ಓಪನ್ ಹೇರು ಬಿಟ್ಕೊಂಡು ಬಂದ ಐಶ್ವರ್ಯ ರೈ ಪುತ್ರಿ ; ಹೊಸ ಹೇರ್ ಸ್ಟೈಲ್ ನಲ್ಲಿ ಗಮನ ಸೆಳೆದ ಆರಾಧ್ಯ ಬಚ್ಚನ್ ...!

ತಮ್ಮ ಪುತ್ರಿಯ ಕಾರಣಕ್ಕೆ ಅನೇಕ ಬಾರಿ ಟ್ರೋಲ್ ಗೆ ಒಳಗಾದವರು ಐಶ್ವರ್ಯ ರೈ. ಹೋದಲ್ಲಿ..ಬಂದಲ್ಲಿ.. ಕೈಯಷ್ಟೇ ಅಲ್ಲ ಕೆಲ ಬಾರಿ ಆರಾಧ್ಯ ಕುತ್ತಿಗೆಯನ್ನೂ ಹಿಡಿದುಕೊಂಡು ಐಶ್ವರ್ಯ ಓಡಾಡಿದ್ದು ಇದೆ. ತನ್ನ ಮುದ್ದಿನ ಮಗಳ ಮೇಲೆ ಯಾರ ವಕ್ರದೃಷ್ಟಿ ಬೀಳದೇ ಇರಲಿ ಎಂದು ಆರಾಧ್ಯ ಅವರನ್ನ ಐಶ್ವರ್ಯ ನೆರಳಿನಂತೆ ಹಿಂಬಾಲಿಸಿದ್ದು ಇದೆ.

ಇನ್ನೂ.. ಆರಾಧ್ಯ ಉಡುಗೆ ತೊಡುಗೆ ವೇಷ ಭೂಷಣ ಎಲ್ಲವನ್ನೂ ನಿರ್ಧಾರ ಮಾಡ್ತಿದ್ದಿದ್ದು ಖುದ್ದು ಐಶ್ವರ್ಯನೇ. ಹೀಗಾಗಿ ಇಲ್ಲಿಯವರೆಗೆ ಆರಾಧ್ಯ ಅವರನ್ನ ಒಂದೇ ರೂಪದಲ್ಲಿ ಅನೇಕರು ನೋಡಿದ್ದರು. ಹಣೆಯ ಮೇಲೆ ಕೂದಲು ಇಳಿಸಿದ ರೀತಿಯಂತ ಒಂದೇ ರೀತಿಯ ಹೇರ್ ಸ್ಟೈಲ್ ನೋಡಿ ಸುಸ್ತಾಗಿದ್ದರು. ಆದರೆ ಈಗ ಸುಸ್ತಾದ ಮನಸ್ಸುಗಳಿಗೆ ಉಲ್ಲಾಸ ಹಾಗೂ ನವೋತ್ಸಾಹವನ್ನ ಅಂಬಾನಿ ಪುತ್ರ ಅನಂತ್ ಹಾಗೂ ರಾಧಿಕಾ ವಿವಾಹಪೂರ್ವ ಸಮಾರಂಭ ನೀಡಿದೆ.

Aaradhya Bachchan Steals The Spotlight With Stunning New Hairstyle

ಹೌದು, ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ಪ್ರೀ ವೆಡ್ಡಿಂಗ್ ಕಾರ್ಯಕ್ರಮಕ್ಕೆ, ಆರಾಧ್ಯ ಕೂದಲನ್ನು ಫ್ರೀ ಆಗಿಯೇ ಬಿಟ್ಟಿದ್ದರು. ಮುಗುಳುನಗೆಯ ಜೊತೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು. ಲೈಟ್ ರೋಸ್ ಮತ್ತು ವೈಟ್ ಕಲರ್ ಹೆವಿ ಅನಾರ್ಕಲಿಯಲ್ಲಿ ಆರಾಧ್ಯ ಮಿಂಚಿದರು. ಸದ್ಯಕ್ಕೆ ಆರಾಧ್ಯ ಅವರ ಈ ಹೊಚ್ಚ ಹೊಸ ಲುಕ್ ನೋಡಿ ಅನೇಕರು ಆಶ್ಚರ್ಯದಿಂದ ಕಣ್ಣರಳಿಸಿದ್ದಾರೆ. ಥರೇವಾರಿ ಅಭಿಪ್ರಾಯಗಳನ್ನ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸುತ್ತಿದ್ದಾರೆ.

ಕೆಲವರು ಜಸ್ಟ್ ಲುಕಿಂಗ್ ಲೈಕ್ ಎ ವಾವ್ ಎಂದರೆ, ಇನ್ನೂ ಕೆಲವರು ಆರಾಧ್ಯ ತಾಯಿಗೆ ತಕ್ಕ ಮಗಳು ಎಂದಿದ್ದಾರೆ. ಇನ್ನೂ ಕೆಲವರ ಪ್ರಕಾರ ಆರಾಧ್ಯ ಅವರದ್ದು ಅಮ್ಮನನ್ನೇ ಮೀರಿಸುವ ಅಂದ.

ಇನ್ನೂ ಆರಾಧ್ಯಗೆ ಈಗ 12ರ ಪ್ರಾಯ. ಆಗಲೇ ಆರಾಧ್ಯ ಬಾಲಿವುಡ್ ನ ಭವಿಷ್ಯದ ಮಹಾನಟಿಯಾಗ್ತಾರೆ ಎಂದು ಭವಿಷ್ಯವನ್ನೂ ಹಲವರು ನುಡಿಯುತ್ತಿದ್ದಾರೆ. ಇನ್ನೂ ಬಹುತೇಕರು ಆರಾಧ್ಯ ತನ್ನ ಹೇರ್ ಸ್ಟೈಲ್ ಬದಲಾಯಿಸೋಕೆ ಅಂಬಾನಿ ಒಂದು ಸಾವಿರ ಕೋಟಿ ಖರ್ಚು ಮಾಡಬೇಕಾಯಿತು ಎಂದು ತಮಾಷೆಯನ್ನೂ ಮಾಡ್ತಿದ್ದಾರೆ. ಒಟ್ಟಿನಲ್ಲಿ ಆರಾಧ್ಯ ಅವರ ಹೊಸ ಲುಕ್, ಸಾಮಾಜಿಕ ಜಾಲತಾಣದಲ್ಲಿ ಸದ್ಯಕ್ಕೆ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.

ಜಾಮ್ ನಗರದಲ್ಲಿ ಧರೆಗಿಳಿದಿದ್ದ ಸ್ವರ್ಗ

ವಿಶ್ವದ ಶ್ರೀಮಂತರಲ್ಲಿ ಒಬ್ಬರಾದ ಉದ್ಯಮಿ ಮುಕೇಶ್‌ ಅಂಬಾನಿ ಪುತ್ರ ಅನಂತ್‌ ಅಂಬಾನಿ ಹಾಗೂ ಉದ್ಯಮಿ ವಿರೇನ್‌ ಮರ್ಚಂಟ್‌ ಅವರ ಪುತ್ರಿ ರಾಧಿಕಾ ಮರ್ಚಂಟ್‌ ವಿವಾಹ ಪೂರ್ವ ಸಂಭ್ರಮದ ಹಿನ್ನೆಲೆಯಲ್ಲಿ ಗುಜರಾತ್‌ನ ಜಾಮ್‌ನಗರದಲ್ಲಿ ಸ್ವರ್ಗವೇ ಧರೆಗಿಳಿದಿತ್ತು. ಸಾವಿರಾರು ಗಣ್ಯರ ಆಗಮನದ ಮಧ್ಯೆಯೇ ಅದ್ಧೂರಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು.

More from Filmibeat

English summary
Aaradhya Bachchan Daughter Of Aishwarya Rai And Abhishek Bachchan Steals The Spotlight With Stunning New Hairstyle At Anant Ambani and Radhika Merchant’s Pre-Wedding Festivities.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X