬಚ್ಚನ್ ಮತ್ತು ರೇಖಾ ಅವರ ಅನೇಕ ಚಿತ್ರಗಳ ಉದಾಹರಣೆ ನೀಡಿದೆ ಆದರೂ ಕೂಡ ಪ್ರಯೋಜನವಾಗಲಿಲ್ಲ ಎಂದು ಹೇಳಿದ್ದಾರೆ. ಫಾತಿಮಾ ನನ್ನ ಲವ್ವರ್ ಪಾತ್ರ ಮಾಡುತ್ತಿದ್ದ ಹಿನ್ನೆಲೆ ಚಿತ್ರದ ಮೂಲ ಕಥೆ ಆಶಯ ಬದಲಿಸಿ ನಿರಂತರ ಬದಲಾವಣೆಗಳನ್ನು ಮಾಡಲಾಯ್ತು, ಚಿತ್ರದ ಸೋಲಿಗೆ ಇದೇ ಪ್ರಮುಖ ಕಾರಣ ಎಂದು ತಮ್ಮ ಬೇಸರವನ್ನು ಹೊರ ಹಾಕಿದ್ದಾರೆ.

More from Filmibeat

English summary
Aamir Khan addresses the backlash over his romance with Fatima Sana Shaikh in 'Thugs of Hindostan,' explaining why the 'Dangal' pairing was justified. Read his defense
Read more about: aamir khan rumours love
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X