ನಟ ಅಭಿಷೇಕ್ ಬಚ್ಚನ್ 'ಬಾಬ್ ಬಿಸ್ವಾಸ್' ಲುಕ್ ವೈರಲ್

By ಫಿಲ್ಮ್ ಡೆಸ್ಕ್

ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಸದ್ಯ ಬಾಬ್ ಬಿಸ್ವಾಸ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಚಿತ್ರದ ಚಿತ್ರೀಕರಣ ಕೋಲ್ಕತಾದಲ್ಲಿ ನಡೆಯುತ್ತಿದೆ. ಈ ಸಿನಿಮಾದಲ್ಲಿ ಅಭಿಷೇಕ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅಭಿಷೇಕ್ ಹೊಸ ಲುಕ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೌದು, ಚಿತ್ರೀಕರಣ ಸ್ಥಳದಿಂದ ಅಭಿಷೇಕ್ ಲುಕ್ ಸೋರಿಕೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಬಾಬ್ ಬಿಸ್ವಾಸ್ ಸಿನಿಮಾಗೆ ಸುಜಯ್ ಘೋಷ್ ಪುತ್ರಿ ದಿವ್ಯಾ ಘೋಷ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ದಿವ್ಯಾ ನಿರ್ದೇಶನದ ಚೊಚ್ಚಲ ಸಿನಿಮಾ ಇದಾಗಿದೆ.

ಅಭಿಷೇಕ್ ಬಚ್ಚನ್ ನಿರ್ವಹಿಸುತ್ತಿರುವ ಈ ಪಾತ್ರವನ್ನು ನಿರ್ದೇಶಕ ಸುಜಯ್ ಘೋಷ್, ತಮ್ಮ ಕಹಾನಿ ಸಿನಿಮಾದಲ್ಲಿ ಪರಿಚಯಿಸಿದ್ದರು. ಈ ಪಾತ್ರವನ್ನು ಸಾಸ್ವತಾ ಚಟರ್ಜಿ ನಿರ್ವಹಿಸಿದ್ದರು. ಲೀಕ್ ಆಗಿರುವ ಫೋಟೋದಲ್ಲಿ ಅಭಿಷೇಕ್ ದಪ್ಪ ಕನ್ನಡಕ ಧರಿಸಿ, ಉದ್ದ ಕೂದಲು ಬಿಟ್ಟಿದ್ದಾರೆ.

Abhishek Bachchans look from Bob Biswas Goes viral

ಚಿತ್ರದಲ್ಲಿ ಅಭಿಷೇಕ್ ಗೆ ಜೋಡಿಯಾಗಿ ನಟಿ ಚಿತ್ರಾಂಗದಾ ಸಿಂಗ್ ಕಾಣಿಸಿಕೊಂಡಿದ್ದಾರೆ. ಚಿತ್ರಾಂಗದಾ ಲುಕ್ ಕೂಡ ಸೋರಿಕೆಯಾಗಿದ್ದು, ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ. ಅಭಿಷೇಕ್ ಇತ್ತೀಚಿಗೆ ಲುಡೋ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿತ್ತು. ಇದೀಗ ಬಾಬ್ ಬಿಸ್ವಾಸ್ ಮೂಲಕ ಚಿತ್ರಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ.

Recommended Video

ಅಂದು ಪ್ರಥಮ್ ಮಾಡಿದ ಒಳ್ಳೆ ಕೆಲಸ ಇಂದು ಎಷ್ಟೋ ಮಕ್ಕಳಿಗೆ ಉಪಯೋಗ ಆಗ್ತಿದೆ | Olle Hudga Pratham

More from Filmibeat

English summary
Bollywood Actor Abhishek Bachchan's look from Bob Biswas Goes viral.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X