ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ 11 ವರ್ಷದ ಬಿಗ್‌ಬಿ ಮೊಮ್ಮಗಳು: ಕಾರಣ ಏನು?
ಬಿಗ್‌ಬಿ ಅಮಿತಾಬ್ ಬಚ್ಚನ್ ಮೊಮ್ಮಗಳು, ಐಶ್ವರ್ಯ ರಾಯ್- ಅಭಿಷೇಕ್ ಬಚ್ಚನ್ ದಂಪತಿಯ ಪುತ್ರಿ ಆರಾಧ್ಯ ಬಚ್ಚನ್ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ತನ್ನ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಆರೋಪಿಸಿ ಆರಾಧ್ಯ ಕೆಲ ಯೂಟ್ಯೂಬ್ ಚಾನಲ್ ವಿರುದ್ಧ ದೂರು ನೀಡಿದ್ದಾರೆ. ಈ ಪ್ರಕರಣದ ವಿಚಾರಣೆ ಇಂದು (ಏಪ್ರಿಲ್ 20) ದೆಹಲಿ ಹೈಕೋರ್ಟ್‌ನಲ್ಲಿ ನಡೆಯಲಿದೆ.
11 ವರ್ಷ ಮೈನರ್ ಆಗಿರುವ ನನ್ನ ಕುರಿತು ಹಾಗೂ ನನ್ನ ಆರೋಗ್ಯದ ಕುರಿತು ನಿರಾಧಾರ ವದಂತಿಗಳನ್ನು ಯೂಟ್ಯೂಬ್ ಚಾನಲ್‌ಗಳಲ್ಲಿ ಪ್ರಸಾರ ಮಾಡಲಾಗ್ತಿದೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಆರಾಧ್ಯ ಕೋರಿದ್ದಾರೆ. ತಮ್ಮ ಕುರಿತು ಇಂತಹ ವರದಿ ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿದ್ದಾರೆ. ತನ್ನ ಕುರಿತ "ಎಲ್ಲಾ ವೀಡಿಯೊಗಳನ್ನು ಡಿ-ಲಿಸ್ಟ್ ಮಾಡಲು ಮತ್ತು ತೆಗೆದು ಹಾಹುವಂತೆ 10 ಘಟಕಗಳನ್ನು ಕೇಳಿದ್ದಾರೆ. ಗೂಗಲ್ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕುಂದುಕೊರತೆ ಕೋಶವನ್ನು ಸಹ ಪ್ರಕರಣದಲ್ಲಿ ಕಕ್ಷಿದಾರರನ್ನಾಗಿ ಮಾಡಲಾಗಿದೆ.

ನಿಜ ಹೇಳಬೇಕು ಅಂದ್ರೆ ಕೆಲ ಯೂಟ್ಯೂಬ್ ಚಾನಲ್‌ಗಳು ಆಕೆಯ ಕುರಿತು ಪದೇ ಪದೇ ಸುದ್ದಿ ಪ್ರಸಾರ ಮಾಡುತ್ತಿವೆ. ಇನ್ನು ಸೋಶಿಯಲ್ ಮೀಡಿಯಾದಲ್ಲೂ ಬಿಗ್‌ಬಿ ಮೊಮ್ಮಗಳನ್ನು ಟ್ರೋಲ್ ಮಾಡುತ್ತಿರುತ್ತಾರೆ. ಕೆಲದಿನಗಳ ಹಿಂದೆ ಈ ಟ್ರೋಲ್ಸ್ ಕಾರಣಕ್ಕೆ ಬೇಸರಗೊಂಡ ಅಭಿಷೇಕ್ ಬಚ್ಚನ್, ನನ್ನನ್ನು ನನ್ನ ಮಗಳನ್ನು ಟಾರ್ಗೆಟ್ ಮಾಡಿ ಟ್ರೋಲ್ ಮಾಡಬೇಡಿ ಎಂದಿದ್ದರು.
'ಬಾಬ್ ಬಿಸ್ವಾಸ್' ಸಿನಿಮಾ ಪ್ರಮೋಷನ್ ವೇಳೆ ಅಭಿಷೇಕ್ ಬಚ್ಚನ್ ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದರು. "ಟ್ರೋಲ್‌ಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಈ ರೀತಿ ಮಾಡುವವರನ್ನು ಕ್ಷಮಿಸೋಕು ಸಾಧ್ಯವಿಲ್ಲ. ನಾನು ಸಿನಿಮಾ ಸೆಲೆಬ್ರೆಟಿ ಸರಿ, ಆದರೆ ನನ್ನ ಮಗಳಿಗೂ ಈ ಇಂಡಸ್ಟ್ರಿಗೂ ಸಂಬಂಧವೇ ಇಲ್ಲ, ಆದರೂ ಆಕೆಯನ್ನು ಟಾರ್ಗೆಟ್ ಮಾಡಲಾಗುತ್ತಿದೆ. ನನಗೆ ಏನಾದರೂ ಹೇಳಬೇಕು ಅಂದ್ರೆ ನನ್ನ ಮುಂದೆ ಬಂದು ಹೇಳಿ" ಎಂದು ಜ್ಯೂನಿಯರ್ ಬಚ್ಚನ್ ಅಸಮಾಧಾನ ವ್ಯಕ್ತಪಡಿಸಿದ್ದರು.

ಇನ್ನು ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ 16ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. 2007 ಏಪ್ರಿಲ್ 20ರಂದು ಇಬ್ಬರು ಹಸೆಮಣೆ ಏರಿದ್ದರು. ಪರಸ್ಪರ ಪ್ರೀತಿಸಿ ಪೋಷಕರ ಒಪ್ಪಿಗೆ ಪಡೆದು ಹೊಸಬಾಳಿಗೆ ಕಾಲಿಟ್ಟಿದ್ದರು. ಮೊದಲು ಅಭಿಷೇಕ್ ಪ್ರಪೋಸ್ ಮಾಡಿದ್ದರು ಎಂದು ಐಶ್ವರ್ಯ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. 2007ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡು ಅದೇ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 2011ರಲ್ಲಿ ದಂಪತಿಗೆ ಆರಾಧ್ಯ ಜನಿಸಿದ್ದರು.


Click it and Unblock the Notifications