For Quick Alerts
  ALLOW NOTIFICATIONS  
  For Daily Alerts

  ರೀನಾ ದತ್ತ ಬಳಿಕ ಕಿರಣ್ ರಾವ್; ತಲಾ 16 ವರ್ಷಗಳ ಆಮೀರ್ ಖಾನ್ ಮ್ಯಾರೇಜ್ ಸ್ಟೋರಿ

  |

  ಬಾಲಿವುಡ್ ಸ್ಟಾರ್ ನಟ ಆಮೀರ್ ಖಾನ್ 2ನೇ ಪತ್ನಿ ಕಿರಣ್ ರಾವ್ ಅವರಿಂದನೂ ವಿಚ್ಛೇದನ ಪಡೆದು ದೂರ ಆಗಿದ್ದಾರೆ. ಆಮೀರ್ ಮತ್ತು ಕಿರಣ್ ರಾವ್ ವಿಚ್ಛೇದನ ಸುದ್ದಿ ಅಭಿಮಾನಿಗಳಿಗೆ, ಬಾಲಿವುಡ್ ಗೆ ಶಾಕ್ ನೀಡಿದೆ. ಇಬ್ಬರು 16 ವರ್ಷಗಳ ದಾಂಪತ್ಯ ಜೀವನಕ್ಕೆ ಪುಲ್ ಸ್ಟಾಪ್ ಇಟ್ಟು ಪ್ರತ್ಯೇಕವಾಗಿ ಜೀವನ ನಡೆಸಲು ನಿರ್ಧರಿಸಿದ್ದಾರೆ.

  ತಮ್ಮ ವಿಚ್ಛೇದನದ ಬಗ್ಗೆ ಆಮೀರ್ ಮತ್ತು ಕಿರಣ್ ರಾವ್ ಜಂಟಿ ಹೇಳಿಕೆ ಬಿಡುಗಡೆ ಮಾಡುವ ಮೂಲಕ ಬಹಿರಂಗ ಪಡಿಸಿದರು. ಹೊಸ ಜೀವನದ ಪ್ರಾರಂಭ ಎಂದು ಇಬ್ಬರು ಬರೆದುಕೊಂಡಿದ್ದಾರೆ. 2005ರಲ್ಲಿ ಕಿರಣ್ ರಾವ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಆಮೀರ್ ಖಾನ್ 16 ವರ್ಷ ಸಂಸಾರ ನಡೆಸಿದ್ದಾರೆ. ಅಚ್ಚರಿಕರ ಸಂಗತಿ ಎಂದರೆ ಆಮೀರ್ ಖಾನ್ ಮೊದಲ ಪತ್ನಿ ರೀನಾ ದತ್ತ ಜೊತೆಯೂ 16 ವರ್ಷಗಳು ಸಾಂಸಾರಿಕ ಜೀವನ ನಡೆಸಿದ್ದರು. ತಲಾ 16 ವರ್ಷಗಳ ವೈವಾಹಿಕ ಜೀವನ ಆಮೀರ್ ಖಾನ್ ಅವರದ್ದು. ಮುಂದೆ ಓದಿ..

  ರೀನಾ ದತ್ತ ಜೊತೆ ಪ್ರೀತಿ ಪ್ರಾರಂಭವಾಗಿದ್ದು ಹೇಗೆ?

  ರೀನಾ ದತ್ತ ಜೊತೆ ಪ್ರೀತಿ ಪ್ರಾರಂಭವಾಗಿದ್ದು ಹೇಗೆ?

  ಆಮೀರ್ ಖಾನ್ ಮತ್ತು ರೀನಾ ದತ್ತ ಇಬ್ಬರ ಪ್ರೀತಿ ಯಾವ ಸಿನಿಮಾ ಕಥೆಗೂ ಕಮ್ಮಿ ಇಲ್ಲ. ಇಬ್ಬರೂ ನೆರೆಹೊರೆಯವರು. ಇಬ್ಬರ ಪ್ರೀತಿ ಪ್ರಾರಂಭವಾಗಿದ್ದೇ ಕಿಟಕಿಯಿಂದ. ಕಿಟಕಿಯಿಂದ ಗಂಟೆಗಳ ಕಾಲ ಒಬ್ಬರನ್ನೊಬ್ಬರು ನೋಡುತ್ತಿದ್ದರು. ಬಳಿಕ ಒಂದು ದಿನ ಆಮೀರ್ ಖಾನ್ ಧೈರ್ಯ ಮಾಡಿ ತನ್ನ ಪ್ರೀತಿಯನ್ನು ರೀನಾ ಬಳಿ ಹೇಳಿದರು. ಆದರೆ ರೀನಾ ದತ್ತ ಆಮೀರ್ ಖಾನ್ ಪ್ರೀತಿಯನ್ನು ತಿರಸ್ಕರಿಸಿದರು.

  ಆಮೀರ್ ಖಾನ್ ಪ್ರೀತಿ ಒಪ್ಪಿಕೊಂಡ ರೀನಾ

  ಆಮೀರ್ ಖಾನ್ ಪ್ರೀತಿ ಒಪ್ಪಿಕೊಂಡ ರೀನಾ

  ಆದರೆ ಸುಲಭಕ್ಕೆ ಸೋಲುಪ್ಪಿಕೊಳ್ಳುವ ವ್ಯಕ್ತಿ ಆಮೀರ್ ಅಲ್ಲ. ರೀನಾ ಕಡೆಯಿಂದ ಖಂಡಿತ ನೋ ಎನ್ನುವ ಉತ್ತರ ಬರಲ್ಲ ಎನ್ನುವ ಬರವಸೆಯಿಂದ ಕಾದರು. ಎರಡು ದಿನಗಳ ಬಳಿಕ ರೀನಾ, ಆಮೀರ್ ಖಾನ್ ನನ್ನು ಭೇಟಿಯಾಗಿ ಅದೇ ಭಾವನೆ ಇರುವುದಾಗಿ ಒಪ್ಪಿಕೊಂಡರು. ಬಳಿಕ ಕಿಟಕಿಯನ್ನು ತುಂಬಾ ಮಿಸ್ ಮಾಡಿಕೊಂಡೆ ಎಂದು ಆಮೀರ್ ಖಾನ್ ಸಂದರ್ಶನವೊಂದರಲ್ಲಿ ಬಹಿರಂಗ ಪಡಿಸಿದ್ದರು.

  ರಕ್ತದಲ್ಲಿ ಪತ್ರ ಬರೆದಿದ್ದ ಆಮೀರ್

  ರಕ್ತದಲ್ಲಿ ಪತ್ರ ಬರೆದಿದ್ದ ಆಮೀರ್

  ಆಮೀರ್ ಖಾನ್ ಪ್ರೀತಿಯನ್ನು ರೀನಾ ದತ್ತ ಒಪ್ಪಿಕೊಂಡ ಬಳಿಕ, ಆಮೀರ್ ಖಾನ್ ಒಮ್ಮೆ ರಕ್ತದಲ್ಲಿ ಪತ್ರ ಬರೆದಿದ್ದರು. ತನ್ನ ಭಾವನೆಗಳನ್ನು ರಕ್ತದಲ್ಲಿ ಬರೆದು ಹೇಳಿದರೆ ಉತ್ತಮ ಎಂದು ನಿರ್ಧರಿಸಿ ರಕ್ತದಲ್ಲಿ ಪತ್ರ ಬರೆದಿದ್ದರು. ಆದರೆ ಆ ಪತ್ರ ನೋಡಿ ರೀನಾ ಇಂಪ್ರೆಸ್ ಆಗುವ ಬದಲು ಕಂಡಾಮಂಡಲ ಆಗಿದ್ದರು. ಮತ್ತೆ ಇಂಥ ಸ್ಟಂಟ್ ಗಳನ್ನು ಮಾಡಿದಂತೆ ಎಚ್ಚರಿಕೆ ನೀಡಿದ್ದರು. ಪ್ರೀತಿಯನ್ನು ಸಾಭೀತು ಮಾಡಲು ಇದು ಸರಿಯಾದ ಮಾರ್ಗವಲ್ಲ ಎನ್ನುವುದು ಆಮೀರ್ ಖಾನ್ ಗೆ ಬಳಿಕ ಅರ್ಥವಾಗಿತ್ತು.

  ಏಪ್ರಿಲ್ 18, 1986ರಲ್ಲಿ ಮದುವೆ

  ಏಪ್ರಿಲ್ 18, 1986ರಲ್ಲಿ ಮದುವೆ

  ಆಮೀರ್ ಖಾನ್ ಮತ್ತು ರೀನಾ ದತ್ತ ಇಬ್ಬರು 1986ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಆಮೀರ್ ಮತ್ತು ರೀನಾ ದಾಂಪತ್ಯಕ್ಕೆ ಇಬ್ಬರು ಮಕ್ಕಲು ಜನಿಸಿದು. ಮಗ ಜುನೈದ್ ಖಾನ್ ಮತ್ತು ಮಗಳು ಐರಾ ಖಾನ್.

  'ಲಗಾನ್' ನಿರ್ಮಾಣ ಮಾಡಿದ್ದ ರೀನಾ-ಆಮೀರ್

  'ಲಗಾನ್' ನಿರ್ಮಾಣ ಮಾಡಿದ್ದ ರೀನಾ-ಆಮೀರ್

  ಆಮೀರ್ ಖಾನ್ ನಟನೆಯ ಕಯಾಮತ್ ಸೇ ಕಯಾಮತ್ ತಕ್ ಸಿನಿಮಾ ಬಳಿಕ ರೀನಾ ದತ್ತ ಕೂಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಬಳಿಕ ಲಗಾನ್ ಸಿನಿಮಾವನ್ನು ನಿರ್ಮಾಣ ಮಾಡಿದರು. ಸಂದರ್ಶನದಲ್ಲಿ ಮಾತನಾಡಿದ್ದ ಆಮೀರ್ ಖಾನ್, ಲಗಾನ್ ಸಿನಿಮಾ ವೇಳೆ ರೀನಾ ದತ್ತ ಹೇಗೆ ಸಹಾಯ ಮಾಡಿದರು ಎಂದು ರಿವೀಲ್ ಮಾಡಿದ್ದರು. ಆಮೀರ್ ಖಾನ್ ಕನಸು ನನಸಾಗಲು ರೀನಾ ಕಾರಣ ಎಂದಿದ್ದರು.

  2002ರಲ್ಲಿ ರೀನಾ-ಆಮೀರ್ ವಿಚ್ಛೇದನ

  2002ರಲ್ಲಿ ರೀನಾ-ಆಮೀರ್ ವಿಚ್ಛೇದನ

  ಆಮೀರ್ ಖಾನ್ ಮತ್ತು ರೀನಾ ದತ್ತ ಇಬ್ಬರು 2002ರಲ್ಲಿ ವಿಚ್ಛೇದನ ಪಡೆದು ದೂರ ಆದರು. ಲಗಾನ್ ಸಿನಿಮಾ 2001ರಲ್ಲಿ ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಸಿನಿಮಾ ಸಕ್ಸಸ್ ನ ಸಂಭ್ರಮಾತರಣೆ ಮಾಡಿ ವರ್ಷದಲ್ಲೇ ಪತ್ನಿಯಿಂದ ಆಮೀರ್ ದೂರ ಆದರು. ಬಳಿಕ ಆಮೀರ್ ಜೀವನಕ್ಕೆ ಕಿರಣ್ ರಾವ್ ಎಂಟ್ರಿ ಕೊಟ್ಟರು.

  ಅಸಲಿಗೆ Dvitva ಪದದ ಅರ್ಥ ಹೇಳಿದ ನಿರ್ದೇಶಕ | Filmibeat Kannada
  2005ರಲ್ಲಿ ಕಿರಣ್ ರಾವ್ ಜೊತೆ ಮದುವೆ

  2005ರಲ್ಲಿ ಕಿರಣ್ ರಾವ್ ಜೊತೆ ಮದುವೆ

  ಲಗಾನ್ ಸಿನಿಮಾ ಸೆಟ್ ನಲ್ಲಿ ಭೇಟಿಯಾಗಿದ್ದ ಆಮೀರ್ ಖಾನ್ ಮತ್ತು ಕಿರಣ್ ರಾವ್ ನಡುವೆ ಮೊದಲು ಯಾವದೇ ಸ್ನೇಹ ಬಾಂಧವ್ಯ ಇರಲಿಲ್ಲ. ಮೊದಲ ಪತ್ನಿಗೆ ವಿಚ್ಛೇದನ ನೀಡಿದ ಬಳಿಕ ಕಿರಣ್ ಜೊತೆ ಪ್ರೀತಿಯಲ್ಲಿ ಬಿದ್ದ ಆಮೀರ್, 2005ರಲ್ಲಿ ಕಿರಣ್ ರಾವ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 2011ರಲ್ಲಿ ಬಾಡಿಗೆ ತಾಯಿ ಮೂಲಕ ಮಗ ಅಜಾದ್ ರಾವ್ ಖಾನ್ ರನ್ನು ಸ್ವಾಗತಿಸಿದರು. 16 ವರ್ಷಗಳ ಸುಂದರ ದಾಂಪತ್ಯ ನಡೆಸಿದ ಆಮೀರ್ ಮತ್ತು ಕಿರಣ್ ರಾವ್ ಈಗ ವಿಚ್ಛೇದನ ಪಡೆದು ದೂರ ಆಗಿದ್ದಾರೆ.

  English summary
  Actor Aamir Khan's marriage with Kiran Rao and Reena Dutta both lasted 16 years.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X