ಅಮೀರ್ ಖಾನ್ ಜೊತೆ ಲವ್ವಲ್ಲಿ ಬಿದ್ದ ಬೆಂಗಳೂರು ಬೆಡಗಿಯ ಹೆಸರು ಏನು ? ಹಿನ್ನೆಲೆ ಏನು ?
ಚಿತ್ರರಂಗದಲ್ಲಿನ ಅನೇಕ ತಾರೆಯರು ಒಬ್ಬರ ನಂತರ ಒಬ್ಬರನ್ನು ಮದುವೆಯಾಗುವುದು ಆ ನಂತರ ಅವರನ್ನು ಬಿಟ್ಟು ನಡೆಯೋದು ಹೊಸದೇನೂ ಅಲ್ಲ. ಇವರ ಪಾಲಿಗೆ ಇದು ಶರ್ಟ್ ಬದಲಿಸುವಷ್ಟರ ಮಟ್ಟಿಗೆ ಸಾಮಾನ್ಯವಾಗಿಬಿಟ್ಟಿದೆ. ಇದಕ್ಕೆ ಜ್ವಲಂತ ಉದಾಹರಣೆಯಂತೆ ಇರುವ ಅಮೀರ್ ಖಾನ್, ಮೂರನೇ ಮದುವೆಗೆ ರೆಡಿಯಾಗಿದ್ದಾರೆ ಎನ್ನುವ ಸುದ್ದಿ ಮೊನ್ನೆಯಿಂದ ಕೇಳಿ ಬರುತ್ತಿದೆ. ಚರ್ಚೆಗೆ ಕಾರಣವಾಗಿದೆ.
ಯಾಕೆಂದರೆ, ಅಮೀರ್ ಖಾನ್‌ಗೆ ಈಗ 59ರ ಹರೆಯ. ಈಗಾಗಲೇ ರೀನಾ ದತ್ತ ಜೊತೆ ಹದಿನಾರು ವರ್ಷ ಮತ್ತು ಕಿರಣ್ ರಾವ್ ಅವರ ಜೊತೆ ಕೂಡ ಹದಿನಾರು ವರ್ಷ ಸಂಸಾರದ ಸುಖ ದುಃಖಗಳನ್ನು ಅಮೀರ್ ಖಾನ್ ಅನುಭವಿಸಿದ್ದಾರೆ. ಇನ್ನು ಮೊದಲ ಪತ್ನಿ ರೀನಾ ಅವರಿಂದ ಜುನೈದ್ ಮತ್ತು ಇರಾ ಖಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಎದೆಯೆತ್ತರಕ್ಕೆ ಬೆಳೆದಿದ್ದಾರೆ. ಆ ಪೈಕಿ ಜುನೈದ್ ತಂದೆಯ ಹೆಜ್ಜೆಯ ಜಾಡನ್ನು ಹಿಡಿದು ಚಿತ್ರರಂಗಕ್ಕೆ ಬಂದಿದ್ದಾರೆ. ಇನ್ನು ಇರಾ ಮದುವೆಯಾಗಿ ಮನೆ ಗಂಡ ಎಂದು ನೆಮ್ಮದಿಯಿಂದ ಇದ್ದಾರೆ. ಇನ್ನು ಕಿರಣ್ ರಾವ್ ಅವರಿಂದ ಆಜಾದ್ ರಾವ್ ಖಾನ್ ಎಂಬ ಮಗ ಅಮೀರ್ ಖಾನ್‌ಗೆ ಇದ್ದಾನೆ. ಹೀಗಿರುವಾಗ ಅಮೀರ್ ಖಾನ್‌ಗೆ ಮೂರನೇ ಮದುವೆ ಎಲ್ಲ ಬೇಕಾ ? ಎಂಬ ತಕರಾರು ಅನೇಕರದ್ದು.

ಇನ್ನು,ಇದೆಲ್ಲದಕ್ಕೆ ಪೂರಕವಾಗಿ ಅಮೀರ್ ಖಾನ್ ಈ ಬಾರಿ ಮನ ಸೋತಿರುವುದು ಬೆಂಗಳೂರಿನ ಚೆಲುವೆಗೆ ಎನ್ನುವ ವರದಿಯನ್ನು ಫಿಲ್ಮ್‌ಫೇರ್ ಪ್ರಕಟಿಸಿದೆ. ತೀರಾ ಇತ್ತೀಚೆಗೆ ತಮ್ಮ ಹೊಸ ಪ್ರಿಯತಮೆಯನ್ನು ತನ್ನ ಇಬ್ಬರು ಮಾಜಿ ಪತ್ನಿಯರಿಗೆ ಮತ್ತು ತಮ್ಮ ಮೂವರು ಮಕ್ಕಳಿಗೆ ಪರಿಚಯಿಸಿದ್ದಾರೆ, ಎಲ್ಲರೂ ಜೊತೆಯಲ್ಲಿಯೇ ಕುಳಿತು ಭರ್ಜರಿ ಭೋಜನವನ್ನು ಮಾಡಿದ್ದಾರೆ ಎಂದು ಫಿಲ್ಮ್ ಫೇರ್ ಹೇಳಿದೆ. ಇದರ ನಡುವೆ ಈಗ ಪಿಂಕ್ ವಿಲ್ಲಾ ಆ ಬೆಂಗಳೂರಿನ ಚೆಲುವೆಯ ಹೆಸರನ್ನು ಹೆಕ್ಕಿ ತೆಗೆದಿದೆ.
ಹೌದು, ಪಿಂಕ್ ವಿಲ್ಲಾ ವರದಿಯ ಪ್ರಕಾರ ಅಮೀರ್ ಖಾನ್ ಬೆಂಗಳೂರಿನ ಗೌರಿ ಎಂಬುವರ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ವಿಶೇಷ ಅಂದರೆ ಗೌರಿ ಮತ್ತು ಬಾಲಿವುಡ್ ನಡುವೆ ಯಾವುದೇ ನಂಟಿಲ್ಲ. ಕೇವಲ ಬಾಲಿವುಡ್ ಮಾತ್ರ ಅಲ್ಲ ಬೇರೆ ಯಾವ ಚಿತ್ರರಂಗದಕ್ಕೆ ಗೌರಿ ಸಂಬಂಧಿಸಿದವರು ಕೂಡ ಅಲ್ಲ. ಆದರೂ. ಅಮೀರ್ ಖಾನ್ ಮತ್ತು ಗೌರಿಯ ನಡುವೆ ಪ್ರೇಮಾಂಕುರವಾಗಿದೆ. ಹೀಗಾಗಿಯೇ ಇದ್ಹೇಗೆ ಸಾಧ್ಯ ಎಂದು ಯೋಚನೆಯನ್ನು ಮಾಡುತ್ತಿರುವ ಅನೇಕರು ಗೌರಿ ಮತ್ತು ಅಮೀರ್ ಖಾನ್ ಮೊದಲು ಭೇಟಿಯಾಗಿದ್ದು ಎಲ್ಲಿ ಮತ್ತು ಹೇಗೆ ಎನ್ನುವ ವಿಚಾರವನ್ನು ಪತ್ತೆ ಹಚ್ಚಲು ಮುಂದಾಗಿದ್ದಾರೆ. ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ಅಮೀರ್ ಖಾನ್ ಪ್ರತಿಕ್ರಿಯೆಯನ್ನು ಪಡೆಯಲು ಪಿಂಕ್ ವಿಲ್ಲಾ ಅಮೀರ್ ಖಾನ್ ಅವರ ಮ್ಯಾನೇಜರ್ ಅವರನ್ನು ಸಂಪರ್ಕಿಸಿದೆ. ಆದರೆ ಅಲ್ಲಿಂದ ಯಾವ ಮಾಹಿತಿ ಕೂಡ ಲಭ್ಯವಾಗಿಲ್ಲ. ಇನ್ನು ಸದ್ಯಕ್ಕೆ ಅಂತೆ-ಕಂತೆಯ ಸಂತೆಯಲ್ಲಿ ಕೇಳಿ ಬರುತ್ತಿರುವ ಸುದ್ದಿಗಳ ಪ್ರಕಾರ ಅಮೀರ್ ಖಾನ್ ಮತ್ತು ಗೌರಿ ಅವರ ಮದುವೆ ಬೆಂಗಳೂರಿನಲ್ಲಿಯೇ ನಡೆಯುವ ಸಾಧ್ಯತೆ ಇದೆ.
ಅಂದ್ಹಾಗೇಈ ಹಿಂದೆ ಅಮೀರ್ ಖಾನ್ ಹೆಸರು ಹಿಂದೆ ದಂಗಲ್ ಚಿತ್ರದ ನಾಯಕಿ ಫಾತಿಮಾ ಸನಾ ಶೇಖ್ ಜೊತೆ ಥಳುಕು ಹಾಕಿಕೊಂಡಿತ್ತು. ಕಿರಣ್ ರಾವ್ ಅವರಿಂದ ಅಮೀರ್ ದೂರವಾಗಲು ಇದೇ ಕಾರಣವೆಂದು ಕೂಡ ಹೇಳಲಾಗಿತ್ತು. ಹೀಗಾಗಿಯೇ ಫಾತಿಮಾ ಸನಾ ಶೇಖ್ ಅವರ ಜೊತೆ ಅಮೀರ್ ಮದುವೆಯಾಗಬಹುದು ಎಂದು ಅನೇಕರು ಅಂದುಕೊಂಡಿದ್ದರು. ಆದರೆ, ಅಮೀರ್ ಖಾನ್ ಮದುವೆಯಾಗಲು ಸಿದ್ಧವಾಗಿರುವುದು ಫಾತಿಮಾ ಸನಾ ಶೇಖ್ ಅವರ ಜೊತೆ ಅಲ್ಲ ಬದಲಿಗೆ ಗೌರಿ ಅವರ ಜೊತೆ ಎನ್ನುವ ವಿಚಾರ ಈಹ ಜಗಜ್ಜಾಹೀರಾಗಿದೆ.


Click it and Unblock the Notifications











