ವಜ್ರದ ಉಂಗುರ ತೊಡಿಸಿ ಕರಿಷ್ಮಾಗೆ ಪ್ರಪೋಸ್ ಮಾಡಿದ್ದ ಅಭಿಶೇಕ್.!

By Harshitha

'ಬಿಗ್ ಬಿ' ಅಮಿತಾಬ್ ಬಚ್ಚನ್ ಪುತ್ರ ಅಭಿಶೇಕ್ ಬಚ್ಚನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಹನ್ನೊಂದು ವರ್ಷಗಳು ಉರುಳಿವೆ. 2007 ರಲ್ಲಿ ಮಂಗಳೂರು ಬೆಡಗಿ, ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ರನ್ನ ಅಭಿಶೇಕ್ ಬಚ್ಚನ್ ವಿವಾಹವಾದರು.

ಹಾಗ್ನೋಡಿದ್ರೆ, ಅಭಿಶೇಕ್-ಐಶ್ವರ್ಯ ರವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. 'ಧೂಮ್-2' ಚಿತ್ರದ ಶೂಟಿಂಗ್ ವೇಳೆ ಅಭಿಶೇಕ್ ಹಾಗೂ ಐಶ್ವರ್ಯ ನಡುವೆ ಪ್ರೀತಿ ಮೊಳಕೆಯೊಡೆದಿತ್ತು. ವರ್ಷದೊಳಗೆ ತಮ್ಮ ಪ್ರೀತಿಗೆ ಈ ಜೋಡಿ ಅಧಿಕೃತ ಮುದ್ರೆ ಹಾಕಿಸಿಕೊಂಡರು.

ಐಶ್ವರ್ಯ ರೈ ರನ್ನ ಲವ್ ಮಾಡುವ ಮುನ್ನ ಬಾಲಿವುಡ್ ನಟಿ ಕರಿಷ್ಮಾ ಕಪೂರ್ ರನ್ನ ಅಭಿಶೇಕ್ ಪ್ರೀತಿಸುತ್ತಿದ್ದರು. ಕರಿಷ್ಮಾ ಕಪೂರ್ ಗೆ ಡೈಮಂಡ್ ರಿಂಗ್ ತೊಡಿಸಿ ಲವ್ ಪ್ರಪೋಸ್ ಮಾಡಿದ್ದರಂತೆ ನಟ ಅಭಿಶೇಕ್ ಬಚ್ಚನ್. ಕರಿಷ್ಮಾ ಕಪೂರ್ - ಅಭಿಶೇಕ್ ಬಚ್ಚನ್ ನಿಶ್ಚಿತಾರ್ಥ ಸಮಾರಂಭ ಕೂಡ ನಡೆದಿತ್ತು. ಆದ್ರೆ, ಇವರಿಬ್ಬರ ಸಂಬಂಧ ಹೆಚ್ಚು ದಿನ ಉಳಿಯಲಿಲ್ಲ.

ಅಭಿಶೇಕ್ ಬಚ್ಚನ್ ಜೊತೆಗಿನ ತಮ್ಮ ಲವ್ ಸ್ಟೋರಿಯನ್ನ ಸಂದರ್ಶನವೊಂದರಲ್ಲಿ ಕರಿಷ್ಮಾ ಕಪೂರ್ ಬಾಯಿಬಿಟ್ಟಿದ್ದಾರೆ. ಹೆಚ್ಚಿನ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ....

ಪ್ರಪೋಸ್ ಮಾಡಿದ್ದು ಅಭಿಶೇಕ್ ಬಚ್ಚನ್

ಪ್ರಪೋಸ್ ಮಾಡಿದ್ದು ಅಭಿಶೇಕ್ ಬಚ್ಚನ್

''ಒಂದಿನ ಇದ್ದಕ್ಕಿದ್ದಂತೆ ವಜ್ರದ ಉಂಗುರವನ್ನು ಹಿಡಿದು ಅಭಿಶೇಕ್ ನನಗೆ ಪ್ರಪೋಸ್ ಮಾಡಿದರು. ''ಇಲ್ಲ'' ಅಂತ ಹೇಳಲು ನನ್ನ ಕೈಯಲ್ಲಿ ಸಾಧ್ಯ ಆಗಲಿಲ್ಲ'' ಎಂದು ಸಂದರ್ಶನವೊಂದರಲ್ಲಿ ಕರಿಷ್ಮಾ ಕಪೂರ್ ಹೇಳಿದ್ದಾರೆ.

ಬಚ್ಚನ್ ಕುಟುಂಬ.!

ಬಚ್ಚನ್ ಕುಟುಂಬ.!

''ಅಭಿಶೇಕ್ ನನಗೆ ಸೂಕ್ತ ವರ ಅಂತ ಭಾವಿಸಿದ್ದೆ. ಎಷ್ಟೇ ಆಗಲಿ ಬಚ್ಚನ್ ಕುಟುಂಬಕ್ಕಿಂತ ಒಳ್ಳೆಯ ಸಂಬಂಧ ಸಿಗುತ್ತಿರಲಿಲ್ಲ'' ಎನ್ನುತ್ತಾರೆ ನಟಿ ಕರಿಷ್ಮಾ ಕಪೂರ್.

ನಾಲ್ಕು ತಿಂಗಳಲ್ಲಿ ಬ್ರೇಕಪ್.!

ನಾಲ್ಕು ತಿಂಗಳಲ್ಲಿ ಬ್ರೇಕಪ್.!

ಕುಟುಂಬವನ್ನ ಒಪ್ಪಿಸಿ ಕರಿಷ್ಮಾ-ಅಭಿಶೇಕ್ ನಿಶ್ಚಿತಾರ್ಥ ಮಾಡಿಕೊಂಡರು. ಎಂಗೇಜ್ ಆದ ನಾಲ್ಕು ತಿಂಗಳಲ್ಲಿ ಬ್ರೇಕಪ್ ಮಾಡಿಕೊಂಡರು. ಕರಿಷ್ಮಾ-ಅಭಿಶೇಕ್ ಬ್ರೇಕಪ್ ಸುದ್ದಿ ಉಭಯ ಕುಟುಂಬಗಳಿಗೆ ದೊಡ್ಡ ಆಘಾತ ನೀಡಿತ್ತು.

ಬ್ರೇಕಪ್ ಗೆ ಕಾರಣ ಏನು.?

ಬ್ರೇಕಪ್ ಗೆ ಕಾರಣ ಏನು.?

ಇದ್ದಕ್ಕಿದ್ದಂತೆ ಕರಿಷ್ಮಾ-ಅಭಿಶೇಕ್ ಬ್ರೇಕಪ್ ಆಗಿದ್ಯಾಕೆ ಎಂಬ ಪ್ರಶ್ನೆಗೆ ಇಲ್ಲಿಯವರೆಗೂ ಉತ್ತರ ಸಿಕ್ಕಿಲ್ಲ. ಬ್ರೇಕಪ್ ಗೆ ಸರಿಯಾದ ಕಾರಣವನ್ನ ಇಬ್ಬರೂ ನೀಡಿಲ್ಲ. ಆದ್ರೆ, ಜಯ ಬಚ್ಚನ್ ಮಾತ್ರ 'ಇದು ಅಭಿಶೇಕ್ ನಿರ್ಧಾರ' ಅಂತ ಒಮ್ಮೆ ಹೇಳಿದ್ದರು.

ಅಭಿಶೇಕ್-ಕರಿಷ್ಮಾ ಭೇಟಿ ಆಗಿದ್ದು ಹೇಗೆ.?

ಅಭಿಶೇಕ್-ಕರಿಷ್ಮಾ ಭೇಟಿ ಆಗಿದ್ದು ಹೇಗೆ.?

ಮದುವೆಯೊಂದರಲ್ಲಿ ಪ್ರಪ್ರಥಮ ಬಾರಿಗೆ ಅಭಿಶೇಕ್-ಕರಿಷ್ಮಾ ಮುಖಾಮುಖಿ ಆದರು. ನಿಖಿಲ್ ನಂದಾ ಹಾಗೂ ಶ್ವೇತಾ ಬಚ್ಚನ್ ವಿವಾಹ ಮಹೋತ್ಸವದಲ್ಲಿ ಅಭಿಶೇಕ್ ಹಾಗೂ ಕರಿಷ್ಮಾ ಮತ್ತಷ್ಟು ಹತ್ತಿರವಾದರು.

ಕರಿಷ್ಮಾ ತಾಯಿ ಕಾರಣ.?

ಕರಿಷ್ಮಾ ತಾಯಿ ಕಾರಣ.?

ಮದುವೆ ಆದ್ಮೇಲೆ ಕರಿಷ್ಮಾ-ಅಭಿಶೇಕ್ ನೆಮ್ಮದಿಯಿಂದ ಜೀವನ ಸಾಗಿಸಲು, ಅಭಿಶೇಕ್ ಬಚ್ಚನ್ ಹೆಸರಿಗೆ ಕೆಲ ಆಸ್ತಿಯನ್ನ ವರ್ಗಾಯಿಸುವಂತೆ ಕರಿಷ್ಮಾ ಕಪೂರ್ ತಾಯಿ, ಅಮಿತಾಬ್ ಬಚ್ಚನ್ ಬಳಿ ಡಿಮ್ಯಾಂಡ್ ಇಟ್ಟಿದ್ದರಂತೆ. ಇದಕ್ಕೆಲ್ಲ ಬಚ್ಚನ್ ಕುಟುಂಬ ಸೊಪ್ಪು ಹಾಕಲಿಲ್ಲ. ಹೀಗಾಗಿ ನಿಶ್ಚಿತಾರ್ಥ ಮುರಿದು ಬಿತ್ತು ಎಂಬ ಪುಕಾರು ಆ ಸಮಯದಲ್ಲಿ ಹಬ್ಬಿತ್ತು.

ಬಚ್ಚನ್ ಕುಟುಂಬದ ಮೇಲೂ ಆರೋಪ

ಬಚ್ಚನ್ ಕುಟುಂಬದ ಮೇಲೂ ಆರೋಪ

''ಮದುವೆ ಆದ್ಮೇಲೆ ಕರಿಷ್ಮಾ ನಟಿಸಬಾರದು'' ಅಂತ ಬಚ್ಚನ್ ಕುಟುಂಬ ಕೂಡ ಷರತ್ತು ಹಾಕಿದ್ದರಂತೆ. ಇದನ್ನ ಕಪೂರ್ ಕುಟುಂಬ ಒಪ್ಪಿಕೊಳ್ಳಲಿಲ್ಲ. ಹೀಗಾಗಿ ಮದುವೆ ಕ್ಯಾನ್ಸಲ್ ಆಯ್ತು ಅಂತ ಹೇಳುವವರೂ ಇದ್ದಾರೆ. ಕಾರಣ ಏನೇ ಇರಲಿ... ಕರಿಷ್ಮಾ ಹಾಗೂ ಅಭಿಶೇಕ್ ದೂರಾಗಿದ್ದು ಮಾತ್ರ ಸತ್ಯ. ಕರಿಷ್ಮಾರನ್ನ ಪ್ರೀತಿಸುತ್ತಿದ್ದ ಅಭಿಶೇಕ್ ಇದೀಗ ಐಶ್ವರ್ಯ ರನ್ನ ವರಿಸಿದ್ದಾರೆ. ಅತ್ತ ಕರಿಷ್ಮಾ ತಮ್ಮ ಮಕ್ಕಳೊಂದಿಗೆ ಹಾಯಾಗಿದ್ದಾರೆ.

More from Filmibeat

English summary
Abhishek Bachchan proposed to me with Diamond ring says Karishma Kapoor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X