ಬಾಯ್ ಫ್ರೆಂಡ್‌ಗಾಗಿ ಹೇರ್ ಸ್ಟೈಲಿಸ್ಟ್ ಆದ ಆಮೀರ್ ಖಾನ್ ಪುತ್ರಿ

ಬಾಲಿವುಡ್ ಸ್ಟಾರ್ ನಟ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಪುತ್ರಿ ಇರಾ ಖಾನ್ ಬಾಯ್ ಫ್ರೆಂಡ್ ವಿಚಾರಕ್ಕೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಇತ್ತೀಚಿಗಷ್ಟೆ ಆಮೀರ್ ಖಾನ್ ಪುತ್ರಿ ಇರಾ ಖಾನ್ ಪ್ರೀತಿಸುತ್ತಿರುವ ವಿಚಾರವನ್ನು ಬಹಿರಂಗಪಡಿಸಿದ್ದರು.

ಅಂದಹಾಗೆ ಇರಾ ಖಾನ್ ತನ್ನ ಫಿಟ್ನೆಸ್ ಟ್ರೈನರ್ ನೂಪುರ್ ಶಿಖರೆ ಅವರನ್ನು ಪ್ರೀತಿಸುತ್ತಿದ್ದಾರೆ. ತನ್ನ ಬಾಯ್ ಫ್ರೆಂಡ್ ಜೊತೆ ಹೆಚ್ಚಾಗಿ ಕಾಲಕಳೆಯುತ್ತಿರುವ ಇರಾ ಖಾನ್ ಆಗಾಗ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಈಗ ಮತ್ತೊಂದು ಮುದ್ದಾದ ಫೋಟೋವನ್ನು ಹಂಚಿಕೊಂಡಿದ್ದಾರೆ.

ಬಾಯ್ ಫ್ರೆಂಡ್ ನೂಪುರ್‌ಗೆ ಹೇರ್ ಸ್ಟೈಲ್ ಮಾಡುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇಬ್ಬರು ಕನ್ನಡಿ ಮುಂದೆ ಕುಳಿತು ಸೆಲ್ಫಿ ಕ್ಲಿಕ್ಕಿಸಿಕೊಂಡಿರುವ ಫೋಟೋ ಎಲ್ಲಾ ಕಡೆ ಹರಿದಾಡುತ್ತಿದೆ.

Aamir Khans daughter Ira Khan turns hairstylist for her boyfriend Nupur Shikhare

ಇರಾ ಖಾನ್ ಸ್ಟಾರ್ ನಟ ಆಮೀರ್ ಖಾನ್ ಮತ್ತು ಅವರ ಮಾಜಿ ಪತ್ನಿ ರೀನಾ ದತ್ತಾ ಅವರ ಪುತ್ರಿ. ಇರಾ ಸದ್ಯ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದಾರೆ. ಆದರೆ ನಾಯಕಿಯಾಗಿ ಬಾಲಿವುಡ್‌ಗೆ ಎಂಟ್ರಿ ಕೊಡುವ ಬಗ್ಗೆ ಯಾವುದೇ ಪ್ಲಾನ್ ಮಾಡಿಲ್ಲ. ನಿರ್ದೇಶನದ ಕಡೆ ಹೆಚ್ಚು ಒಲವು ಹೊಂದಿರುವ ಇರಾ ಖಾನ್ ಹಿಂದಿ ಸಿನಿಮಾ ಮಾಡುವ ಸಾಧ್ಯತೆ ಇದೆ.

ಫಿಟ್ನೆಸ್ ತರಬೇತುದಾರ ನೂಪುರ್ ಶಿಖರೆ ಪ್ರೀತಿಸುತ್ತಿರುವ ಬಗ್ಗೆ ಇರಾ ಇತ್ತೀಚಿಗಷ್ಟೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿ, 'ನಿನ್ನ ಜೊತೆಗೆ, ನಿನಗಾಗಿ ಜೊತೆಯಾಗಿರುವ ಪ್ರತಿಜ್ಞೆ ಮಾಡುವುದಕ್ಕೆ ಬಹಳ ಹೆಮ್ಮೆ ಆಗುತ್ತಿದೆ' ಎಂದು ಬರೆದುಕೊಂಡಿದ್ದರು. ಜೊತೆಗೆ ನನ್ನ ಕನಸಿನ ಹುಡುಗ, ನನ್ನ ವ್ಯಾಲೆಂಟೈನ್ ಹ್ಯಾಷ್ ಟ್ಯಾಗ್ ಸಹ ಬಳಸಿದ್ದರು.

Recommended Video

ಉಮಾಪತಿ ಗಿಫ್ಟ್,ತರುಣ್ ಗೆ ಕ್ರೆಡಿಟ್ ಅಂತಿದ್ದಾರೆ ರಾಬರ್ಟ್ ನೋಡಿದ ಪ್ರೇಕ್ಷಕರು | Roberrt | Filmibeat Kannada

More from Filmibeat

English summary
Bollywood Actor Aamir Khan's daughter Ira Khan turns hairstylist for her boyfriend Nupur Shikhare.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X