ಆದಿಪುರುಷ್ ಚಿತ್ರದ 10,000 ಟಿಕೆಟ್‌ಗಳ ಉಚಿತ ವಿತರಣೆ; ಈ ಜನರಿಗೆ ಮಾತ್ರ!

ನಟ ಪ್ರಭಾಸ್ ಹಾಗೂ ಓಂ ರಾವತ್ ಕಾಂಬಿನೇಶನ್‌ನ ಬಹು ನಿರೀಕ್ಷಿತ ಚಿತ್ರ ಆದಿಪುರುಷ್ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಚಿತ್ರ ಇದೇ ಜೂನ್ 16ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುತ್ತಿರುವ ಈ ಚಿತ್ರ ಕನ್ನಡ, ತೆಲುಗು, ಹಿಂದಿ, ಮಲಯಾಳಂ ಹಾಗೂ ಕನ್ನಡ ಭಾಷೆಗಳಲ್ಲಿ ತೆರೆಗೆ ಬರಲಿದ್ದು, 500 ಕೋಟಿ ವೆಚ್ಚದಲ್ಲಿ ತಯಾರಾಗಿದೆ.

ಇನ್ನು ಚಿತ್ರ ಮುಂದಿನ ವಾರ ಬಿಡುಗಡೆಯಾಗಲಿದ್ದು, ಮುಂಗಡ ಬುಕಿಂಗ್ ಯಾವಾಗ ಆರಂಭವಾಗಲಿದೆ ಎಂದು ಸಿನಿ ರಸಿಕರು ಹಾಗೂ ಪ್ರಭಾಸ್ ಅಭಿಮಾನಿಗಳು ಕಾತರರಾಗಿ ಕಾಯುತ್ತಿದ್ದಾರೆ. ಹೀಗಾಗಿ ಟಿಕೆಟ್‌ಗಳಿಗೆ ದೊಡ್ಡ ಮಟ್ಟದ ಬೇಡಿಕೆಗಳು ಉಂಟಾಗಲಿದ್ದು, ನಿರ್ಮಾಪಕರೊಬ್ಬರು ಚಿತ್ರದ 10,000 ಟಿಕೆಟ್‌ಗಳನ್ನು ಉಚಿತವಾಗಿ ನೀಡಲು ಮುಂದಾಗಿದ್ದಾರೆ.

Abhishek Agarwal to distribute Adipurush 10000 free tickets to Telangana govt schools and orphanages

ಹೌದು, ದ ಕಾಶ್ಮೀರ್ ಫೈಲ್ಸ್ ಹಾಗೂ ಕಾರ್ತಿಕೇಯ 2 ಚಿತ್ರಗಳ ನಿರ್ಮಾಪಕ ಅಭಿಷೇಕ್ ಅಗರ್ವಾಲ್ ಆದಿಪುರುಷ್ ಚಿತ್ರದ ಒಟ್ಟು ಹತ್ತು ಸಾವಿರ ಟಿಕೆಟ್‌ಗಳನ್ನು ಉಚಿತವಾಗಿ ನೀಡಲು ತೀರ್ಮಾನಿಸಿದ್ದಾರೆ. ತೆಲಂಗಾಣ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳು, ಅನಾಥಾಶ್ರಮಗಳು ಹಾಗೂ ವೃದ್ಧಾಶ್ರಮಗಳಿಗೆ ಈ ಹತ್ತು ಸಾವಿರ ಟಿಕೆಟ್‌ಗಳನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.

ಆದಿಪುರುಷ್ ಚಿತ್ರತಂಡ ಈ ಸುದ್ದಿಯನ್ನು ಅಧಿಕೃತವಾಗಿ ತಿಳಿಸಿದ್ದು, ಮಾನವರಿಗೆ ರಾಮನ ಪ್ರತಿ ಭಾಗ ಸಹ ಪಾಠವಾಗಿದೆ, ಈ ತಲೆಮಾರಿನವರು ರಾಮನ ಬಗ್ಗೆ ತಿಳಿಯಬೇಕು ಹಾಗೂ ಆತನ ದೈವಿಕ ಹೆಜ್ಜೆಗಳನ್ನು ಅನುಸರಿಸಬೇಕು ಎಂಬ ಕಾರಣಕ್ಕೆ ಅಭಿ‍ಷೇಕ್ ಅಗರ್ವಾಲ್ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಈ ಜೂನ್‌ನಲ್ಲಿ ಮಹಾನ್ ಪುರುಷ ರಾಮನನ್ನು ಸಂಭ್ರಮಿಸೋಣ ಎಂದು ಪೋಸ್ಟ್ ಹಂಚಿಕೊಂಡಿದೆ.

ಇನ್ನು ಮೊದಲಿಗೆ ತನ್ನ ಕಳಪೆ ವಿಎಫ್‌ಎಕ್ಸ್ ಹಾಗೂ ಮೇಕಿಂಗ್‌ನಿಂದ ಸಿಕ್ಕಾಪಟ್ಟೆ ದೊಡ್ಡ ಮಟ್ಟದಲ್ಲಿ ಟ್ರೋಲ್ ಆಗಿದ್ದ ಆದಿಪುರುಷ್ ನಂತರ ಟ್ರೈಲರ್ ಹಾಗೂ ಹಾಡುಗಳು ಬಿಡುಗಡೆಯಾದ ಬಳಿಕ ಸಿಕ್ಕಾಪಟ್ಟೆ ಒಳ್ಳೆಯ ಪ್ರಶಂಸೆಯನ್ನು ಪಡೆದುಕೊಂಡಿದೆ.

ಅದರಲ್ಲಿಯೂ ಚಿತ್ರದ ಜೈ ಶ್ರೀ ರಾಮ್ ಹಾಗೂ ರಾಮ್ ಸೀಯಾ ರಾಮ್ ಹಾಡುಗಳು ಬಿಡುಗಡೆಯಾದ ಮೇಲಂತೂ ಚಿತ್ರದ ಮೇಲೆ ಸಿನಿ ರಸಿಕರಿಗೆ ಇದ್ದ ಅಭಿಪ್ರಾಯವೇ ಬದಲಾಗಿದ್ದು, ಕೆಟ್ಟ ವಿಎಫ್ಎಕ್ಸ್ ಈ ಚಿತ್ರವನ್ನು ನೋಡುವುದು ವೇಸ್ಟ್ ಎಂದಿದ್ದವರೆಲ್ಲಾ ಫಸ್ಟ್ ಡೇ ಫಸ್ಟ್ ಶೋ ನೋಡಲು ಕಾತರರಾಗಿದ್ದಾರೆ.

ದಾಖಲೆ ಬರೆದ ಹಾಡುಗಳು: ಮೊನ್ನೆಯಷ್ಟೇ ಪ್ರಭಾಸ್ ಅಭಿನಯದ ಮುಂದಿನ ಚಿತ್ರ ಆದಿಪುರುಷ್‌ನ ಎರಡನೇ ಹಾಡು ರಾಮ್ ಸಿಯಾ ರಾಮ್ ಬಿಡುಗಡೆಯಾಗಿತ್ತು. ಮೊದಲ ಹಾಡಾದ ಜೈ ಶ್ರೀರಾಮ್ ರೀತಿಯೇ ಈ ಹಾಡೂ ಸಹ ಯುಟ್ಯೂಬ್‌ನಲ್ಲಿ ಧೂಳ್ ಎಬ್ಬಿಸಿದೆ. ಮೇಲೆ ಹೇಳಿದಂತೆ ಹಾಡೊಂದು ಚಿತ್ರವೊಂದಕ್ಕೆ ಯಾವ ರೀತಿಯ ಪ್ರಚಾರ ಮಾಡಬಹುದೋ ಆ ಕೆಲಸಗಳನ್ನು ಈ ಎರಡು ಹಾಡುಗಳು ಮಾಡಿವೆ. ರಾಮ್ ಸೀಯಾ ರಾಮ್ ಬಿಡುಗಡೆಯಾದ 24 ಗಂಟೆಗಳಲ್ಲಿ ದಾಖಲೆಯ ವೀಕ್ಷಣೆಗಳನ್ನು ಪಡೆದುಕೊಂಡಿದ್ದು ದೇಶದಲ್ಲಿ ಅತಿಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡ ಹಾಡುಗಳ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಇನ್ನು ಇದೇ ಆದಿಪುರುಷ್ ಚಿತ್ರದ ಜೈ ಶ್ರೀರಾಮ್ ಹಾಡು ದೇಶದಲ್ಲಿ ಮೊದಲ 24 ಗಂಟೆಗಳಲ್ಲಿ ಯುಟ್ಯೂಬ್‌ನಲ್ಲಿ ಅತಿಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡ ಹಾಡು ಎನಿಸಿಕೊಂಡಿದೆ.

More from Filmibeat

English summary
Abhishek Agarwal to distribute Adipurush 10000 free tickets to Telangana govt schools and orphanages. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X