ಕಳ್ಳತನದಲ್ಲಿ ಪರ್ಫೆಕ್ಷನಿಸ್ಟ್ , ಕಥೆ ಕದ್ದು ಮತ್ತೆ ಸಿಕ್ಕಿ ಹಾಕಿಕೊಂಡ ಆಮಿರ್ ಖಾನ್..!

ತಮ್ಮ ಚಿತ್ರ ಮತ್ತು ಪಾತ್ರಗಳ ಮೂಲಕವೇ ಹೆಸರುವಾಸಿಯಾದವರು ಅಮೀರ್ ಖಾನ್.ತಮ್ಮ ಪ್ರತಿ ಚಿತ್ರಕ್ಕೂ ಅದಕ್ಕೇ ಬೇಕಾದ ತಯಾರಿಯನ್ನೆಲ್ಲ ಮಾಡಿಕೊಂಡೇ ಅಖಾಡಕ್ಕೆ ಇಳಿಯುವ ಆಮಿರ್ ಖಾನ್ ಕೇವಲ ಮಿಸ್ಟರ್ ಪರ್ಫೆಕ್ಷನಿಸ್ಟ್ ಮಾತ್ರ ಅಲ್ಲ ಬಾಲಿವುಡ್‌ನ ಗೇಮ್ ಚೇಂಜರ್ ಕೂಡ ಹೌದು. ಬಹುಶಃ ತಮ್ಮ ಪಾಡಿಗೆ ತಾವೂ ಇದ್ದು,ಕೇವಲ ಒಂದು ಚಿತ್ರದ ಮೂಲಕ ಸುದ್ದಿಯಾಗುವ ಕಲೆ ಆಮಿರ್ ಖಾನ್‌ಗಷ್ಟೇ ಗೊತ್ತು.

ಯಾಕೆಂದರೆ, ಬಾಲಿವುಡ್ ಒಂದು ಸಿದ್ಧ ಮಾದರಿಯ ಹಿಂದೆ ಬಿದ್ದಾಗ ಭಿನ್ನವಾದ ಹಾದಿಯನ್ನು ತುಳಿದವರು ಅಮೀರ್ ಖಾನ್. ಕೇವಲ ಕಮರ್ಷಿಯಲ್ ಚಿತ್ರಗಳನ್ನಷ್ಟೇ ಮಾಡದೇ ಹತ್ತು ಹಲವು ಪ್ರಯತ್ನ ಮತ್ತು ಪ್ರಯೋಗಗಳನ್ನು ಮಾಡಿದರು. ಇಂಥಾ ಆಮಿರ್ ಖಾನ್ ಸದ್ಯ ಸಿತಾರೆ ಜಮೀನ್ ಪರ್ ಎಂಬ ಚಿತ್ರವೊಂದನ್ನು ಮಾಡಿದ್ದಾರೆ. ಚಿತ್ರದ ಬಿಡುಗಡೆಗೆ ದಿನಾಂಕವನ್ನು ಕೂಡ ನಿಗದಿ ಮಾಡಿ ಇಂದು ಚಿತ್ರದ ಟ್ರೇಲರ್‌ನ್ನು ಕೂಡ ಬಿಡುಗಡೆ ಮಾಡಿದ್ದಾರೆ.

Aamir Khan s Sitaare Zameen Par Sparks Copycat Controversy with Champions

ಆದರೆ ಇದೇ ವೇಳೆ ಸಿತಾರೆ ಜಮೀನ್ ಪರ್ ಚಿತ್ರದ ವಿರುದ್ದ ಅಪಸ್ವರ ಎದ್ದಿದೆ. ಬಹಿಷ್ಕಾರದ ಕೂಗಿನ ನಡುವೆ ಸಿತಾರೆ ಜಮೀನ್ ಪರ ಚಿತ್ರದ ವಿರುದ್ಧ ಕೃತಿಚೌರ್ಯದ ಆರೋಪವನ್ನು ಕೂಡ ಮಾಡಲಾಗಿದೆ.

ಹೌದು, ಹೆಚ್ಚೇನು ಇಲ್ಲ ಎರಡು ವರ್ಷದ ಹಿಂದೆ ಅಂದರೆ 2023ರಲ್ಲಿ ಹಾಲಿವುಡ್‌ನಲ್ಲಿ ಒಂದು ಚಿತ್ರ ತೆರೆಗೆ ಬಂದಿತ್ತು. ಆ ಚಿತ್ರದ ಹೆಸರು ಚಾಂಪಿಯನ್ಸ್. ಇದೇ ಚಿತ್ರದ ಯಥಾವತ್ತು ನಕಲು ಸಿತಾರೆ ಜಮೀನ್ ಪರ್ ಎನ್ನುವುದು ಸದ್ಯಕ್ಕೆ ನಡೆಯುತ್ತಿರುವ ಚರ್ಚೆ. ಯಾಕೆಂದರೆ.. ಚಾಂಪಿಯನ್ಸ್ ಚಿತ್ರದ ಕಥಾಹಂದರ ಮತ್ತು ಸಿತಾರೆ ಜಮೀನ್ ಪರ್ ಚಿತ್ರದ ಕಥಾಹಂದರ ಎರಡು ಒಂದೇ.

ಅಲ್ಲಿಯೂ ಕೂಡ ವುಡಿ ಹ್ಯಾರೆಲ್ಸನ್ ವಿಶೇಷ ಚೇತನರ ಬಾಸ್ಕೆಟ್ ಬಾಲ್‌ ತಂಡಕ್ಕೆ ತರಬೇತಿಯನ್ನು ನೀಡುತ್ತಾರೆ. ಇದೇ ಕೆಲಸವನ್ನು ಸಿತಾರೆ ಜಮೀನ್ ಪರ್ ಚಿತ್ರದಲ್ಲಿ ಆಮಿರ್ ಖಾನ್ ಮಾಡಿದ್ದಾರೆ. ಈ ಎರಡು ಚಿತ್ರದ ಟ್ರೇಲರ್‌ಗಳನ್ನು ನೋಡಿದರೆ ಚಾಂಪಿಯನ್ಸ್ ಚಿತ್ರದ ನಕಲು ಈ ಸಿತಾರೆ ಜಮೀನ್ ಪರ ಎನ್ನುವುದು ಸ್ಪಷ್ಟವಾಗುತ್ತೆ. ಫ್ರೇಮ್ ಬೈ ಫ್ರೇಮ್ ಆಮಿರ್ ಖಾನ್ ಇಲ್ಲಿ ಚಾಂಪಿಯನ್ಸ್ ಚಿತ್ರದ ಕಾಪಿ ಮಾಡಿದ್ಧಾರೆ ಎನ್ನುವುದು ಗೊತ್ತಾಗುತ್ತೆ.

ಹೀಗಾಗಿಯೇ ಕೆರಳಿರುವ ಅನೇಕರು ಸದ್ಯ ಆಮಿರ್ ಖಾನ್ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಕೆಂಡ ಕಾರುತ್ತಿದ್ದಾರೆ. ರಿಮೇಕ್ ಸಂಪ್ರದಾಯವೇ ನಾಶವಾಗಿರುವ ಈ ಸಮಯದಲ್ಲಿ ರಿಮೇಕ್ ಮಾಡಲು ನಾಚಿಕೆಯಾಗಲ್ವಾ ಎನ್ನುವ ಪ್ರಶ್ನೆಯನ್ನು ಅನೇಕರು ಕೇಳುತ್ತಿದ್ದಾರೆ.

ಇನ್ನು ಆಮಿರ್ ಖಾನ್ ಅಭಿನಯದ ಕೊನೆಯ ಚಿತ್ರ ಲಾಲ್ ಸಿಂಗ್ ಚಡ್ಡಾ ಹಾಲಿವುಡ್‌ನ ಫಾರೆಸ್ಟ್ ಗಂಪ್ ಚಿತ್ರದ ರಿಮೇಕ್ ಆಗಿತ್ತು. ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿತ್ತು. ಆದರೂ ಕೂಡ.. ಆಮಿರ್ ಖಾನ್ ಪಾಠ ಕಲಿತಂತೆ ಇಲ್ಲ. ಮತ್ತೊಮ್ಮೆ ರಿಮೇಕ್ ಮಾಡುವ ಧೈರ್ಯವನ್ನು ಮಾಡಿದ್ದಾರೆ. ಇದು ಈಗ ಹಲವರ ಅಚ್ಚರಿಗೆ ಕಾರಣವಾಗಿದೆ.

Take a Poll

ಅಂದ್ಹಾಗೇ ಚಾಂಪಿಯನ್ಸ್ ಚಿತ್ರದ ಕಥೆ ಹಾಲಿವುಡ್‌ನವರು ಬರೆದಿದ್ದಲ್ಲ. ಅವರ ಕೃತಿಯೂ ಅಲ್ಲ. ಬದಲಿಗೆ ಹಾಲಿವುಡ್‌ನವರು ಕೂಡ ಚಾಂಪಿಯನ್ಸ್ ಚಿತ್ರವನ್ನು ರಿಮೇಕ್ ಮಾಡಿದ್ದರು. ಸ್ಪ್ಯಾನಿಷ್‌ನ ಕ್ಯಾಂಪಿಯೋನ್ಸ್ ಚಿತ್ರದ ರಿಮೇಕ್‌ನ್ನು ಹಾಲಿವುಡ್‌ನವರು ಚಾಂಪಿಯನ್ಸ್ ಹೆಸರಿನಲ್ಲಿ ಮಾಡಿದ್ದರು.

ವ್ಯತ್ಯಾಸ ಅಂದರೆ ಹಾಲಿವುಡ್‌ನವರು ಹೇಳಿ ಮಾಡಿದ್ದರು. ಆದರೆ ಆಮಿರ್ ಖಾನ್ ನಮ್ಮದು ಕಳ್ಳ ಮಾಲು ಎಂದು ನೇರವಾಗಿ ಹೇಳದೇ ಮರೆಮಾಚಿ ಫಾರಿನ್‌ನಲ್ಲಿ ಬೆಳೆಸಿದ ಗಿಡವನ್ನೇ ಕದ್ದು ಭಾರತಕ್ಕೆ ತಂದಿದ್ದಾರೆ.

ತಮ್ಮ ಮೇಲೆ ಬಂದ ಕೃತಿ ಚೌರ್ಯದ ಈ ಆರೋಪದ ಕುರಿತು ಆಮಿರ್ ಖಾನ್ ಸದ್ಯಕ್ಕೇನು ಮಾತನಾಡಿಲ್ಲ. ಬಹುಶಃ ಮಾತನಾಡುವುದು ಇಲ್ಲ. ಯಾಕೆಂದರೆ.. ಒಪ್ಪಿಕೊಂಡರೆ ಅಭಿನಯದಲ್ಲಿ ಅಲ್ಲ ಬದಲಿಗೆ ಕಳ್ಳತನದಲ್ಲಿ ನಾನು ಪರ್ಫೆಕ್ಷನಿಸ್ಟ್ ಎಂದು ಆಮಿರ್ ಖಾನ್ ಒಪ್ಪಿಕೊಂಡಂತೆ ಆಗುತ್ತೆ. ಹೀಗಾಗಿ ಹೆಚ್ಚೆಂದರೇ ಪ್ರೇರಣೆಯ ಗೀತೆಯನ್ನು ಆಮಿರ್ ಖಾನ್ ಮುಂಬರುವ ದಿನಗಳಲ್ಲಿ ಹಾಡಬಹುದು. ಚಿತ್ರ ನೋಡಿದರೆ ಆ ಚಿತ್ರಕ್ಕೂ ನಮ್ಮ ಚಿತ್ರಕ್ಕೂ ಅಜಗಜಾಂತರ ವ್ಯತ್ಯಾಸ ಇದೆ ಎಂದು ನಿಮಗೆ ಗೊತ್ತಾಗುತ್ತೆ ಎಂದು ಹೇಳಬಹುದು.

ನಿಜಕ್ಕೂ ಆಮಿರ್ ಖಾನ್ ಮತ್ತೊಮ್ಮೆ ಕಥೆಯನ್ನು ಕದ್ದು ಸಿನಿಮಾ ಮಾಡಿದ್ದಾರಾ ? ಚಾಂಪಿಯನ್ಸ್ ಮತ್ತು ಸಿತಾರೆ ಜಮೀನ್ ಪರ ಎರಡು ಚಿತ್ರಗಳ ಕಥೆ ಒಂದೇನಾ ? ಉತ್ತರ ಈ ಜೂನ್ 20ರಂದು ಸಿಗಲಿದೆ.

More from Filmibeat

English summary
Aamir Khan’s Sitaare Zameen Par is under fire for allegedly copying Champions frame by frame, sparking widespread online debate.
Read more about: aamir khan bollywood remake
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X