For Quick Alerts
  ALLOW NOTIFICATIONS  
  For Daily Alerts

  ಪತ್ನಿ ಐಶ್ವರ್ಯಾ ರೈ ಗಾಗಿ ಉಪವಾಸ ವ್ರತ ಆಚರಿಸಿದ ಅಭಿಷೇಕ್ ಬಚ್ಚನ್!

  |

  ಪತಿಗಾಗಿ ಬೆಳಿಗಿನಿಂದ ಉಪವಾಸವಿದ್ದು ರಾತ್ರಿ ಚಂದ್ರನನ್ನು ಪತಿಯನ್ನು ಒಟ್ಟಿಗೆ ನೋಡಿ ಉಪವಾಸ ಬಿಡುವ ವೃತ ಅಥವಾ ಹಬ್ಬ ಕರ್ವಾಚೌತ್ ಉತ್ತರ ಭಾರತದಲ್ಲಿ ಬಹಳ ಮಂದಿ ಆಚರಿಸುತ್ತಾರೆ.

  ಕರ್ವಾಚೌತ್ ದಂಪತಿಗಳಿಗೆ ಬಹಳ ಪ್ರಮುಖವಾದ ಆಚರಣೆ ಉತ್ತರ ಭಾರತದಲ್ಲಿ. ಇತ್ತೀಚೆಗೆ ದಕ್ಷಿಣ ಭಾರತದಲ್ಲಿಯೂ ಈ ಆಚರಣೆ ಚಾಲ್ತಿಗೆ ಬರುತ್ತಿದೆ. ಗೃಹಿಣಿಯರು ಬೆಳಿಗ್ಗಿನಿಂದಲೇ ಉಪವಾಸವಿದ್ದು ಪತಿಯ ಕ್ಷೇಮಕ್ಕಾಗಿ ಪ್ರಾರ್ಥಿಸುತ್ತಾರೆ.

  ಅಭಿಷೇಕ್ ಬಚ್ಚನ್ ವೈಫಲ್ಯ ಮತ್ತು ಶಾರುಖ್ ಖಾನ್ ಕೊಟ್ಟಿದ್ದ ಸಲಹೆಅಭಿಷೇಕ್ ಬಚ್ಚನ್ ವೈಫಲ್ಯ ಮತ್ತು ಶಾರುಖ್ ಖಾನ್ ಕೊಟ್ಟಿದ್ದ ಸಲಹೆ

  ಈ ಬಾರಿ ಹಲವು ಸ್ಟಾರ್ ನಟ-ನಟಿಯರು ಸಹ ಈ ಕರ್ವಾಚೌತ್ ಆಚರಿಸಿದ್ದಾರೆ. ವಿದೇಶದಲ್ಲಿರುವ ಪ್ರಿಯಾಂಕಾ ಚೋಪ್ರಾ ಸಹ ಪತಿ ನಿಕ್‌ ಜೋನಸ್‌ಗಾಗಿ ಕರ್ವಾಚೌತ್ ಆಚರಿಸಿದ್ದಾರೆ. ಆದರೆ ಎಲ್ಲರಿಗಿಂತಲೂ ಭಿನ್ನವಾದ, ಅರ್ಥಪೂರ್ಣವಾಗಿ ಕರ್ವಾಚೌತ್ ಆಚರಿಸಿರುವುದು ಅಭಿಷೇಕ್ ಬಚ್ಚನ್-ಐಶ್ವರ್ಯಾ ದಂಪತಿ.

  ಅಭಿಷೇಕ್ ಬಚ್ಚನ್‌ಗಾಗಿ ಐಶ್ವರ್ಯಾ ಉಪವಾಸ

  ಅಭಿಷೇಕ್ ಬಚ್ಚನ್‌ಗಾಗಿ ಐಶ್ವರ್ಯಾ ಉಪವಾಸ

  ಕರ್ವಾಚೌತ್‌ ದಿನದಂದು ಐಶ್ವರ್ಯಾ ರೈ, ಅಭಿಷೇಕ್ ಬಚ್ಚನ್ ಆರೋಗ್ಯ, ಆಯುಷ್ಯ, ಏಳಿಗೆ ಬಯಸಿ ಉಪವಾಸ ವೃತ ಆಚರಿಸಿದ್ದರು. ಆದರೆ ಅಭಿಷೇಕ್ ಬಚ್ಚನ್ ಸಹ ಐಶ್ವರ್ಯಾ ರೈ ಗಾಗಿ ಅದೇ ದಿನ ಉಪವಾಸ ವಿದ್ದರು. ಪತ್ನಿ ಊಟ ಸೇವಿಸುವವರೆಗೂ ಅಭಿಷೇಕ್ ಆಹಾರ ಸೇವಿಸಿರಲಿಲ್ಲವಂತೆ.

  ಅಪ್ಪನ ಸಿನಿಮಾದಿಂದ ಪ್ರೇರಣೆ

  ಅಪ್ಪನ ಸಿನಿಮಾದಿಂದ ಪ್ರೇರಣೆ

  ಅಭೀಷೇಕ್ ತಂದೆ ಅಮಿತಾಬ್ ಬಚ್ಚನ್ ನಟನೆಯ 'ಬಾಗಬಾನ್' ಸಿನಿಮಾದಲ್ಲಿ ಅಮಿತಾಬ್ ತಮ್ಮ ಪತ್ನಿಗಾಗಿ ಉಪವಾಸ ಆಚರಿಸುವ ದೃಶ್ಯವಿದೆ. ಈ ದೃಶ್ಯ ಹಲವರ ಮನಗೆದ್ದಿತ್ತು. ಅದರಿಂದಲೇ ಅಭಿಷೇಕ್ ಪ್ರೇರಣೆ ಪಡೆದಿದ್ದಾರೆ ಎಂಬ ಚರ್ಚೆ ಸಹ ನಡೆಯುತ್ತಿದೆ.

  ಬಾಲಿವುಡ್ ನ ಆದರ್ಶನ ದಂಪತಿಳಲ್ಲಿ ಒಬ್ಬರು

  ಬಾಲಿವುಡ್ ನ ಆದರ್ಶನ ದಂಪತಿಳಲ್ಲಿ ಒಬ್ಬರು

  ಅಭಿಷೇಕ್ ಬಚ್ಚನ್-ಐಶ್ವರ್ಯಾ ರೈ ಮದುವೆಯಾಗಿ 13 ವರ್ಷವಾಗಿದೆ. ಇಬ್ಬರಿಗೂ ಒಬ್ಬ ಮುದ್ದಾದ ಮಗಳಿದ್ದಾಳೆ. ಇಬ್ಬರೂ ಈಗಲೂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಜೋಡಿಯನ್ನು ಬಾಲಿವುಡ್‌ನ ಆದರ್ಶ ದಂಪತಿಗಳಲ್ಲಿ ಒಬ್ಬರೆಂದು ಕರೆಯಲಾಗುತ್ತದೆ.

  ಟ್ರೋಲ್ ಮಾಡಿದವರಿಗೆ ಖಡಕ್ ಉತ್ತರ ಕೊಟ್ಟ ಅಭಿಷೇಕ್ ಬಚ್ಚನ್ಟ್ರೋಲ್ ಮಾಡಿದವರಿಗೆ ಖಡಕ್ ಉತ್ತರ ಕೊಟ್ಟ ಅಭಿಷೇಕ್ ಬಚ್ಚನ್

  ಹಲವು ನಟಿಯರು ಕರ್ವಾ ಚೌತ್ ಆಚರಿಸಿದ್ದಾರೆ

  ಹಲವು ನಟಿಯರು ಕರ್ವಾ ಚೌತ್ ಆಚರಿಸಿದ್ದಾರೆ

  ಹಲವು ನಟ-ನಟಿಯರು ಈ ಬಾರಿ ಕರ್ವಾ ಚೌತ್ ವೃತ ಆಚರಿಸಿದ್ದಾರೆ. ಪ್ರಿಯಾಂಕಾ ಚೋಪ್ರಾ, ಪ್ರೀತಿ ಜಿಂಟಾ, ಇತ್ತೀಚೆಗೆ ಮದುವೆಯಾದ ನೇಹಾ ಕಕ್ಕರ್, ಶಿಲ್ಪಾ ಶೆಟ್ಟಿ, ಜೂಹಿ ಚಾವ್ಲಾ ಇನ್ನೂ ಹಲವಾರು ಸೆಲೆಬ್ರಿಟಿಗಳು ಕರ್ವಾ ಚೌತ್ ಆಚರಿಸಿದ್ದಾರೆ.

  English summary
  Actor Abhishek Bachchan did fasting for his wife Aishwarya Rai Bachan on Karvachout.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X