For Quick Alerts
  ALLOW NOTIFICATIONS  
  For Daily Alerts

  ವೈರಲ್ ವಿಡಿಯೋ: ಐಶ್ವರ್ಯ ರೈ ಇದ್ದರೂ ಗಮನ ಸೆಳೆದಿದ್ದು ಮಾತ್ರ ಆರಾಧ್ಯ

  |

  ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ದಂಪತಿ ತಮ್ಮ ಮಗಳು ಆರಾಧ್ಯ ಆರೈಕೆ ವಿಷ್ಯದಲ್ಲಿ ಬಹಳ ಸೂಕ್ಷ್ಮವಾಗಿರ್ತಾರೆ. ಮಗಳನ್ನ ಸಾರ್ವಜನಿಕ ಕಾರ್ಯಕ್ರಮಗಳಿಗೆ ಕರೆದುಕೊಂಡು ಬಂದಾಗಲೂ ಹೆಚ್ಚು ಸಮಯ ಮಾಧ್ಯಮಗಳ ಮುಂದೆ ನಿಲ್ಲುವುದಿಲ್ಲ.

  ಆದ್ರೀಗ, ಉದ್ಯಮಿ ಮುಖೇಶ್ ಅಂಬಾನಿಯ ಮಗ ಆಕಾಶ್ ಅಂಬಾನಿಯ ಅವರ ಆರತಕ್ಷತೆ ಕಾರ್ಯಕ್ರಮದಲ್ಲಿ ಐಶ್ ಪುತ್ರಿ ಆರಾಧ್ಯ ಪ್ರಮುಖ ಆಕರ್ಷಣೆಯಾಗಿದ್ದರು. ಐಶ್ ಮತ್ತು ಅಭಿಷೇಕ್ ಗಿಂತಲೂ ಅರಾಧ್ಯ ಸ್ಟಾರ್ ಅಟ್ರ್ಯಾಕ್ಟ್ ಆಗಿದ್ದರು.

  ಪುತ್ರಿಯ ಕೈಹಿಡಿದುಕೊಂಡಿದ್ದೇ ತಪ್ಪಾ.? ಐಶ್ವರ್ಯಗೆ ಟ್ರೋಲಿಗರ ಕಾಟ ತಪ್ಪುತ್ತಿಲ್ಲ.!ಪುತ್ರಿಯ ಕೈಹಿಡಿದುಕೊಂಡಿದ್ದೇ ತಪ್ಪಾ.? ಐಶ್ವರ್ಯಗೆ ಟ್ರೋಲಿಗರ ಕಾಟ ತಪ್ಪುತ್ತಿಲ್ಲ.!

  ಮಗಳ ಜೊತೆಯಲ್ಲಿ ಆರತಕ್ಷತೆಗೆ ಆಗಮಿಸಿದ್ದ ಐಶ್ವರ್ಯ ಮತ್ತು ಅಭಿಷೇಕ್ ಬಚ್ಚನ್ ದಂಪತಿ ಒಟ್ಟಿಗೆ ಫೋಟೋಗೆ ಪೋಸ್ ನೀಡಿದ್ರು. ಈ ವೇಳೆ ಐಶ್ ಪುತ್ರಿ ಆರಾಧ್ಯ ತನ್ನ ಎಕ್ಸ್ ಪ್ರೆಶನ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಮುದ್ದಾಗಿ ಕಾಣುತ್ತಿದ್ದ ಆರಾಧ್ಯ ಫೋಟೋಗೆ ಪೋಸ್ ಕೊಡಬೇಕಾದರೇ ಒಳ್ಳೆಯ ಗೊಂಬೆಯಂತೆ ತಲೆಯನ್ನ ಆ ಕಡೆ, ಈ ಕಡೆ ಅಲುಗಾಡಿಸಿ, ಕಣ್ಣ ಸನ್ನೆ ಮೂಲಕ ನೆರೆದಿದ್ದವರಿಗೆ ಸರ್ಪ್ರೈಸ್ ನೀಡಿದ್ರು.

  ಐಶ್ವರ್ಯ ರೈ ಸಿನಿಮಾಗಳು ಸೋತಿದ್ದಕ್ಕೆ ಇಂತಹ ಶಿಕ್ಷೆ.!ಐಶ್ವರ್ಯ ರೈ ಸಿನಿಮಾಗಳು ಸೋತಿದ್ದಕ್ಕೆ ಇಂತಹ ಶಿಕ್ಷೆ.!

  ಇದನ್ನ ನೋಡಿದ ಬಾಲಿವುಡ್ ಮಂದಿ ''ಓಹ್....ಅಮ್ಮನಂತೆ ಆರಾಧ್ಯ ಕೂಡ ಒಳ್ಳೆಯ ನಟಿ ಆಗುವ ಹಾದಿಯಲ್ಲಿದ್ದಾರೆ. ಭವಿಷ್ಯದಲ್ಲಿ ಆರಾಧ್ಯ ಕೂಡ ಇಂಡಸ್ಟ್ರಿಗೆ ಬರಬಹುದು ಎಂಬುದಕ್ಕೆ ಈ ಎಕ್ಸ್ ಪ್ರೆಶನ್ ಸಾಕ್ಷಿಯಾಗಿದೆ'' ಎಂದು ಲೆಕ್ಕಾಚಾರ ಹಾಕ್ತಿದ್ದಾರೆ.

  ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಐಶ್ ಪುತ್ರಿ ಎಲ್ಲರಿಂದಲೂ ಮೆಚ್ಚುಗೆ ಗಳಿಸಿಕೊಂಡಿದ್ದಾಳೆ.

  English summary
  Viral video: Aaradhya Bachchan's hilarious expressions while posing for the paparazzi at Akash Ambani and Shloka Mehta's Mangal Parv is winning the internet.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X