ಅಭಿಷೇಕ್ ಬಚ್ಚನ್- ಐಶ್ವರ್ಯ ರೈ ದಾಂಪತ್ಯದಲ್ಲಿ ಬಿರುಕು? ಮೌನ ಮುರಿದ ಜ್ಯೂ. ಬಚ್ಚನ್

ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಹಾಗೂ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ 16 ವರ್ಷಗಳ ಹಿಂದೆ ಮದುವೆ ಆಗಿದ್ದರು. ಪರಸ್ಪರ ಪ್ರೀತಿಸಿ ಹಸೆಮಣೆ ಏರಿದ್ದರು. ಮಗಳು ಆರಾಧ್ಯ ಜೊತೆ ದಂಪತಿಯದ್ದು ಸುಖೀ ಸಂಸಾರ. ಇದೀಗ ಅಭಿ-ಐಶ್ ಡಿವೋರ್ಸ್ ವದಂತಿ ವೈರಲ್ ಆಗ್ತಿದೆ. ಇತ್ತೀಚಿನ ದಿನಗಳಲ್ಲಿ ದಂಪತಿ ಎಲ್ಲೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿಲ್ಲ. ಇದು ಡಿವೋರ್ಸ್ ಗುಸುಗುಸುಗೆ ಕಾರಣವಾಗಿದೆ.

ಏಳೆಂಟು ವರ್ಷಗಳ ಹಿಂದೆ ಕೂಡ ಇದೇ ರೀತಿ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ದೂರಾಗುತ್ತಾರೆ ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೆ ಅದೆಲ್ಲ ಸುಳ್ಳು ಎನ್ನುವುದು ಸಾಬೀತಾಗಿತ್ತು. ಇದೀಗ ಮತ್ತೊಮ್ಮೆಸೋಶಿಯಲ್ ಮೀಡಿಯಾದಲ್ಲಿ ಇಂತದ್ದೇ ಚರ್ಚೆ ಶುರುವಾಗಿದೆ. ಇತ್ತೀಚೆಗೆ ದಂಪತಿ ಒಟ್ಟಿಗೆ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಮಗಳ ಜೊತೆಗೆ ಐಶ್ ಕಾರ್ಯಕ್ರಮಗಳಲ್ಲಿ ಭಾಗಿ ಆಗುತ್ತಿದ್ದಾರೆ. ಇಲ್ಲ ಆಕೆ ಒಬ್ಬೊಂಟಿಯಾಗಿ ಹೋಗುತ್ತಿದ್ದಾರೆ. ಮೊನ್ನೆ ಮೊನ್ನೆ ಮುಂಬೈನಲ್ಲಿ ನಡೆದ ನೀತಾ ಅಂಬಾನಿ ಕಲ್ಚರಲ್ ಸೆಂಟರ್ ಲಾಂಚ್‌ ಈವೆಂಟ್‌ನಲ್ಲೂ ಅಭಿಷೇಕ್ ಸುಳಿವು ಇರಲಿಲ್ಲ.

Abhishek Bachchan and Aishwarya Rai divorce rumours; Jr Bachchan reacts to Aishwarya Rais pic

ಇದೊಂದೇ ಕಾರ್ಯಕ್ರಮ ಅಲ್ಲ. ಸಾಕಷ್ಟು ಕಾರ್ಯಕ್ರಮಗಳಲ್ಲಿ ಹೀಗೆ ಐಶ್ ಒಂಟಿಯಾಗಿ ಹಾಜರಾಗುತ್ತಿರುವುದರಿಂದ ಚರ್ಚೆ ಶುರುವಾಗಿದೆ. ಇಬ್ಬರು ನಡುವೆ ಎಲ್ಲವೂ ಸರಿಯಿಲ್ಲ. ಇಬ್ಬರ ಮಧ್ಯೆ ಜಗಳ ಆಗಿರಬಹುದು. ಇಬ್ಬರು ಡಿವೋರ್ಸ್ ತೆಗೆದುಕೊಳ್ಳುತ್ತಾರೆ ಅಂತೆಲ್ಲಾ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚೆಗೆ ಸೆಲೆಬ್ರೆಟಿಗಳ ಡಿವೋರ್ಸ್ ವಿಚಾರ ಕಾಮನ್ ಆಗಿರೋದರಿಂದ ಈ ಸುದ್ದಿ ಕೂಡ ವೈರಲ್ ಆಗ್ತಿದೆ. ಇದೀಗ ಅಭಿ ಪರೋಕ್ಷವಾಗಿ ಇದಕ್ಕೆ ಉತ್ತರ ಕೊಟ್ಟಂತೆ ಕಾಣುತ್ತಿದೆ. ನೆಟ್ಟಿಗರೊಬ್ಬರ ಪೋಸ್ಟ್‌ಗೆ ಅಭಿ ರಿಪ್ಲೇ ಎಲ್ಲಾ ವದಂತಿಗೂ ತೆರೆ ಎಳೆದಿದೆ.

ಐಶ್ವರ್ಯ ರೈ ಹಾಗೂ ಆರಾಧ್ಯ ಇಬ್ಬರು ನೀತಾ ಅಂಬಾನಿ ಕಲ್ಚರಲ್ ಸೆಂಟರ್ ಈವೆಂಟ್‌ನಲ್ಲಿ ಭಾಗಿ ಆಗಿದ್ದ ಫೋಟೊವೊಂದನ್ನು ಅಭಿಮಾನಿಯೊಬ್ಬರು ಹಂಚಿಕೊಂಡಿದ್ದಾರೆ. ನನಗೆ ಇವರಿಬ್ಬರು ಅಚ್ಚುಮೆಚ್ಚು ಎಂದು ಬರೆದು ಲವ್ ಸಿಂಬಲ್ ಎಮೋಜಿ ಹಾಕಿ ಫೋಟೊ ಶೇರ್ ಮಾಡಿದ್ದಾರೆ. ಅಚ್ಚರಿ ಎಂದರೆ ಈ ಪೋಸ್ಟ್‌ಗೆ ರಿಪ್ಲೇ ಮಾಡಿರುವ ನಟ ಅಭಿಷೇಕ್ ಬಚ್ಚನ್ "ನನಗೂ ಕೂಡ ಇವರಿಬ್ಬರು ಅಚ್ಚುಮೆಚ್ಚು" ಎಂದು ಬರೆದಿದ್ದಾರೆ. ಅಲ್ಲಿಗೆ ಐಶ್ ಹಾಗೂ ಅಭಿ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ವದಂತಿಗೆ ಬ್ರೇಕ್ ಬಿದ್ದಂತಾಗಿದೆ.

2014ರಲ್ಲಿ ಅಭಿ- ಐಶ್ ಡಿವೋರ್ಸ್ ಬಗ್ಗೆ ಇದೇ ರೀತಿಯ ಗುಸು ಗುಸು ಕೇಳಿಬಂದಿತ್ತು. ಆಗ ಅಭಿ ಕೊಂಚ ಖಾರವಾಗಿಯೇ ಪ್ರತಿಕ್ರಿಯಿಸಿದ್ದರು. "ಓಕೆ, ನಾನು ಡಿವೋರ್ಸ್ ತೆಗೆದುಕೊಳ್ತಿದ್ದೀನಿ ಅಂತ ಒಪ್ಪಿಕೊಳ್ತೀನಿ. ಈ ವಿಷಯವನ್ನು ನನಗೆ ನೆನಪಿಸಿದ್ದಕ್ಕೆ ಧನ್ಯವಾದಗಳು. ಇದರ ಜೊತೆಗೆ ನನ್ನ ಎರಡನೇ ಮದುವೆ ಯಾವಾಗ ಅಂತಲೂ ನೀವೇ ಹೇಳಿಬಿಡಿ" ಅಂತ ವ್ಯಂಗ್ಯವಾಗಿ ಗಾಸಿಪ್‌ಗೆ ತೆರೆ ಎಳೆದಿದ್ದರು.

Abhishek Bachchan and Aishwarya Rai divorce rumours; Jr Bachchan reacts to Aishwarya Rais pic

ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ 1999ರಲ್ಲಿ 'ದಾಯ್ ಅಕ್‌ಶರ್ ಪ್ರೇಮ್ ಕೆ' ಚಿತ್ರದಲ್ಲಿ ಮೊದಲಿಗೆ ಒಟ್ಟಿಗೆ ನಟಿಸಿದ್ದರು. ಈ ಸಿನಿಮಾ ಫೋಟೊಶೂಟ್‌ ವೇಳೆ ಮೊದಲ ಭೇಟಿ ಆಗಿತ್ತು. ನಂತರ 'ಕುಚ್‌ ನ ಕಹೋ' ಸಿನಿಮಾದಲ್ಲಿ ಮತ್ತೆ ಜೊತೆಯಾಗಿದ್ದರು. 2005ರಲ್ಲಿ 'ಉಮ್ರಾವ್ ಜಾನ್' ಚಿತ್ರಕ್ಕಾಗಿ 3ನೇ ಬಾರಿಗೆ ಎರೆ ಹಂಚಿಕೊಂಡಿದ್ದರು. ಆ ಸಮಯದಲ್ಲೇ ನಮ್ಮಿಬ್ಬರ ನಡುವೆ ಪ್ರೀತಿ ಚಿಗುರೊಡೆದಿತ್ತು ಎಂದು ಅಭಿಷೇಕ್ ತಮ್ಮ ಲವ್‌ ಸ್ಟೋರಿ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಇತ್ತೀಚಿನ ವರ್ಷಗಳಲ್ಲಿ ಅಭಿ - ಐಶ್ ಇಬ್ಬರು ಸಿನಿಮಾಗಳಲ್ಲಿ ನಟಿಸೋದು ಕಮ್ಮಿ ಆಗಿದೆ. ಜ್ಯೂ. ಬಚ್ಚನ್ ಸಿನಿಮಾಗಳು ಅಷ್ಟಾಗಿ ಸದ್ದು ಮಾಡುತ್ತಿಲ್ಲ. ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್ ಸೆಲ್ವನ್' ಸರಣಿ ಸಿನಿಮಾಗಳಲ್ಲಿ ಐಶ್ ಮಿಂಚಿದ್ದಾರೆ. ಸರಣಿಯ 2ನೇ ಸಿನಿಮಾ ಈ ತಿಂಗಳಾಂತ್ಯಕ್ಕೆ ತೆರೆಗೆ ಬರಲಿದೆ. ಚಿತ್ರದಲ್ಲಿ ಡಬಲ್ ರೋಲ್‌ನಲ್ಲಿ ಐಶ್ ಮೋಡಿ ಮಾಡಲು ಬರುತ್ತಿದ್ದಾರೆ.

More from Filmibeat

English summary
Abhishek Bachchan and Aishwarya Rai divorce rumours, Jr Bachchan reacts to Aishwarya Rai's pic. Aish and Abhi got married in 2007. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X