twitter
    For Quick Alerts
    ALLOW NOTIFICATIONS  
    For Daily Alerts

    ಅವಾರ್ಡ್ ಫಂಕ್ಷನ್‌ಗಳಲ್ಲಿ ಕಡೆಗಣನೆ: ಬಾಲಿವುಡ್ ಲಾಬಿ ವಿರುದ್ಧ ಕಿಡಿಕಾರಿದ ಅಭಯ್ ಡಿಯೋಲ್

    |

    ಬಾಲಿವುಡ್‌ನಲ್ಲಿ ಕಷ್ಟದಿಂದ ಬೆಳೆಯುತ್ತಿರುವ ನಟರಲ್ಲಿ ಅಭಯ್ ಡಿಯೋಲ್ ಒಬ್ಬರು. ಕುಟುಂಬದ ಹಿನ್ನೆಲೆಯ ಬಲವಿದ್ದರೂ ಅಭಯ್ ಅಲ್ಲಿನ ಗುಂಪುಗಳಲ್ಲಿ ಕಾಣಿಸಿಕೊಂಡವರಲ್ಲ. ತಮ್ಮ ಮನಸಿನಲ್ಲಿರುವ ಮಾತನ್ನು ನೇರವಾಗಿ ಹೇಳುವವರಾದರೂ ಮಾತನಾಡುವುದು ಕಡಿಮೆ.

    Recommended Video

    ಸುಶಾಂತ್ ಸಾವು ಅವರನ್ನು ನಾನು ಸುಮ್ಮನೆ ಬಿಡುವುದಿಲ್ಲ ಎಂದ ಕಂಗನ | Kangana Ranaut | Oneindia Kannada

    ಸುಶಾಂತ್ ಸಿಂಗ್ ರಜಪೂತ್ ಸಾವಿನ ಹಿನ್ನೆಲೆಯಲ್ಲಿ ಚರ್ಚೆಯಾಗುತ್ತಿರುವ ಬಾಲಿವುಡ್‌ನಲ್ಲಿ ಸ್ವಜನಪಕ್ಷಪಾತ, ಹೊಸ ಕಲಾವಿದರಿಗೆ ಆಗುವ ಅವಮಾನ, ಅವಕಾಶಗಳನ್ನು ಕಸಿದುಕೊಳ್ಳುವ ಚಟುವಟಿಕೆಗಳ ಬಗ್ಗೆ ಅಭಯ್ ಕೂಡ ಮಾತನಾಡಿದ್ದಾರೆ. ಅವಾರ್ಡ್ ಶೋಗಳಲ್ಲಿ ತಮ್ಮನ್ನು ಅವಮಾನಿಸಲಾಗಿತ್ತು ಎಂಬ ಕಹಿ ಸತ್ಯವನ್ನು ಅವರು ಹೊರಹಾಕಿದ್ದಾರೆ. ಸಿನಿಮಾಗಳಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರೂ ಪೋಷಕ ಪಾತ್ರ ಎಂಬಂತೆ ಬಿಂಬಿಸುವ ಮೂಲಕ ಕೀಳಾಗಿ ನಡೆಸಿಕೊಳ್ಳಲಾಗಿತ್ತು ಎಂದು ಹೇಳಿದ್ದಾರೆ.

    ಸಾಲು ಸಾಲು ದುರ್ಘಟನೆಗಳು: ಸುಶಾಂತ್ ಸಾವಿನಿಂದ ಮನನೊಂದು ಜೀವ ತೆಗೆದುಕೊಂಡ ಬಾಲಕಿಸಾಲು ಸಾಲು ದುರ್ಘಟನೆಗಳು: ಸುಶಾಂತ್ ಸಾವಿನಿಂದ ಮನನೊಂದು ಜೀವ ತೆಗೆದುಕೊಂಡ ಬಾಲಕಿ

    2011ರಲ್ಲಿ ಬಿಡುಗಡೆಯಾದ ಜೋಯಾ ಅಖ್ತರ್ ನಿರ್ದೇಶನದ ಬಹುತಾರಾಗಣದ 'ಜಿಂದಗಿ ನಾ ಮಿಲೇಗಿ ದುಬಾರಾ' ಚಿತ್ರದಲ್ಲಿ ಹೃತಿಕ್ ರೋಷನ್, ಕತ್ರಿಕಾ ಕೈಫ್, ಫರ್ಹಾನ್ ಅಖ್ತರ್, ಅಭಯ್ ಡಿಯೋಲ್, ಕಲ್ಕಿ ಕೋಚಿನ್ ಮುಂತಾದವರು ನಟಿಸಿದ್ದರು. ಮುಂದೆ ಓದಿ...

    ಹಿಟ್ ಆಗಿದ್ದ ಚಿತ್ರ

    ಹಿಟ್ ಆಗಿದ್ದ ಚಿತ್ರ

    ಮೂವರು ಸ್ನೇಹಿತರು ರಜೆಯ ಅವಧಿಯಲ್ಲಿ ಸೇರಿ ದೇಶಗಳನ್ನು ಸುತ್ತಾಡುತ್ತಾ ಹುಚ್ಚಾಟಗಳನ್ನು ಮಾಡಿ ಆನಂದಿಸುವ ಕಥೆ ಜನರಿಗೆ ಇಷ್ಟವಾಗಿತ್ತು. ಅದರ ಜತೆಗೆ ಬದುಕಿನ ಹುಡುಕಾಟದ ಪ್ರಯಾಣದ ಅಂಶಗಳು ಆಪ್ತವಾಗಿದ್ದವು. ಇದರಲ್ಲಿ ಎಲ್ಲರಿಗೂ ಪ್ರಮುಖ ಪಾತ್ರಗಳೇ ಆಗಿದ್ದರೂ ಹೃತಿಕ್ ರೋಷನ್ ಹಾಗೂ ಕತ್ರಿನಾ ಕೈಫ್ ಅವರದ್ದ ಲೀಡ್ ಪಾತ್ರಗಳು ಹಾಗೂ ಉಳಿದವರದ್ದು ಪೋಷಕ ಪಾತ್ರಗಳೆಂಬಂತೆ ಬಿಂಬಿಸಲಾಗಿತ್ತು ಎನ್ನುವುದು ಅಭಯ್ ಬೇಸರ.

    ನಾವು ಪೋಷಕ ಪಾತ್ರಗಳಂತೆ!

    ನಾವು ಪೋಷಕ ಪಾತ್ರಗಳಂತೆ!

    'ಬಹುತೇಕ ಪ್ರತಿಯೊಂದು ಅವಾರ್ಡ್ ಫಂಕ್ಷನ್‌ಗಳಲ್ಲಿಯೂ ನನ್ನನ್ನು ಹಾಗೂ ಫರ್ಹಾನ್ ಅವರನ್ನು ಮುಖ್ಯ ಪಾತ್ರಗಳಿಂದ ಡಿಮೋಟ್ ಮಾಡಲಾಗುತ್ತಿತ್ತು. ನಮ್ಮನ್ನು ಪೋಷಕ ಪಾತ್ರಗಳಿಗೆ ನಾಮನಿರ್ದೇಶನ ಮಾಡಲಾಗುತ್ತಿತ್ತು. ಹೃತಿಕ್ ಮತ್ತು ಕತ್ರಿನಾ ಅವರನ್ನು ಚಿತ್ರದ ಲೀಡಿಂಗ್ ರೋಲ್‌ಗಳಲ್ಲಿರುವವರು ಎಂದೇ ನಾಮನಿರ್ದೇಶನ ಮಾಡಲಾಗುತ್ತಿತ್ತು.

    ತೆರೆಗೆ ಬರುತ್ತಿದೆ ಸುಶಾಂತ್ ಸಿಂಗ್ ಜೀವನ: ಸಿನಿಮಾದ ಹೆಸರೇನು?ತೆರೆಗೆ ಬರುತ್ತಿದೆ ಸುಶಾಂತ್ ಸಿಂಗ್ ಜೀವನ: ಸಿನಿಮಾದ ಹೆಸರೇನು?

    ಉದ್ಯಮದ ಲಾಜಿಕ್ ಇಷ್ಟೇ!

    ಉದ್ಯಮದ ಲಾಜಿಕ್ ಇಷ್ಟೇ!

    ಉದ್ಯಮದಲ್ಲಿನ ಅದರದ್ದೇ ಆದ ಲಾಜಿಕ್ ಪ್ರಕಾರ, ಈ ಚಿತ್ರದಲ್ಲಿ ಒಬ್ಬ ಪುರುಷ ಮತ್ತು ಮಹಿಳೆ ಪ್ರೀತಿಯಲ್ಲಿ ಬೀಳುತ್ತಾರೆ. ಪುರುಷ ತೆಗೆದುಕೊಳ್ಳುವ ಎಲ್ಲ ನಿರ್ಧಾರಗಳನ್ನು ಆತನ ಸ್ನೇಹಿತರು ಬೆಂಬಲಿಸುತ್ತಾರೆ ಎಂಬಂತಿದೆ.

    ನಾಚಿಕೆಗೇಡು ಬಹಿರಂಗ

    ನಾಚಿಕೆಗೇಡು ಬಹಿರಂಗ

    ಉದ್ಯಮದಲ್ಲಿನ ಜನರ ಲಾಬಿಯು ನಿಮ್ಮ ವಿರುದ್ಧ ಹೇಗೆ ಇದೆ ಎಂಬುದು ಕೆಲವೊಮ್ಮೆ ನಿಗೂಢ ಹಾಗೂ ಕೆಲವೊಮ್ಮೆ ಬಹಿರಂಗವಾಗಿರುತ್ತದೆ. ಈ ಪ್ರಕರಣದಲ್ಲಿ ನಾಚಿಕೆಗೇಡಿನಂತೆ ಬಹಿರಂಗವಾಗಿ ಪ್ರದರ್ಶಿಸಲಾಗಿತ್ತು. ನಾನು ಈ ಎಲ್ಲ ಅವಾರ್ಡ್ಸ್‌ಗಳನ್ನು ಬಹಿಷ್ಕರಿಸಿದ್ದೆ. ಆದರೆ ಫರ್ಹಾನ್ ಅದರ ಬಗ್ಗೆ ಪರವಾಗಿಲ್ಲ ಎಂಬಂತೆ ಇದ್ದರು ಎಂದು ಕಿಡಿಕಾಡಿದ್ದಾರೆ.

    English summary
    Zindagi Na milegi Dobara actor Abhay Deol said he and Farhan Akhtar were demoted in award shows as nominating them to supporting roles.
    Monday, June 22, 2020, 23:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X