''ನಾನು ಮತ್ತು ಐಶ್ವರ್ಯ ವಿಚ್ಛೇದನ ಪಡೆಯುತ್ತಿದ್ದೇವೆ'' - ಅಭಿಷೇಕ್ ಬಚ್ಚನ್...!

ಊಹಾಪೋಹಗಳು, ಗಾಳಿಸುದ್ದಿಗಳು ಗ್ಲಾಮರ್ ಜಗತ್ತಿನಲ್ಲಿ ಮತ್ತು ಸೆಲೆಬ್ರೆಟಿಗಳ ಜೀವನದಲ್ಲಿ ಕಾಮನ್ನೋ ಕಾಮನ್ನು. ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಒಂದು ಬೊಂಬೆಯ ಜತೆಗೆ ಆಟವಾಡಿದರೂ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗಬಹುದು. ಟ್ರೋಲಿಗರ ಹಸಿವಿಗೆ ಆಹಾರವೂ ಆಗಬಹುದು.

ಇನ್ನೂ .. ಮದುವೆಯಾಗಿದ್ದರಂತೂ ಮುಗಿದೇ ಹೋಯ್ತು. ಜೊತೆಯಲ್ಲಿ ಓಡಾಡಿದರೂ .. ಓಡಾಡದೇ ಇದ್ದರೂ .. ಹತ್ತಾರು ಮಾತು ಕೇಳಿ ಬರುತ್ತಾನೇ ಇರ್ತಾವೆ. ಯಾಕೆಂದರೆ ಇದು ಬಣ್ಣದ ಲೋಕ. ಇಲ್ಲಿ ಮದ್ವೆ.. ಪ್ರೀತಿ.. ಬಟ್ಟೆ ಬದಲಿಸಿದಷ್ಟೇ ಸುಲಭ ಸಾಧ್ಯ. ಈ ಕಾರಣಕ್ಕೆ ಯಾವ ಕ್ಷಣದಲ್ಲಾದರೂ ಡಿವೋರ್ಸ್ ಸುದ್ದಿ ಹೊರ ಬರಬಹುದು ಎಂದು ಇವರ ಸಾಮಾಜಿಕ ಜಾಲತಾಣದ ಮೇಲೆ ಸಮಾಜದ ಒಂದು ವರ್ಗ ಯಾವತ್ತು ಒಂದು ಕಣ್ಣಿಟ್ಟಿರುತ್ತೆ. ಹೀಗಿರುವಾಗ ಖುದ್ದು ಅಭಿಷೇಕ್ ಬಚ್ಚನ್ ನಾನು ಮತ್ತು ಐಶ್ವರ್ಯ ರೈ ವಿಚ್ಛೇದನ ಪಡೆಯುತ್ತಿದ್ದೇವೆ ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ವೈರಲ್ ಆಗುತ್ತಿದೆ.

abhishek-bachchan-confirms-divorce-from-aishwarya-rai-we-are-getting-divorced

ವೈರಲ್ ಆದ ಈ ವಿಡಿಯೋದಲ್ಲಿ ಅಭಿಷೇಕ್ ಬಚ್ಚನ್ ತಮ್ಮ ಮತ್ತು ಐಶ್ವರ್ಯ ನಡುವಿನ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ತಾವೂ ಮತ್ತು ಐಶ್ವರ್ಯ ದೂರವಾಗುತ್ತಿರುವುದಾಗಿ ಕೂಡ
ಹೇಳಿದ್ದಾರೆ. 'ವಿಡಿಯೋದಲ್ಲಿ ಮಗಳು ಆರಾಧ್ಯ ಬಗ್ಗೆ ಕೂಡ ಉಲ್ಲೇಖಿಸಿದ್ದಾರೆ. ಆದರೆ ವಾಸ್ತವದಲ್ಲಿ ಅಭಿಷೇಕ್ ಬಚ್ಚನ್ ಹಾಗೇ ಹೇಳಿಯೇ ಇಲ್ಲ. ಹೌದು, ಅಸಲಿಗೆ ತಂತ್ರಜ್ಞಾನದ ನೆರವು ಪಡೆದು, ಕಿಡಿಗೇಡಿಗಳು ಅಭಿಷೇಕ್ ಬಚ್ಚನ್ ಅವರ ವಿಡಿಯೋ ಹರಿ ಬಿಟ್ಟಿದ್ದಾರೆ. ಎಐ ತಂತ್ರಜ್ಞಾನ ಅಥವಾ ಆನ್ ಲೈನ್ ಪರಿಕರಗಳನ್ನು ಬಳಸಿ ಈ ವಿಡಿಯೋ ತೇಲಿ ಬಿಟ್ಟಿದ್ದಾರೆ.

ಆದರೆ ಇದನ್ನು ಅರಿಯದ ಅನೇಕರು ಈ ವಿಡಿಯೋ ನಿಜವೆಂದು ಅಂದುಕೊಂಡಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ಕೂಡ ಈ ವಿಡಿಯೋ ಹಂಚಿಕೊಳ್ಳುತ್ತಿದ್ದಾರೆ. ಇನ್ನೂ ವಿಡಿಯೋ ವೈರಲ್ ಆದರೂ ಕೂಡ ಅಭಿಷೇಕ್ ಬಚ್ಚನ್ ಆಗಲಿ, ಐಶ್ವರ್ಯ ರೈ ಆಗಲಿ.. ಈ ವಿಡಿಯೋ ಬಗ್ಗೆ ಮೌನ ಮುರಿದಿಲ್ಲ. ಹರಿದಾಡುತ್ತಿರುವುದು ನಕಲಿ ವಿಡಿಯೋ ಎಂದು ಸ್ಪಷ್ಟೀಕರಣವನ್ನೂ ನೀಡಿಲ್ಲ.

abhishek-bachchan-confirms-divorce-from-aishwarya-rai-we-are-getting-divorced

ಬದಲಿಗೆ ಈ ವಿಡಿಯೋಗೆ ಪೂರಕವಾಗಿ, ಅನೇಕರಲ್ಲಿರುವ ಅನುಮಾನ ಇನ್ನೂ ಹೆಚ್ಚಾಗುವಂತೆ ಅಭಿಷೇಕ್ ಬಚ್ಚನ್ ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಒಲಪಿಂಕ್ಸ್‌ ನೋಡಲು ಒಬ್ಬರೇ ತೆರಳಿದ್ದಾರೆ. ಇದು ಇವರ ಅಭಿಮಾನಿಗಳಲ್ಲಿನ ಆತಂಕವನ್ನು ಇನ್ನೂ ಹೆಚ್ಚಿಸಿದೆ. ಹೀಗಾಗಿಯೇ ಐಶ್ವರ್ಯ ರೈ ಅವರೆಲ್ಲಿ ಅನ್ನುವ ಪ್ರಶ್ನೆಯನ್ನು ಈಗ ಅನೇಕರು ಅಭಿಷೇಕ್ ಬಚ್ಚನ್ ಅವರಿಗೆ ಕೇಳುತ್ತಿದ್ದಾರೆ. ಯಾವುದೇ ಕಾರಣಕ್ಕೂ ಇಬ್ಬರು ದೂರವಾಗಬೇಡಿ ಎಂಬ ಮನವಿಯನ್ನೂ ಮಾಡಿಕೊಳ್ಳುತ್ತಿದ್ದಾರೆ.

ಇನ್ನೂ.. ಇತ್ತೀಚೆಗಷ್ಟೇ ವಿಚ್ಛೇದನದ ಕುರಿತು ಬರಹವೊಂದನ್ನು ಅಭಿಷೇಕ್ ಬಚ್ಚನ್ ಮೆಚ್ಚಿಕೊಂಡಿದ್ದರು. ಅಭಿಷೇಕ್ ಅವರ ಈ ನಡೆ ಅನೇಕರಿಗೆ ಆಶ್ವರ್ಯವನ್ನುಂಟು ಮಾಡಿತ್ತು. ಇಬ್ಬರು ದೂರವಾಗುವುದು ಖಚಿತ ಅನ್ನುವ ಮಾತು ಕೂಡ ಕೇಳಿ ಬಂದಿತ್ತು. ಇದರ ನಡುವೆ ಈಗ ಡೀಪ್‌ ಫೇಕ್ ತಂತ್ರಜ್ಞಾನ ಬಳಸಿ ಅಭಿಷೇಕ್ ಬಚ್ಚನ್ ಅವರ ವಿಡಿಯೋವೊಂದನ್ನು ವೈರಲ್ ಮಾಡಲಾಗಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X