ಕುರ್ತಾ ಹಾಕೊಂಡು ನಿಂತಿದ್ದೆ, ಸ್ಕೂಲ್ ಹುಡುಗ ಬಂದು ಆ ಭಾಗಕ್ಕೆ ಕೈ ಹಾಕಿದ-ಕರಾಳ ಅನುಭವ ಹಂಚಿಕೊಂಡ ನಟಿ..!
ಹೆಣ್ಣಿನ ಮೇಲೆ ಗಂಡಿನ ಶೋಷಣೆ, ಅತ್ಯಾಚಾರದ ಕುರಿತ ಸುದ್ದಿಗಳನ್ನು ನಾವು ಓದುತ್ತಲೇ ಇದ್ದೇವೆ, ಕೇಳುತ್ತಲೇ ಇದ್ದೇವೆ. ಪ್ರಪಂಚದಾದ್ಯಂತ ಲಕ್ಷಾಂತರ ಮಹಿಳೆಯರು, ಹುಡುಗಿಯರು, ದೈಹಿಕ, ಲೈಂಗಿಕ ಹಿಂಸೆ ಅನುಭವಿಸುತ್ತಾರೆ. ಆ ಪೈಕಿ ಬಾಲ್ಯದಲ್ಲಿ ಮತ್ತು ತನ್ನ ಹರೆಯದ ದಿನಗಳಲ್ಲಿ ತನ್ನ ಮೇಲೆ ನಡೆದ ದೌರ್ಜನ್ಯವನ್ನು ಅದಿತಿ ಪೋಹಂಕರ್ ನೆನಪು ಮಾಡಿಕೊಂಡಿದ್ದಾರೆ.
ಹೌದು, ಶೀ ಮತ್ತು ಆಶ್ರಮ್ ವೆಬ್ ಸರಣಿಗಳ ಮೂಲಕ ಪ್ರಖ್ಯಾತರಾದ ಅದಿತಿ ಪೋಹಂಕರ್ ಸಂದರ್ಶನದಲ್ಲಿ ತಮ್ಮ ಕಹಿ ಅನುಭವ ಹಂಚಿಕೊಂಡಿದ್ಧಾರೆ. ಈ ಕುರಿತು ಮಾತನಾಡಿರುವ ಅದಿತಿ ನಾನು ಆಗಿನ್ನೂ ಹನ್ನೊಂದನೇ ತರಗತಿಯಲ್ಲಿದ್ದೆ, ದಿನನಿತ್ಯ ಮುಂಬೈನ ಲೋಕಲ್ ಟ್ರೈನ್‌ನಲ್ಲಿ ಪ್ರಯಾಣವನ್ನು ಮಾಡುತ್ತಿದ್ದೆ ಎಂದು ಹೇಳಿದ್ದಾರೆ.

ಇನ್ನು ಆಗ 18 ವರ್ಷಕ್ಕಿಂತ ಚಿಕ್ಕ ಹುಡುಗರಿಗೆ ಮಹಿಳಾ ಭೋಗಿಯಲ್ಲಿ ಹತ್ತುವ ಅವಕಾಶ ನೀಡಲಾಗುತ್ತಿತ್ತು ಈ ಹಿನ್ನೆಲೆ ಹೀಗೆ ಒಮ್ಮೆ ಪ್ರಯಾಣ ಮಾಡುವ ಸಮಯದಲ್ಲಿ ನಾನು ಕುರ್ತಾ ಹಾಕೊಂಡು ನಿಂತಿದ್ದೆ. ಆಗ ನಾನು ಇದ್ದ ಬೋಗಿಯಲ್ಲಿ ಒಬ್ಬ ಶಾಲಾ ವಿದ್ಯಾರ್ಥಿ ಕೂಡ ಇದ್ದ ಎಂದು ಹೇಳಿರುವ ಅದಿತಿ ಟ್ರೇನ್ ತುಸು ಮುಂದೆ ಹೋದ ತಕ್ಷಣ ಆ ಶಾಲಾ ವಿದ್ಯಾರ್ಥಿ ನನ್ನ ಬಳಿ ಬಂದು ಸೀದಾ ನನ್ನ ಖಾಸಗಿ ಭಾಗಕ್ಕೆ ಕೈ ಹಾಕಿದ ಎಂದು ಹೇಳಿದ್ದಾರೆ. ಎದೆಯನ್ನು ಮುಟ್ಟಿದ ಎಂದು ಹೇಳಿದ್ದಾರೆ.
ಆ ಹುಡುಗನ ಈ ವರ್ತನೆಯಿಂದ ನನಗೆ ಭಾರೀ ಆಘಾತವಾಗಿತ್ತು ಎಂದು ಹೇಳಿರುವ ಅದಿತಿ ಆ ನಂತರ ಮುಂದಿನ ನಿಲ್ದಾಣದಲ್ಲಿ ನಾನು ರೈಲಿಂದ ಇಳಿದು ಸೀದಾ ಪೊಲೀಸ್ ಠಾಣೆಗೆ ಹೋದೆ ಎಂದು ಹೇಳಿದ್ದಾರೆ. ಇನ್ನು ಪೊಲೀಸ್ ಠಾಣೆಯಲ್ಲಾದರೂ ನನ್ನ ಮೇಲೆ ನಡೆದ ದೌರ್ಜನ್ಯವನ್ನು ಗಂಭೀರವಾಗಿ ತೆಗೆದುಕೊಂಡ್ರಾ ಅಂದರೆ ಅದು ಇಲ್ಲ ಎಂದಿರುವ ಅದಿತಿ ಅಯ್ಯೋ ಏನೋ ಆಗಿದ್ದು ಆಯ್ತು ಬಿಡಮ್ಮ ಎಂದು ಹೇಳಿದರು ಎಂದು ಹೇಳಿದ್ದಾರೆ. ನನಗೆ ಮಾನಸಿಕ ಕಿರುಕುಳವಾಗಿದೆ ಎಂದು ಹೇಳಿದ್ದಕ್ಕೆ ಅವನನ್ನು ಎಲ್ಲಿ ಅಂತ ಹುಡುಕುವುದು ಎಂದು ಉಡಾಫೆಯ ಉತ್ತರವನ್ನು ನೀಡಿದರು ಎಂದು ಹೇಳಿದ್ದಾರೆ.
ಇನ್ನು ವಿಶೇಷ ಅಂದರೆ ನನಗೆ ಹಿಂಸೆ ನೀಡಿದ್ದ ಆ ಹುಡುಗ ಮತ್ತೊಂದು ಹುಡುಗಿಗೆ ಅದೇ ರೀತಿ ಮಾಡಲು ಅದೇ ಜಾಗದಲ್ಲಿ ನಿಂತುಕೊಂಡಿದ್ದ ಎಂದಿರುವ ಅದಿತಿ ನಾನು ಅವನನ್ನು ಗುರುತು ಹಿಡಿದು ಇದೇ ವ್ಯಕ್ತಿ ನನಗೆ ಕಿರುಕುಳ ನೀಡಿದ್ದು ಎಂದು ಹೇಳಿದೆ ಆಗ ಪೊಲೀಸರು ನಿನ್ನ ಹತ್ರ ಸಾಕ್ಷಿ ಏನಿದೆ ಎಂದು ಕೇಳಿದರು ಎಂದು ಹೇಳಿದ್ದಾರೆ. ಆಗ ನಾನ್ಯಾಕೆ ನಿಮಗೆ ಸುಳ್ಳು ಹೇಳಬೇಕು ಎಂದು ನಾನು ಮರು ಪ್ರಶ್ನೆ ಮಾಡಿದ್ದಕ್ಕೆ ಕಾಟಾಚಾರಕ್ಕೆ ಪೊಲೀಸರು ಬನ್ನಿ ಆ ಹುಡುಗನ ಜೊತೆ ಮಾತನಾಡೋಣ ಅಂತೇಳಿ ಮಹಿಳಾ ಕಾನ್‌ಸ್ಟೆಬಲ್‌ನ ನನ್ನ ಜೊತೆ ಕಳಿಸಿದರು ಎಂದಿರುವ ಅದಿತಿ ಆ ನಂತರ ಆ ಮಹಿಳಾ ಕಾನ್‌ಸ್ಟೆಬಲ್ ಈ ಹುಡುಗಿಗೆ ಏನಾದರೂ ತೊಂದರೆ ಕೊಟ್ಟಿದ್ದೀಯಾ ಎಂದು ಆ ಹುಡುಗನನ್ನು ಕೇಳಿದರು, ಅದಕ್ಕೆ ಆ ಹುಡುಗ ಇಲ್ಲವಲ್ಲ ಎಂದು ಹೇಳಿದ ಎಂದು ಹೇಳಿದ್ದಾರೆ.
ಮುಂದುವರೆದು ಹುಡುಗನ ಈ ಮಾತು ಕೇಳಿ ನನಗೆ ಪಿತ್ತ ನೆತ್ತಿಗೇರಿತ್ತು ಹೀಗಾಗಿ ನಾನು ಜೋರಾಗಿ ಅಲ್ಲಿಯೇ ಕಿರುಚಿದೆ, ಅವನು ನನಗಿಂತ ಎರಡು ಮೂರು ವರ್ಷ ಚಿಕ್ಕವನಾಗಿದ್ದ ಕಾರಣ ಅವನ ಮೇಲೆ ಗದರಿದೆ ಆಗ ಹೆದರಿದ ಆತ ತನ್ನ ತಪ್ಪು ಒಪ್ಪಿಕೊಂಡ ಕ್ಷಮಿಸಿ ಎಂದು ಹೇಳಿದ ಎಂದಿರುವ ಅದಿತಿ ನಾನು ಅಕ್ಷರಶಃ ಅವನ ಕಾಲರ್ ಹಿಡಿದು ಇನ್ನೊಮ್ಮೆ ಹೀಗೆ ಯಾರ ಜೊತೆಯಾದರೂ ಮಾಡ್ತೀಯಾ ಎಂದು ಹೊಡೆಯಲು ಹೋಗಿದ್ದೆ ಎಂದು ಹೇಳಿದ್ದಾರೆ.


Click it and Unblock the Notifications











