ಹಿಂದಿ ಸಿನಿಮಾ ಆಗಲಿದೆ ಜನಪ್ರಿಯ ಸರಣಿ Money Heist! ಯಾರು ನಿರ್ದೇಶಕರು?

By ಜೇಮ್ಸ್ ಮಾರ್ಟಿನ್

ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುವ ಜನಪ್ರಿಯ ಸರಣಿ ಮನಿ ಹೈಸ್ಟ್ ಇದೀಗ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟಿದೆ. ಬ್ಯಾಂಕ್ ಕಳ್ಳತನ, ದರೋಡೆ ಕುರಿತಾದ ಅನೇಕ ಚಿತ್ರ, ಸರಣಿ ಬಂದಿದ್ದರೂ ಮನಿ ಹೈಸ್ಟ್ ವಿಭಿನ್ನವಾಗಿ ಎದ್ದು ನಿಲ್ಲುತ್ತದೆ. ಸ್ಪಾನಿಷ್ ಮೂಲದ ಮನಿ ಹೈಸ್ಟ್ ಈಗ ಹಿಂದಿಯಲ್ಲಿ ಒಟಿಟಿ ಸಣ್ಣ ಪರದೆ ದಾಟಿ ಬೆಳ್ಳಿ ಪರದೆ ಮೇಲೆ ಮೂಡಲಿದೆ ಎಂದು ಪಿಂಕ್ ವಿಲ್ಲಾ ವರದಿ ಮಾಡಿದೆ.

ಬಾಜಿಗರ್, ಸೋಲ್ಜರ್, ಅಜ್ನಬಿ, ಐತರಾಜ್, ಹಮ್ ರಾಜ್, ರೇಸ್ 1 ಹಾಗೂ 2 ಸರಣಿ ಮುಂತಾದ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಅಬ್ಬಾಸ್ ಮಸ್ತಾನ್ ನಿರ್ದೇಶಕರ ಜೋಡಿಯ ಕಣ್ಣು ಈಗ ಮನಿಹೈಸ್ಟ್ ಮೇಲೆ ಬಿದ್ದಿದೆ. ನವೆಂಬರ್ 11ರಿಂದ ಹೊಸ ಚಿತ್ರದ ಚಿತ್ರೀಕರಣಕ್ಕೆ ಸಕಲ ಸಿದ್ಧತೆ ಪೂರ್ಣಗೊಂಡಿದೆ. ಹೊಸ ಚಿತ್ರಕ್ಕೆ ಥ್ರೀ ಮಂಕೀಸ್ ಎಂದು ಹೆಸರಿಡಲಾಗಿದ್ದು, ಈ ಚಿತ್ರ ಮನಿಹೈಸ್ಟ್ ಸರಣಿ ಆಧಾರವಾಗಿದೆ ಎಂಬ ಸುದ್ದಿ ಬಂದಿದೆ.

ಥ್ರೀ ಮಂಕೀಸ್ ಚಿತ್ರಕ್ಕೆ ಕಥೆ, ಚಿತ್ರಕಥೆ ಎಲ್ಲವೂ ಸಿದ್ಧವಾಗಿದೆ, ಮುಂಬೈ ನಗರದಲ್ಲಿ ಬೃಹತ್ ಸೆಟ್ ನಿರ್ಮಾಣ ಕಾರ್ಯ ಮಾಡಲಾಗುತ್ತಿದ್ದು, ನ.11ರಿಂದ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆ. ಬ್ಯಾಂಕ್ ರಾಬರಿ ಕಥೆಯನ್ನು ಹೇಗೆಲ್ಲ ವಿಭಿನ್ನವಾಗಿ ಈ ನಿರ್ದೇಶಕ ಜೋಡಿ ತೋರಿಸಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.

Abbas Mustan duo to remake Money Heist series, titled Three Monkeys

ಸಂಪೂರ್ಣ ರಿಮೇಕ್ ಅಲ್ಲ:
ಮನಿ ಹೈಸ್ಟ್ ಕಥೆಯನ್ನು ಆಧಾರವಾಗಿಟ್ಟುಕೊಂಡು ಇಲ್ಲಿನ ನೆಟಿವಿಟಿಗೆ ತಕ್ಕಂತೆ ಕಥೆ ಹೆಣೆಯಲಾಗಿದ್ದು, ಮಾಸ್ಟರ್ ಮೈಂಡ್ ಪ್ರೊಫೆಸರ್ ಪಾತ್ರಕ್ಕೆ ಇಲ್ಲೂ ಪ್ರಾಮುಖ್ಯತೆ ಸಿಗಲಿದೆ. ಆದರೆ, ಮೂಲ ಸರಣಿಯಂತೆ ಎಲ್ಲಾ ಪಾತ್ರಗಳಿಗೂ ಅದರದ್ದೇ ಆದ ಆಕರ್ಷಣೆಯಿದೆ, ಹೀಗಾಗಿ ಕಥೆಯಲ್ಲಿ ಬದಲಾವಣೆ ಮಾಡಿಕೊಂಡರೂ ಪಾತ್ರಗಳು ಎಂದಿನಂತೆ ಮಿಂಚಲು ಅವಕಾಶವಿರಲಿದೆ ಎಂದು ಮೂಲಳಿಂದ ವಿಷಯ ಹೊರ ಬಂದಿದೆ. ಒಟ್ಟಾರೆ, ಸೀನ್ ಬೈ ಸೀನ್ ರಿಮೇಕ್ ಅಂತೂ ಮಾಡುವುದಿಲ್ಲ, ಕಥೆ, ಕಥೆಗೆ ತಕ್ಕ ಪಾತ್ರ, ಪಾತ್ರಕ್ಕೆ ತಕ್ಕ ಪಾತ್ರಧಾರಿಗಳನ್ನು ಆಯ್ಕೆ ಮಾಡಿಕೊಂಡು ಹೊಸ ರೂಪದಲ್ಲಿ ಮನಿಹೈಸ್ಟ್ ನೀಡಲು ಅಬ್ಬಾಸ್ ಮಸ್ತಾನ್ ಮುಂದಾಗಿದ್ದಾರೆ.

Abbas Mustan duo to remake Money Heist series, titled Three Monkeys

ಮುಂದಿನ ಕೆಲ ತಿಂಗಳುಗಳ ಕಾಲ ಚಿತ್ರೀಕರಣ ನಡೆಯಲಿದ್ದು, 2022ರ ದ್ವೀತಿಯಾರ್ಧದಲ್ಲಿ ಚಿತ್ರ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಅಬ್ಬಾಸ್ ಪುತ್ರ ಮುಸ್ತಫಾ ಚಿತ್ರರಂಗಕ್ಕೆ ಕಾಲಿಟ್ಟ ಬಳಿಕ ಮತ್ತೆ ನಿರ್ದೇಶಕ ದ್ವಯರ ಸುದ್ದಿ ಇರಲಿಲ್ಲ. ಈಗ ದೊಡ್ಡ ಮಟ್ಟದಲ್ಲಿ ಸಿನಿಮಾ ಮಾಡಲು ಮುಂದಾಗಿದ್ದಾರೆ. ಇದೆಲ್ಲದರ ನಡುವೆ ಈ ಚಿತ್ರದಲ್ಲಿ ಯಾರೆಲ್ಲ ನಟಿಸಬಹುದು ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಎಂದಿನಂತೆ ನಿರ್ದೇಶಕರ ನೆಚ್ಚಿನ ತಾರೆ ಶಾರುಖ್ ಖಾನ್‌ರನ್ನು ಪ್ರೊಫೆಸರ್ ಲುಕ್‌ನಲ್ಲಿ ನೋಡಬಹುದೇ ಎಂಬ ನಿರೀಕ್ಷೆ ಹುಟ್ಟುಕೊಂಡಿದೆ.

ಜನಪ್ರಿಯ ನೆಟ್‌ಫ್ಲಿಕ್ಸ್‌ ವೆಬ್ ಸರಣಿ 'ಮನಿಹೈಸ್ಟ್‌'ನ ಐದನೇ ಸೀಸನ್‌ನ ಮೊದಲ ಭಾಗ ಈಗಾಗಲೇ ಬಿಡುಗಡೆ ಆಗಿದೆ. ಐದನೇ ಸೀಸನ್‌ನ ಇನ್ನೊಂದು ಭಾಗ ಡಿಸೆಂಬರ್ 03ಕ್ಕೆ ಬಿಡುಗಡೆ ಆಗಲಿದ್ದು, ಅದು 'ಮನಿಹೈಸ್ಟ್' ಸರಣಿಯ ಕೊನೆಯ ಭಾಗವಾಗಿರಲಿದೆ.

'ಮನಿಹೈಸ್ಟ್' ವೆಬ್ ಸರಣಿಯ ಐದನೇ ಸೀಸನ್‌ನ ಮೊದಲ ಭಾಗದಲ್ಲಿ ಪೊಲೀಸರ ಮೇಲುಗೈ ಆಗಿದೆ. ಟೊಕಿಯೊ ನಿಧನ ಹೊಂದಿದ್ದಾಳೆ. ಹೆಲ್‌ಸಿಂಕಿ ಸಾಯುವ ಸ್ಥಿತಿಯಲ್ಲಿದ್ದಾನೆ. ದರೋಡೆಕೋರ ಗುಂಪಿಗೆ ಬಹಳ ದೊಡ್ಡ ಹಿನ್ನೆಡೆ ಆಗಿದೆ. ಡಿಸೆಂಬರ್ 03 ರಂದು ಬಿಡುಗಡೆ ಆಗಲಿರುವ ಕೊನೆಯ ಭಾಗದಲ್ಲಿ ಉಳಿದ ದರೋಡೆಕೋರರ ಗುಂಪು ಸಹ ಸಾಯುತ್ತದೆಯೇ ಅಥವಾ ಪೊಲೀಸರಿಗೆ ಶರಣಾಗುತ್ತಾರೊ ಅಥವಾ ಬ್ಯಾಂಕ್‌ ಆಫ್ ಸ್ಪೇನ್‌ನಿಂದ ತಪ್ಪಿಸಿಕೊಂಡು ಹೊರಗೆ ಹೋಗುತ್ತಾರೆಯೋ? ಕಾದು ನೋಡಬೇಕಿದೆ.

ಮನಿಹೈಸ್ಟ್ ಈ ವರೆಗಿನ ಸರಣಿಗಳು ಪ್ರೀತಿ, ಸ್ನೇಹ, ಆದರ್ಶ, ತ್ಯಾಗ, ಹೋರಾಟ, ಮೈನವಿರೇಳಿಸುವ ಆಕ್ಷನ್, ಕಳ್ಳ-ಪೊಲೀಸ್ ನಡುವೆ ಆಟ ಇವುಗಳನ್ನೇ ಒಳಗೊಂಡ ಕತೆಯಾಗಿತ್ತು. 'ಮನಿಹೈಸ್ಟ್ 5'ನಲ್ಲೂ ಅದು ಮುಂದುವರೆದಿದೆ. ಆದರೆ 'ಮನಿಹೈಸ್ಟ್ 5'ನಲ್ಲಿ ದರೋಡೆಕೋರರಿಗಿಂತಲೂ ಪೊಲೀಸರೇ ಮೇಲುಗೈ ಸಾಧಿಸುತ್ತಾರೆ. ದರೋಡೆಯ ಮಧ್ಯದಲ್ಲಿರುವ ದರೋಡೆಕೋರರಿಗೆ ಹೊರ ಹೋಗಲು ದಾರಿಯೇ ಇಲ್ಲದಂತಾಗಿ ಅದು ಅವರ ಉಳಿವಿನ ಹೋರಾಟವಾಗಿ ರೂಪುಗೊಳ್ಳುತ್ತದೆ. ಕೊನೆಯಲ್ಲಿ ಪ್ರೇಕ್ಷಕರ ಮೆಚ್ಚಿನ ಪಾತ್ರವೊಂದು ಸಾಯುತ್ತದೆ. ಆ ಮೂಲಕ 'ಮನಿಹೈಸ್ಟ್ 5'ನ ಮೊದಲ ಭಾಗಕ್ಕೆ ವಿಷಾದದ ಅಂತ್ಯ ನೀಡಿದ್ದಾರೆ ನಿರ್ದೇಶಕ ಅಲೆಕ್ಸ್ ಪಿನ್ಯಾ.

More from Filmibeat

English summary
Popular director duo Abbas Mustan to remake Money Heist series in Hindi, titled Three Monkeys reports Pinkvilla.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X