ಟ್ರೋಲ್ ಮಾಡಿದವರಿಗೆ ತಿರುಗೇಟು ನೀಡಿದ ಜೂ.ಬಚ್ಚನ್
ಬಾಲಿವುಡ್ ಅಂಗಳದಲ್ಲಿ ಟ್ರೋಲ್ ಪೇಜ್ ನವರು ಅದ್ಯಾಕೋ ಅಭಿಷೇಕ್ ಬಚ್ಚನ್ ಅವರನ್ನು ಆಗಾಗ ಕೆಣಕುತ್ತಲೇ ಇರುತ್ತಾರೆ. ಅಭಿಷೇಕ್ ಏನಾದರೂ ಮಾಡಿಕೊಳ್ಳಲಿ ಎಂದು ಸುಮ್ಮನೆ ಇರುವುದಿಲ್ಲ. ತನ್ನ ತಂಟೆಗೆ ಹಾಗೂ ತಮ್ಮ ಫ್ಯಾಮಿಲಿ ವಿಚಾರಕ್ಕೆ ಬಂದವರಿಗೆ ಸರಿಯಾಗಿ ಪಾಠ ಕಲಿಸುತ್ತಾರೆ.
ಇತ್ತಿಚಿಗಷ್ಟೇ ಟ್ವಿಟ್ಟರ್ ನಲ್ಲಿ ಟ್ರೋಲ್ ಪೇಜ್ ನವರು ಜೀವನದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ, ಬೇಸರವಾದಾಗ ಸುಮ್ಮನೆ ಅಭಿಷೇಕ್ ಬಚ್ಚನ್ ನೆನಪಿಸಿಕೋ ಅವರು ಈಗಲು ತಮ್ಮ ಪೋಷಕರ ಜೊತೆಯಲ್ಲೇ ವಾಸವಿದ್ದಾರೆ. ಎಂದು ಟ್ವಿಟ್ ಮಾಡಿದ್ದರು.
ಅದನ್ನು ನೋಡಿದ ಅಭಿಷೇಕ್ ಬಚ್ಚನ್ ಆ ವ್ಯಕ್ತಿಗೆ ಕಮೆಂಟ್ ಮೂಲಕವೇ ತಿರುಗೇಟು ನೀಡಿದ್ದಾರೆ. "ಹೌದು.. ನನಗೆ ನಿಜಕ್ಕೂ ಹೆಮ್ಮೆ ಇದೆ ಅವರ ಜೊತೆಯಲ್ಲಿ ಇರುವುದು. ಮತ್ತು ಅವರಿಗಾಗಿಯೇ ನಾನಿದ್ದೇನೆ. ಇದನ್ನು ಬಿಟ್ಟು ಬೇರೆನಾದರೂ ಮಾಡಿ ಆಗ ನಿಮ್ಮ ಮನಸ್ಸಿಗೆ ಸಮಾಧಾನ ಆಗಬಹುದು" ಎಂದಿದ್ದಾರೆ.

ಅಭಿಷೇಕ್ ಕಮೆಂಟ್ ನೋಡಿ ಅನೇಕರು ನೀವು ಉತ್ತರಿಸಲೇ ಬೇಡಿ, ನೀವು ಕಮೆಂಟ್ ಮಾಡಲಿ ಅಂತಾನೇ ಅವರು ಹೀಗೆ ಮಾಡುತ್ತಾರೆ ಎನ್ನುವ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಅದಕ್ಕೂ ಉತ್ತರಿಸಿರುವ ಅಭಿಷೇಕ್ ಬಚ್ಚನ್, "ಕೆಲವು ಸಮಯದಲ್ಲಿ ಯಾರು ಎಲ್ಲಿ ಇರಬೇಕೋ ಅಲ್ಲಿಯೇ ಇರಬೇಕು ಎನ್ನುವುದನ್ನು ತಿಳಿಸಬೇಕಾಗುತ್ತದೆ" ಎಂದಿದ್ದಾರೆ. ಈ ರೀತಿ ಆಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ತಮ್ಮ ಮಗಳು ಆರಾಧ್ಯ ಬಗ್ಗೆ ಕಮೆಂಟ್ ಮಾಡಿದಾಗಲೂ ಅಭಿಷೇಕ್ ಇದೇ ರೀತಿ ಮಾತಿನಲ್ಲೇ ಚಾಟಿ ಬೀಸಿದ್ದರು.


Click it and Unblock the Notifications











