ಹಸಿಬಿಸಿ ದೃಶ್ಯದಲ್ಲಿ ನಟಿಸುವಾಗ ನನ್ನ ಪತ್ನಿಯನ್ನು ನೆನಪಿಸಿಕೊಳ್ಳುತ್ತೇನೆ-ಆಯುಷ್ ಶರ್ಮಾ
ಬಾಲಿವುಡ್‌ನಲ್ಲಿ ನಟ ಸಲ್ಮಾನ್ ಖಾನ್ ನಟನೆಯ 'ಅಂತಿಮ್ ದಿ ಫೈನಲ್ ಟ್ರೂಥ್' ಸಿನಿಮಾದಲ್ಲಿ ಸಲ್ಮಾನ್ ಅವರ ತಂಗಿ ಗಂಡ ಆಯುಷ್ ಶರ್ಮಾ ಕೂಡ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಈ ಸಿನಿಮಾದ ಮೂಲಕ ಸಲ್ಮಾನ್ ಖಾನ್ ಮತ್ತು ಆಯುಷ್ ಶರ್ಮಾ ಮೊದಲ ಬಾರಿಗೆ ಒಟ್ಟಾಗಿದ್ದಾರೆ. ಚಿತ್ರದ ಒಂದು ರೊಮ್ಯಾಂಟಿಕ್ ಹಾಡು 'ಹೋನೆ ಲಗಾ..' ಕೆಲದಿನಗಳ ಹಿಂದಷ್ಟೇ ರಿಲೀಸ್ ಆಗಿ, ಪಡ್ಡೆ ಹುಡುಗರ ಮನಸ್ಸಲ್ಲಿ ಕಚಗುಳಿ ಇಟ್ಟಿತ್ತು. ಯಾಕಂದ್ರೆ ಈ ಹಾಡಿನಲ್ಲಿ ಹಸಿಬಿಸಿ ದೃಶ್ಯದಲ್ಲಿ ನಟ ಆಯುಷ್ ಶರ್ಮಾ ಮತ್ತು ಮಹಿಮಾ ಮಕ್ವಾನ ರೋಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದರು. ಈ ಹಾಡಿಗೆ ಒಳ್ಳೆ ರೆಸ್ಪಾನ್ಸ್ ಕೂಡ ಸಿಗುತ್ತಿದ್ದು, ಹಾಡಿನ ಹಸಿಬಿಸಿ ದೃಶ್ಯದಲ್ಲಿ ನಟಿಸುವಾಗ ನಾನು ನನ್ನ ಹೆಂಡತಿ ಮಕ್ಕಳನ್ನು ನೆನಪಿಸಿಕೊಂಡಿದ್ದೆ ಎಂದಿದ್ದಾರೆ ನಟ ಆಯುಷ್ ಶರ್ಮಾ.
ಮಹೇಶ್ ಮಂಜ್ರೇಕರ್ ನಿರ್ದೇಶನದ ಅಂತಿಮ್ ದಿ ಫೈನಲ್ ಟ್ರೂಥ್ ಸಿನಿಮಾ ಆಕ್ಷನ್ ಥ್ರಿಲ್ಲರ್ ಜಾನರ್ ಹೊತ್ತು ಬರುತ್ತಿದೆ. ಸಲ್ಮಾನ್ ಖಾನ್ ಮತ್ತು ಆಯುಷ್ ಶರ್ಮಾ ಇಬ್ಬರೂ ಸಿನಿಮಾದ ಪ್ರಮುಖ ಪಾತ್ರಧಾರಿಗಳಾಗಿ ಅಭಿನಯಿಸಿದ್ದಾರೆ. ಈಗಾಗಲೇ ಈ ಚಿತ್ರದ ಟ್ರೇಲರ್, ಟೀಸರ್ ರಿಲೀಸ್ ಆಗಿದ್ದು, ಸಾಕಷ್ಟು ನಿರೀಕ್ಷೆಯನ್ನು ಸಿನಿ ಪ್ರೇಮಿಗಳಲ್ಲಿ ಹುಟ್ಟಿಸಿದೆ. ಅಂತೇಯೆ ನವೆಂಬರ್ 9ರಂದು ಹೋನೆ ಲಗ ಹಾಡನ್ನು ಚಿತ್ರತಂಡ ರಿಲೀಸ್ ಮಾಡಿತ್ತು. ಈ ಹಾಡಿನ ಚಿತ್ರೀಕರಣದ ಸಂದರ್ಭ ತನ್ನ ತಲೆಯಲ್ಲಿ ಏನೇನೋ ಯೋಚನೆಗಳು ಬರುತಿದ್ದವಂತೆ.
ಈ ಬಗ್ಗೆ ಸ್ವತ ಆಯುಷ್ ಶರ್ಮಾ ಇತ್ತೀಚೆಗೆ ನಡೆದ ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ."ನಾನು ಈ ಹಾಡಿನ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾಗ ನನಗೆ ನನ್ನ ಪತ್ನಿ ಅರ್ಪಿತಾ ಖಾನ್ ಹಾಗೂ ಮಕ್ಕಳು ನೆನಪಿಗೆ ಬಂದಿದ್ದಾರೆ. ನಾನು ಹೋನೆ ಲಗಾ ಶೂಟಿಂಗ್ ಮಾಡುವಾಗ ತುಂಬಾ ಅಂದ್ರೆ ತುಂಬಾ ಗಾಬರಿಯಾಗಿದ್ದೆ. ಈ ರೀತಿಯಾಗಿ ನಾನು ತೆರೆಮೇಲೆ ಕಾಣಿಸಿಕೊಳ್ಳೋದು ಬೇಡ ಎಂದು ಯೋಚಿಸಿದ್ದೆ. ಈ ಸಂದರ್ಭದಲ್ಲಿ ನನ್ನ ಹೆಂಡತಿ ಆರ್ಪಿತ ಖಾನ್ ಮತ್ತು ಮಕ್ಕಳು ಈ ಹಾಡನ್ನು ನೊಡುತ್ತಾರೆ. ಹೀಗಾಗಿ ಈ ರೀತಿಯೆಲ್ಲ ನಾನು ಆಗಬಾರದು ಅಂತೆಲ್ಲಾ ಚಿಂತಿಸಿದ್ದೆ. ಆದರೆ ಸಿನಿಮಾಗಾಗಿ ನಾವು ಹೀಗೆ ಮಾಡಬೇಕು. ನಟನೆಯನ್ನು ನಟನೆಯಾಗೆ ನೋಡಬೇಕು ಎಂದು ಅರಿತು ನಂತರ ಶೂಟಿಂಗ್‌ನಲ್ಲಿ ಭಾಗಿಯಾಗಿ ಹಾಡು ಕಂಪ್ಲೀಟ್ ಮಾಡಿದ್ದೆ" ಎಂದಿದ್ದಾರೆ ಆಯುಷ್ ಶರ್ಮಾ.

ಮತ್ತೆ ಮಾತು ಮುಂದುವರೆಸಿದ ಆಯುಷ್ ಶರ್ಮಾ " ಸಿನಿಮಾ ನಿರ್ದೇಶಕ ಮಹೇಶ್ ಅವರು ಸಿನಿಮಾದ ಹಾಡಿನಲ್ಲಿ ಮಹಿಮಾಗೆ ಕಿಸ್ ಮಾಡೋದು ಅಗತ್ಯವಿದೆ ಎಂದು ನನ್ನನ್ನು ಬಕ್ರಾ ಮಾಡಿದ್ದರು. ಆಗ ನಾನು ಕಿಸ್ಸಿಂಗ್ ಸೀನ್ ಮಾಡಲ್ಲ ಎಂದು ಅವರಿಗೆ ತಿಳಿಸಿದ್ದೆ. ಆದರೆ ಅವರು ನನ್ನ ಮಾತು ಕೇಳಲಿಲ್ಲಾ. ಸಿನಿಮಾಗೆ ಕಿಸ್ಸಿಂಗ್ ಸೀನ್ ಆಗತ್ಯ ಇದೆ ಎಂದಿದ್ದರು. ಆಗ ನಾನು ಇದು ಗ್ಯಾಂಗ್‌ಸ್ಟರ್ ಸಿನಿಮಾ ನನ್ನ ಹತ್ರ ಈ ರೀತಿ ಮಾಡಿಸಬೇಡಿ. ಇದು ಲವ್ ಸ್ಟೋರಿ ಆಗೋದು ಬೇಡ ಎಂದೆಲ್ಲಾ ಹೇಳಿ ಅವರಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದೆ. ಅಷ್ಟೆ ಅಲ್ಲದೇ ಮಗುವಿನ ತರ ಮಹಿಮಾ ಬಳಿ ಕೂಡ ತೆರಳಿ ನನಗೆ ಕಿಸ್ಸಿಂಗ್ ಸೀನ್ ಮಾಡೋದು ಸರಿ ಎನ್ನಿಸುತ್ತಿಲ್ಲ, ನೀವು ಹೋಗಿ ನಿರ್ದೇಶಕರಿಗೆ ಹೇಳಿ ಅಂಗಲಾಚಿದ್ದೆ" ಎಂದು ಶೂಟಿಂಗ್ ಸಂದರ್ಭದಲ್ಲಿ ಆದಂತಹ ಘಟನೆಗಳನ್ನು ಆಯುಷ್ ಶರ್ಮಾ ನೆನಪಿಸಿಕೊಂಡಿದ್ದಾರೆ.


Click it and Unblock the Notifications











