ಅಭಿಷೇಕ್ ಸಿನಿ ಪಯಣಕ್ಕೆ 20 ವರ್ಷ: ಅವಕಾಶಕ್ಕಾಗಿ ಅಲೆದಾಡಿದ ದಿನಗಳನ್ನು ನೆನಪಿಸಿಕೊಂಡ ಬಿಗ್ ಬಿ ಪುತ್ರ

ಭಾರತೀಯ ಚಿತ್ರರಂಗದ ಖ್ಯಾತ ನಟ ಅಮಿತಾಬ್ ಬಚ್ಚನ್ ಪುತ್ರ ಅಭಿಷೇಕ್ ಬಚ್ಚನ್ ಸಿನಿಮಾ ಅವಕ್ಕಾಶಕ್ಕಾಗಿ ಅಲೆದಾಡಿದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಚಿತ್ರರಂಗದಲ್ಲಿ 20 ವರ್ಷಗಳನ್ನು ಪೂರೈಸುತ್ತಿರುವ ಈ ಸಮಯದಲ್ಲಿ ಅಭಿಷೇಕ್ ಹಳೆಯ ದಿನಗಳನ್ನು ನೆನೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ ಮಾಡಿದ್ದಾರೆ.

Recommended Video

ತಾವು ಹುಟ್ಟಿ ಬೆಳೆದ ಊರಿನ ಬಗ್ಗೆ ಜಗ್ಗೇಶ್ ನೆನಪುಗಳನ್ನು ಮೆಲುಕು ಹಾಕಿದ್ದು ಹೀಗೆ | Jaggesh about his village

ಬಾಲಿವುಡ್ ನಲ್ಲಿ ಸದ್ಯ ನೆಪೊಟಿಸಮ್ ಸದ್ದು ಮಾಡುತ್ತಿದೆ. ಚಿತ್ರರಂಗದಲ್ಲಿ ಸ್ಟಾರ್ ಕುಟುಂಬದ ಮಕ್ಕಳಿಗೆ ಮಾತ್ರ ಮನ್ನಣೆ ಸಿಗುತ್ತಿದೆ. ಹೊರಗಡೆಯಿಂದ ಬಂದ ಪ್ರತಿಭೆಗಳನ್ನು ತುಳಿಯಲಾಗುತ್ತಿದೆ ಎನ್ನುವ ಆರೋಪ ಜೋರಾಗಿ ಕೇಳಿಬರುತ್ತಿದೆ. ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕವಂತು ನೆಪೊಟಿಸಮ್ ವಿರುದ್ಧ ಸಾಕಷ್ಟು ಮಂದಿ ದ್ವನಿ ಎತ್ತಿದ್ದಾರೆ. ಕರಣ್ ಜೋಹರ್, ಸಲ್ಮಾನ್ ಖಾನ್, ಅಲಿಯಾ ಭಟ್, ಸೋನಂ ಕಪೂರ್ ಸೇರಿದ್ದಂತೆ ಅನೇಕರು ವಿರುದ್ಧ ನೆಪೊಟಿಸಂ ಆರೋಪ ಮಾಡಲಾಗಿದೆ.

ಆದರೆ ಸ್ಟಾರ್ ಕುಟುಂಬದಿಂದ ಬಂದವರಾದರು ನಟ ಅಭಿಷೇಕ್ ಬಚ್ಚನ್ ಸಿನಿ ಜೀವನದ ಪ್ರಾರಂಭದಲ್ಲಿ ಅವಕ್ಕಾಶಕ್ಕಾಗಿ ತುಂಬಾ ಕಷ್ಟಪಟ್ಟಿರುವ ಬಗ್ಗೆ ಈಗ ಮಾತನಾಡಿದ್ದಾರೆ. ಸಿನಿಮಾದಲ್ಲಿ ನಾಯಕನಾಗಿ ನಟಿಸಲು ನಿರ್ದೇಶಕರು ಮತ್ತು ನಿರ್ಮಾಕಪರ ಮನೆ ಬಾಗಿಲಿಗೆ ಅಲೆದಾಡಿದ ಬಗ್ಗೆ ಬಹಿರಂಗಪಡಿಸಿದ್ದಾರೆ. ಮುಂದೆ ಓದಿ..

ರಿಫ್ಯೂಜಿ ಸಿನಿಮಾ ಮೂಲಕ ನಾಯಕನಾಗಿ ಎಂಟ್ರಿ

ರಿಫ್ಯೂಜಿ ಸಿನಿಮಾ ಮೂಲಕ ನಾಯಕನಾಗಿ ಎಂಟ್ರಿ

ಅಭಿಷೇಕ್ ಬಚ್ಚನ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 20 ವರ್ಷಗಳು ತುಂಬುತ್ತಿದೆ. ಇದೆ ಜೂನ್ 30ಕ್ಕೆ ಅಭಿಷೇಕ್ ಬಣ್ಣದ ಲೋಕಕ್ಕೆ ಕಾಲಿಟ್ಟು ಭರ್ತಿ 20 ವರ್ಷಗಳಾಗುತ್ತೆ. ಸೋಲು-ಗೆಲವುಗಳ ನಡುವೆಯೂ ಅಭಿಷೇಕ್ 20 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಬಿಗ್ ಬಿ ಪುತ್ರ 2000ರಲ್ಲಿ ರಿಫ್ಯೂಜಿ ಸಿನಿಮಾ ಮೂಲಕ ಬಾಲಿವುಡ್ ಎಂಟ್ರಿ ಕೊಟ್ಟಿದ್ದಾರೆ. ಧೂಮ್, ಬಂಟಿ ಔರ್ ಬಬ್ಲಿ, ಸರ್ಕಾರ್, ದೋಸ್ತಾನ, ಆಲ್ ಈಸ್ ವೆಲ್, ಹೌಸ್ ಫುಲ್-3 ಸೇರಿದ್ದಂತೆ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.

ಜೂನ್ 30ಕ್ಕೆ 20 ವರ್ಷ ಪೂರೈಸುತ್ತೆ

ಜೂನ್ 30ಕ್ಕೆ 20 ವರ್ಷ ಪೂರೈಸುತ್ತೆ

"ಈ ತಿಂಗಳು ಕೊನೆಯಲ್ಲಿ ನಾನು ನಟನಾಗಿ 20 ವರ್ಷಗಳು ಪೂರೈಸುತ್ತಿದೆ ಎನ್ನುವುದು ನಂಬುವುದು ಕಷ್ಟ. ಇಲ್ಲಿಯ ವರೆಗೂ ಅದ್ಭುತ ಪಯಣವಾಗಿದೆ. ನಾನು ಹಿಂದೆ ತಿರುಗೆ ನೋಡುವವನಲ್ಲ. ಆದರೆ ಒಮ್ಮೆ ಕೆಟ್ಟ ಮತ್ತು ಒಳ್ಳೆಯ ಸಮಯವನ್ನು ನೆನಪಿಸಿಕೊಳ್ಳುವುದು ಒಳ್ಳೆಯದು. ನನ್ನ ಜೀವನದ ಈ 20 ವರ್ಷ ಪಯಣಕ್ಕೆ ನಿಮ್ಮನ್ನು ಕರೆದೊಯ್ಯುವ ಪ್ರಯತ್ನವಾಗಿದೆ. 20 ವರ್ಷಗ ಹಿಂದೆ ವಿದೇಶದಿಂದ ಮರಳಿದಾಗ 22ರ ಪ್ರಾಯದ ಯುವಕ. ಸ್ವಲ್ಪ ವಿಚಿತ್ರವಾಗಿದ್ದ, ಎತ್ತರವಾಗಿದ್ದವನ ಮೇಲೆ ನಂಬಿಕೆ ಇಟ್ಟವರು ಹಲವರು" ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಎಷ್ಟು ನಿರ್ಮಾಪಕರು-ನಿರ್ದೇಶಕರ ಮನೆ ಅಲೆದಿದ್ದೀನೋ ಗೊತ್ತಿಲ್ಲ

ಎಷ್ಟು ನಿರ್ಮಾಪಕರು-ನಿರ್ದೇಶಕರ ಮನೆ ಅಲೆದಿದ್ದೀನೋ ಗೊತ್ತಿಲ್ಲ

ಅಪ್ಪನ ಹಾಗೆ ಸಿನಿಮಾದಲ್ಲಿ ಗುರುತಿಸಿಕೊಳ್ಳಬೇಕು, ಸ್ಟಾರ್ ನಟನಾಗಬೇಕೆಂದು ಚಿತ್ರರಂಗಕ್ಕೆ ಬಂದ ಅಭಿಷೇಕ್ ಪ್ರಾರಂಭದಲ್ಲಿ ಅನುಭವಿಸಿದ ಕಷ್ಟಗಳ ಬಗ್ಗೆ ವಿವರವಾಗಿ ಹೇಳಿದ್ದಾರೆ "1998, ಅವಕಾಶಕ್ಕಾಗಿ ಎಷ್ಟು ಜನ ನಿರ್ಮಾಪಕರ ಮತ್ತು ನಿರ್ದೇಶಕರ ಮನೆಗೆ ಅಲೆದಿದ್ದೇನೋ ನನಗೆ ನೆನಪಿಲ್ಲ. ಒಂದೇ ಒಂದು ಚಾನ್ಸ್ ಕೊಡಿ ಎಂದು ಅನೇಕರ ಬಳಿ ಮನವಿ ಮಾಡಿಕೊಂಡಿದ್ದೀನಿ. ಆದರೆ ಯಾರು ಮುಂದೆ ಬರಲಿಲ್ಲ. ಕೊನೆಗೆ ನಿರ್ದೇಶಕ ಜೆಪಿ ದತ್ತ ಅವರನ್ನು ಸೆಟ್ ನಲ್ಲಿ ಭೇಟಿಯಾದೆ. ಅವರು ಅವಕಾಶ ನೀಡಿದರು. ಅದೆ ರಿಫ್ಯೂಸಿ ಸಿನಿಮಾ" ಎಂದು ಹೇಳಿದ್ದಾರೆ.

ಈಡೇರದ 'ಸಂಜೋತಾ ಎಕ್ಸ್ ಪ್ರೆಸ್' ಕನಸು

ಈಡೇರದ 'ಸಂಜೋತಾ ಎಕ್ಸ್ ಪ್ರೆಸ್' ಕನಸು

ಅಭಿಷೇಕ್ ಬಚ್ಚನ್ ಕನಸಿನ ಸಿನಿಮಾ ಸಂಜೋತಾ ಎಕ್ಸ್ ಪ್ರೆಸ್ ಸೆಟ್ಟೇರದ ಬಗ್ಗೆಯೂ ಬಹಿರಂಗಪಡಿಸಿದ್ದಾರೆ. ನಿರ್ದೇಶಕ ರಾಕೇಶ್ ಓಂ ಪ್ರಕಾಶ್ ಮೆಹ್ರಾ ಮತ್ತು ಅಭಿಷೇಕ್ ಇಬ್ಬರು ಸಂಜೋತಾ ಎಕ್ಸ್ ಪ್ರೆಸ್ ಸಿನಿಮಾ ಮಾಡಲು ಮುಂದಾಗುತ್ತಾರೆ. ಈ ಚಿತ್ರಕ್ಕಾಗಿ ತುಂಬಾ ಕಷ್ಟಪಡುತ್ತಾರೆ. ಆದರೆ ಸಿನಿಮಾವನ್ನು ನಿರ್ಮಾಣ ಮಾಡಲು ಯಾರು ಮುಂದೆ ಬರುವುದಿಲ್ಲ. ಕೊನೆಗೂ ಅಭಿಷೇಕ್ ಕನಸಿನ ಸಿನಿಮಾ ಸೆಟ್ಟೇರುವುದೆ ಇಲ್ಲ. ನಂತರ ನಿರ್ದೇಶಕ ರಾಕೇಶ್ ಓಂ ಪ್ರಕಾಶ್ ಮತ್ತು ಅಭಿಷೇಕ್ ಇಬ್ಬರು ದಿಲ್ಲಿ 6 ಸಿನಿಮಾ ಮಾಡಿದರು.

ಅಭಿಷೇಕ್ ಬಳಿ ಇರುವ ಸಿನಿಮಾಗಳು

ಅಭಿಷೇಕ್ ಬಳಿ ಇರುವ ಸಿನಿಮಾಗಳು

ಅಭಿಷೇಕ್ ಬಚ್ಚನ್ ಬಳಿ ಸದ್ಯ ಮೂರ್ನಾಲ್ಕು ಸಿನಿಮಾಗಳಿವೆ. ಪ್ರಾರಂಭದ ದಿನಗಳಲ್ಲಿ ಕಷ್ಟಗಳನ್ನು ಎದುರಿಸಿ ಚಿತ್ರರಂಗದಲ್ಲಿ ನೆಲೆಯೂರಿರುವ ಅಭಿಷೇಕ್ ಗೆ ಇತ್ತೀಚಿನ ಕೆಲವು ವರ್ಷಗಳಿಂದ ಯಶಸ್ಸು ಕೈ ಹಿಡಿಯುತ್ತಿಲ್ಲ. ಅಭಿಷೇಕ್ ಸಿನಿಮಾಗಳ ಸಂಖ್ಯೆಯು ಕಡಿಮೆಯಾಗುತ್ತಿವೆ. ಕೊನೆಯದಾಗಿ ಅಭಿಷೇಕ್ 2016ರಲ್ಲಿ ರಿಲೀಸ್ ಆದ ಮನ್ಮಾರ್ಜಿಯಾನ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಲುಡೊ, ದಿ ಬಿಗ್ ಬುಲ್ ಮತ್ತು ಬಾಬ್ ಬಿಸ್ವಾಸ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

More from Filmibeat

English summary
Abhishek Bachchan reveals, has request to many Producers and Directors to give him a chance in film. He is completing 20 years in film Industry.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X