ಅತ್ಯಾಚಾರ ಪ್ರಕರಣದಲ್ಲಿ ಆಶಿಕಿ ಗಾಯಕ ಬಂಧನ
ಬಾಲಿವುಡ್ ಚಿತ್ರ 'ಆಶಿಕಿ 2' ಚಿತ್ರದಲ್ಲಿ "ಸುನ್ ರಹಾ ಹೈ ನಾ ತು.." ಎಂಬ ಹಾಡಿನ ಮೂಲಕ ಖ್ಯಾತಿಯ ಉತ್ತುಂಗಕ್ಕೇರಿದ ಹಿನ್ನೆಲೆ ಗಾಯಕ ಅಂಕಿತ್ ತಿವಾರಿಯನ್ನು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಅಂಕಿತ್ ಜೊತೆಗೆ ಅವರ ಸಹೋದರ ಅಂಕರ್ ಅವರನ್ನೂ ಬಂಧಿಸಲಾಗಿದೆ.
ಇನ್ನೂ 24ರ ಹರೆಯದ ಈ ಯುವ ಗಾಯಕನ ಮೇಲೆ ಅತ್ಯಾಚಾರ ದೂರು ದಾಖಲಿಸಿರುವುದು ಸ್ವತಃ ಗರ್ಲ್ ಫ್ರೆಂಡ್ ಎನ್ನಲಾಗಿದೆ. ಇವರಿಬ್ಬರ ನಡುವೆ ಲಿವ್ ಇನ್ ರಿಲೇಷನ್ ಷಿಪ್ ಇತ್ತು ಎಂಬ ಮಾತುಗಳು ಕೇಳಿಬರುತ್ತಿವೆ. ಆಕೆ ಕೊಟ್ಟ ದೂರಿನ ಮೇರೆಗೆ ಮುಂಬೈ ವರ್ಸೋವಾ ಪೊಲೀಸರು ಬಂಧಿಸಿದ್ದಾರೆ. [ರೇಪ್ ಕೇಸಲ್ಲಿ ಬಾಲಿವುಡ್ ನಟ ಅಂದರ್]

ಸದ್ಯಕ್ಕೆ ಪೊಲೀಸರು ಅಂಕಿತ್ ಗರ್ಲ್ ಫ್ರೆಂಡ್ ದೂರಿನ ಅನ್ವಯ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸತ್ಯಾಸತ್ಯತೆಗಳು ಇನ್ನಷ್ಟೇ ಗೊತ್ತಾಗಬೇಕಾಗಿದೆ. ಮುಂಬೈನ ತನ್ನ ಸಹೋದರಿ ಮನೆಗೆ ಬರುತ್ತಿದ್ದ ಗರ್ಲ್ ಫ್ರೆಂಡ್ ಜೊತೆಗೆ ಪರಿಚಯ ಬೆಳೆಸಿಕೊಂಡ ಅಂಕಿತ್ ಬಳಿಕ ಆಕೆಯೊಂದಿಗೆ ಇನ್ನಷ್ಟು ಸಲುಗೆ ಬೆಳೆಸಿಕೊಂಡು ಅತ್ಯಾಚಾರವೆಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.


Click it and Unblock the Notifications











