ಮತ್ತೆ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಐಶ್ವರ್ಯಾ ರೈ ಪುತ್ರಿ ಆರಾಧ್ಯಾ ಬಚ್ಚನ್

ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ಪುತ್ರಿ ಆರಾಧ್ಯಾ ಬಚ್ಚನ್ ಸ್ಟಾರ್ ಕಿಡ್. ಯಾವುದೇ ಸಿನಿಮಾಗಳಲ್ಲಿ ನಟಿಸದೇ ಇದ್ದರೂ ಆಕೆಗೆ ತಂದೆ, ತಾಯಿಯಿಂದ ಹೆಸರು ಬಂದುಬಿಟ್ಟಿದೆ. ತಾಯಿ ಸದಾ ಸಾರ್ವಜನಿಕವಾಗಿ ಆರಾಧ್ಯ ಕಾಣಿಸಿಕೊಳ್ಳುತ್ತಿರುತ್ತಾಳೆ. ಸದ್ಯ ಆಕೆ ದೆಹಲಿ ಹೈಕೋರ್ಟ್ ಮೆಟ್ಟಿಲೇರಿರುವುದು ಚರ್ಚೆ ಹುಟ್ಟು ಹಾಕಿದೆ.

ಅಭಿ- ಐಶ್ ದಂಪತಿ ದೂರಾಗುತ್ತಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪದೇ ಪದೆ ವದಂತಿ ಹರಡುತ್ತಲೇ ಇರುತ್ತದೆ. ಇದು ಸುಳ್ಳು ಎಂದು ಹೇಳಿದರು ಕೆಲವರು ಕೇಳುತ್ತಿಲ್ಲ. ಇನ್ನು ಆರಾಧ್ಯ ಬಚ್ಚನ್ ಬಗ್ಗೆ ಕೂಡ ಇಲ್ಲಸಲ್ಲದ ಸುದ್ದಿ ಹರಡಲಾಗುತ್ತಿದೆ. ಮುಖ್ಯವಾಗಿ ಆಕೆಯ ಆರೋಗ್ಯದ ಬಗ್ಗೆ ಸುಳ್ಳು ವದಂತಿ ವೈರಲ್ ಆಗುತ್ತಿದೆ. ಇದನ್ನು ಪ್ರಶ್ನಿಸಿ ಆಕೆ ಈಗ ಕೋರ್ಟ್ ಮೆಟ್ಟಿಲೇರಿದ್ದಾಳೆ. ಕೆಲ ವೆಬ್‌ಸೈಟ್ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಪ್ರಕಟವಾದ ಇಂತಹ ಸುಳ್ಳು ಸುದ್ದಿ ತೆಗೆಯಬೇಕು ಎಂದು ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

Aaradhya Bachchan moves Delhi HC for removal of fake and misleading information in online

ಆರಾಧ್ಯ ಬಚ್ಚನ್ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಕೆಲ ಯೂಟ್ಯೂಬ್ ಚಾನೆಲ್‌ಗಳಲ್ಲಿ ಸುಳ್ಳು ಮಾಹಿತಿ ಹರಡಲಾಗಿದೆ. ಇನ್ನು ಕೆಲ ಯೂಟ್ಯೂಬ್ ಚಾನೆಲ್‌ಗಳಲ್ಲಿ ಆಕೆ ನಿಧನರಾಗಿದ್ದಾರೆಂದು ಕೂಡ ತಪ್ಪು ಸುದ್ದಿ ತೇಲಿ ಬಿಟ್ಟಿದ್ದಾರೆ. ಇದನ್ನು ವಿರೋಧಿಸಿ ಆರಾಧ್ಯ ಮತ್ತು ಆಕೆಯ ತಂದೆ ಅಭಿಷೇಕ್ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ಹಿಂದೆ 2013ರಲ್ಲಿ ಕೂಡ ಇದೇ ವಿಚಾರವಾಗಿ ಆರಾಧ್ಯ ಕೋರ್ಟ್ ಅನ್ನು ಆಶ್ರಯಿಸಿದ್ದರು. ಆದರೂ ಕೆಲ ವೆಬ್‌ಸೈಟ್‌ಗಳು, ಸೋಶಿಯಲ್ ಮೀಡಿಯಾ ಪೇಜ್‌ಗಳು ಹೈಕೋರ್ಟ್ ಆದೇಶ ಪಾಲಿಸದ ಕಾರಣ ಮತ್ತೆ ಅರ್ಜಿ ಸಲ್ಲಿಸುವಂತಾಗಿದೆ.

ಈ ಹಿಂದೆ ದಾಖಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್, ಪ್ರತಿಯೊಂದು ಮಗುವನ್ನು ಗೌರವಿಸಬೇಕು. ಅವರ ಆರೋಗ್ಯದ ಬಗ್ಗೆ ಸುಳ್ಳು ಮಾಹಿತಿ ಹರಡುವುದನ್ನು ಕಾನೂನು ಸಹಿಸುವುದಿಲ್ಲ ಎಂದು ಹೇಳಿತ್ತು. ಜಸ್ಟೀಸ್ ಸಿ ಹರಿ ಶಂಕರ್ ಇದನ್ನು ತೀವ್ರವಾಗಿ ಖಂಡಿಸಿದ್ದರು. ಸುಳ್ಳು ವೀಡಿಯೊಗಳನ್ನು ಯೂಟ್ಯೂಬ್ ಪ್ಲಾಟ್‌ಫಾರ್ಮ್‌ನಿಂದ ತೆಗೆದುಹಾಕುವಂತೆ ಗೂಗಲ್‌ಗೆ ಆದೇಶಿಸಿತ್ತು. ಇಂತಹ ಯಾವುದೇ ಸುಳ್ಳು ಮಾಹಿತಿ ಗಮನಕ್ಕೆ ಬರುತ್ತಿದ್ದಂತೆ ಗೂಗಲ್ ಅಳಿಸಿ ಹಾಕಬೇಕು ಎಂದು ಕೋರ್ಟ್ ಆದೇಶ ನೀಡಿತ್ತು.

ಇದೀಗ ಆರಾಧ್ಯ ಬಚ್ಚನ್ ಮತ್ತೆ ಸಲ್ಲಿಸಿರುವ ಅರ್ಜಿಯ ಮುಂದಿನ ವಿಚಾರಣೆಯನ್ನು ನ್ಯಾಯಾಲಯ ಮಾರ್ಚ್ 17ಕ್ಕೆ ಮುಂದೂಡಿದೆ. ಈಗಾಗಲೇ ಕೋರ್ಟ್ ಈ ಸಂಬಂಧ ಗೂಗಲ್‌ಗೆ ನೋಟಿಸ್ ಜಾರಿ ಮಾಡಿದೆ.

More from Filmibeat

English summary
Aishwarya Rai and Abhishek Bachchan's daughter Aaradhya moves HC seeking removal of fake videos online again
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X