ಐಶ್ವರ್ಯ ರೈ ಅವರಿಂದ ಅಂತರ ಕಾಪಾಡಿಕೊಂಡಿದ್ದೇಕೆ ? ಕೈ ಮುಗಿದ ಅಭಿಷೇಕ್ ಬಚ್ಚನ್...!

ಬದುಕು ಆಧುನಿಕವಾದಷ್ಟು ಸಂಸಾರ ಪ್ರಾಯೋಗಿಕವಾಗತೊಡಗಿದೆ. ಒಂದೊಂದು ಮನೆಯಲ್ಲೂ.. ಒಂದೊಂದು ಸಂಸಾರದಲ್ಲೂ.. ಒಂದೊಂದು ಜೀವದಲ್ಲೂ.. ಒಂದೊಂದು ಕಥೆ. ಉದಾಹರಣೆಗೆ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಅವರನ್ನೇ ತೆಗೆದುಕೊಳ್ಳಿ.

ಹೌದು, ಕೆಲ ದಿನಗಳಿಂದ ಅಲ್ಲ, ಕಳೆದ ಹಲವಾರು ದಿನಗಳಿಂದ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ನಡುವೆ ಸಂಬಂಧ ಹಳಸಿದೆ ಎನ್ನುವ ಅನುಮಾನ ಅನೇಕರಲ್ಲಿ ಇದೆ. ಅದಕ್ಕೆ ತಕ್ಕುದಾಗಿಯೇ ಇವರಿಬ್ಬರ ವರ್ತನೆಗಳೂ ಜಾಹೀರಾಗುತ್ತಿವೆ. ಮೊದಲೆಲ್ಲ ಜೊತೆ ಜೊತೆಯಾಗಿ ಓಡಾಡುತ್ತಿದ್ದ ಇಬ್ಬರು ಈಗ ನಾನೊಂದು ತೀರ.. ನೀನೊಂದು ತೀರ.. ಎಂಬಂತೆ ಓಡಾಡುತ್ತಿದ್ದಾರೆ. ಇನ್ನೂ ಮಗಳು ಆರಾಧ್ಯ ತಂದೆಯ ಜೊತೆ ಕಾಣಿಸಿಕೊಂಡಿದ್ದು ಇತ್ತೀಚಿನ ದಿನಗಳಲ್ಲಿ ತೀರಾ ಕಡಿಮೆ.

Abhishek Bachchan greets paparazzi with folded hands fans wonder about Aishwarya Rai

ಇದಕ್ಕೆ ಇನ್ನೊಂದು ಸಾಕ್ಷಿ ಎನ್ನುವಂತೆ ಅಭಿಷೇಕ್ ಬಚ್ಚನ್ ತಮ್ಮ ತಾಯಿ ಜಯಾ ಬಚ್ಚನ್ ಮತ್ತು ಸಹೋದರಿ ಶ್ವೇತಾ ಅವರ ಜೊತೆ ವಿಮಾನ ನಿಲ್ದಾಣದಿಂದ ಆಚೆ ಬಂದಿದ್ದಾರೆ. ಆಚೆ ಬರುತ್ತಿದ್ದಂತೆ ಸುತ್ತುವರೆದ ಪಾಪರಾಜಿಗಳಿಗೆ ಕೈ ಮುಗಿದು ಮುಂದೆ ಸಾಗಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ಚರ್ಚೆಯನ್ನು ಹುಟ್ಟು ಹಾಕಿದೆ. ವಿಚ್ಛೇದನದ ವದಂತಿಗಳಿಗೆ ಈ ವಿಡಿಯೋ ಮರುಜೀವವನ್ನೂ ನೀಡಿದೆ.

ಕೆಲವರು ವಿಡಿಯೋ ನೋಡಿದ ನಂತರ ಐಶ್ವರ್ಯ ರೈ ಎಲ್ಲಿ ಎಂಬ ಪ್ರಶ್ನೆಯನ್ನು ಕೇಳಿದ್ದರೆ, ಇನ್ನೂ ಕೆಲವರು ಐಶ್ವರ್ಯ ರೈ ಮತ್ತು ಆರಾಧ್ಯ ಇಲ್ಲದೇ ಬಚ್ಚನ್ ಕುಟುಂಬ ಅಪೂರ್ಣವಾಗಿ ಕಾಣುತ್ತೆ ಎಂದಿದ್ದಾರೆ. ಐಶ್ವರ್ಯ ರೈ ಮತ್ತು ಆರಾಧ್ಯ ಅವರನ್ನು ಬಿಟ್ಟು, ನೀವು ಕೇವಲ ನಿಮ್ಮ ತಾಯಿ ಮತ್ತು ಸಹೋದರಿ ಜೊತೆ ಪ್ರವಾಸಕ್ಕೆ ತೆರಳಿದ್ದರಾ ? ಎನ್ನುವ ಪ್ರಶ್ನೆಯನ್ನು ಕೂಡ ಕೆಲವರು ಕೇಳಿದ್ದಾರೆ. ನಿಮಗೆ ಮದುವೆಯಾಗಿದೆ ಎನ್ನುವುದಾದರೂ ನಿಮಗೆ ನೆನಪಿದೆಯಾ ಎಂದು ಅಭಿಷೇಕ್ ಬಚ್ಚನ್ ಮೇಲೆ ಕಿಡಿ ಕಾರಿದ್ದಾರೆ. ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ದಾಂಪತ್ಯದಲ್ಲಿ ಬಿರಕು ಮೂಡಿದೆ ಎಂಬ ಸಂದೇಶವನ್ನು ರವಾನೆ ಮಾಡಲು ಈ ವಿಡಿಯೋ ಒಂದೇ ಸಾಕು ಎಂದು ಕೂಡ ಕೆಲವರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಅಂದ್ಹಾಗೇ ಕೆಲ ದಿನಗಳ ಹಿಂದೆ ಐಶ್ವರ್ಯ ರೈ ತಮ್ಮ ಪತಿ ಅಭಿಷೇಕ್ ಬಚ್ಚನ್ ಅವರನ್ನು ಬಿಟ್ಟು ತಮ್ಮ ಪುತ್ರಿ ಆರಾಧ್ಯ ಜೊತೆ ನ್ಯೂಯಾರ್ಕ್‌ಗೆ ತೆರಳಿದ್ದರು. ಅಲ್ಲಿ ಕೆಲ ಕಾಲ ಇದ್ದು ಆ ನಂತರ ಮರಳಿ ಬಂದಿದ್ದರು. ಐಶ್ವರ್ಯ ರೈ ಮರಳಿ ಬಂದಾಗ ಕೂಡ ಇದೇ ತರಹದ ಪ್ರಶ್ನೆಗಳು ಇವರ ಅಭಿಮಾನಿಗಳನ್ನು ಕಾಡಿದ್ದವು. ಈ ಪ್ರಶ್ನೆಗಳಿಗೆಲ್ಲ ಅವತ್ತು ಕೂಡ ನಿಖರವಾದ ಉತ್ತರ ಸಿಕ್ಕಿರಲಿಲ್ಲ. ಇವತ್ತು ಕೂಡ ಸಿಕ್ಕಿಲ್ಲ.

ಉಳಿದಂತೆ ಇತ್ತೀಚೆಗಷ್ಟೇ ವಿಚ್ಛೇದನದ ಕುರಿತು ಬರಹವೊಂದನ್ನು ಅಭಿಷೇಕ್ ಬಚ್ಚನ್ ಮೆಚ್ಚಿಕೊಂಡಿದ್ದರು. ಅಭಿಷೇಕ್ ಅವರ ಈ ನಡೆ ಅನೇಕರಿಗೆ ಆಶ್ವರ್ಯವನ್ನುಂಟು ಮಾಡಿತ್ತು. ಇಬ್ಬರು ದೂರವಾಗುವುದು ಖಚಿತ ಅನ್ನುವ ಮಾತು ಕೂಡ ಕೇಳಿ ಬಂದಿತ್ತು. ಈಗ ಅಭಿಷೇಕ್ ಬಚ್ಚನ್ ಏಕಾಂಗಿಯಾಗಿ ವಿಮಾನ ನಿಲ್ದಾಣದ ಹೊರಗಡೆ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಮತ್ತೊಮ್ಮೆ ಚರ್ಚೆಗೀಡಾಗಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X