ಹಲವು ಸಿನಿಮಾ ಅವಕಾಶಗಳನ್ನು ಕಳೆದುಕೊಂಡಿದ್ದಕ್ಕೆ ಕಾರಣ ತಿಳಿಸಿದ ಅಭಿಷೇಕ್ ಬಚ್ಚನ್
ಅಮಿತಾಬ್ ಬಚ್ಚನ್ ನೆರಳಿದ್ದರೂ ಅಭಿಷೇಕ್ ಬಚ್ಚನ್ ಬಾಲಿವುಡ್‌ನಲ್ಲಿ ದೊಡ್ಡ ನಟನಾಗಿ ಬೆಳೆಯಲು ಸಾಧ್ಯವಾಗಲಿಲ್ಲ. ಕೆಲವು ಗಮನಾರ್ಹ ಪಾತ್ರಗಳಲ್ಲಿ ನಟಿಸಿದ್ದರೂ ಯಶಸ್ಸು ಅವರ ಕೈ ಹಿಡಿದಿರಲಿಲ್ಲ. ಅದರಲ್ಲಿಯೂ ಮಗಳು ಜನಿಸಿದ ಬಳಿಕ ಅಭಿಷೇಕ್ ನಟಿಸಿದ ಸಿನಿಮಾಗಳು ಬಹಳ ಕಡಿಮೆ. ಅದಕ್ಕೆ ಕಾರಣವನ್ನು ಅವರು ವಿವರಿಸಿದ್ದಾರೆ.
ಮಗಳು ಆರಾಧ್ಯಾ ಹುಟ್ಟಿ ಎಂಟು ವರ್ಷಗಳಲ್ಲಿ ತಂದೆಯಾಗಿ ಏನಾದರೂ ಬದಲಾವಣೆಗಳಾಗಿದೆಯೇ ಎಂಬ ಪ್ರಶ್ನೆಗೆ ಅಭಿಷೇಕ್, ಅದು ಒಂದು ಅಂಶವನ್ನು ಬದಲಿಸಿದೆ ಎಂದು ನನಗೆ ಗೊತ್ತು. ಕೆಲವು ಬಗೆಯ ಸಿನಿಮಾಗಳು ಮತ್ತು ದೃಶ್ಯಗಳನ್ನು ಮುಂದೆ ಎಂದೂ ಮಾಡುವುದು ನನ್ನಿಂದಾಗದು. ನನ್ನ ಮಗಳಿಗೆ ಕಸಿವಿಸಿಯಾಗುವಂತಹ ಅಥವಾ ಅಯ್ಯೋ ಅಲ್ಲೇನು ಆಗುತ್ತಿದೆ? ಎಂದು ದೃಶ್ಯದ ಬಗ್ಗೆ ಪ್ರಶ್ನಿಸುವಂತಾಗುವುದನ್ನು ನಾನು ಬಯಸುವುದಿಲ್ಲ ಎಂದು ತಿಳಿಸಿದ್ದಾರೆ. ಮುಂದೆ ಓದಿ...

ಮೊದಲಿನಿಂದಲೂ ರೊಮ್ಯಾನ್ಸ್ ಕಷ್ಟ
ಅದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ನನಗೆ ಮೊದಲಿನಿಂದಲೂ ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸಲು ಮುಜುಗರ. ಹೀಗಾಗಿ ನನಗೆ ಯಾವುದೇ ಹಸಿಬಿಸಿ ಸನ್ನಿವೇಶಗಳನ್ನು ಮಾಡುವುದು ಕಷ್ಟವಾಗುತ್ತಿತ್ತು. ಈಗ ಅದನ್ನು ಮಾಡುವುದೇ ಇಲ್ಲ ಎಂದಿದ್ದಾರೆ.

ಇಂಟಿಮೇಟ್ ದೃಶ್ಯ ಬೇಡ
ಇದರಿಂದಾಗಿ ಸಿನಿಮಾಗಳಿಗೆ ಸಹಿ ಹಾಕುವ ಮುನ್ನ ನನ್ನ ನಿರ್ದೇಶಕರಿಗೆ, ಈ ಚಿತ್ರದಲ್ಲಿ ದೈಹಿಕ ಸಲಿಗೆಯ ದೃಶ್ಯಗಳು ಇವೆಯೇ? ಹಾಗೇನಾದರೂ ಇದ್ದರೆ ನಾನು ಮಾಡಲು ಬಯಸುವುದಿಲ್ಲ. ಹೀಗಾಗಿ ನಿಮಗೆ ಆಯ್ಕೆಯ ಅವಕಾಶವಿದೆ ಎಂದು ಹೇಳುತ್ತೇನೆ. ಕೆಲವು ಸಮಯದಲ್ಲಿ ಅಂತಹ ದೃಶ್ಯಗಳನ್ನು ಕೈಬಿಡುತ್ತಾರೆ.

ಬೇಕೇ ಬೇಕು ಎಂದರೆ ಹೊರಹೋಗುತ್ತೇನೆ
ನನ್ನ ಕಥೆ ಹೇಳುವ ಭಾಗದಲ್ಲಿ ಆ ದೃಶ್ಯ ಬಹಳ ಮುಖ್ಯ. ಅದಿಲ್ಲದೆ ಸಿನಿಮಾ ಕಥೆ ಮುಂದುವರಿಸಲು ಸಾಧ್ಯವಿಲ್ಲ ಎಂದರೆ, ನೋಡಿ ನಿಮಗೆ ಆಯ್ಕೆಯಿದೆ. ನಾನು ಸಿನಿಮಾದಿಂದ ಹೊರಗುಳಿಯಲು ಸಂತೋಷದಿಂದ ಸಿದ್ಧನಿದ್ದೇನೆ ಎನ್ನುತ್ತೇನೆ ಎಂದು ಹೇಳಿದ್ದಾರೆ.

ಸಿನಿಮಾ ಕೈತಪ್ಪಿವೆ, ಆದರೆ ಬೇಸರವಿಲ್ಲ
ಈ ಷರತ್ತಿನ ಕಾರಣಕ್ಕೇ ನೀವು ಸಿನಿಮಾ ಕಳೆದುಕೊಂಡಿದ್ದು ಇದೆಯೇ ಎಂಬ ಪ್ರಶ್ನೆಗೆ ಅಭಿಷೇಕ್ ಉತ್ತರ ಹೌದು. ಅದರಿಂದ ಬೇಸರವೇನೂ ಆಗಿಲ್ಲ. ಏಕೆಂದರೆ ನನಗೆ ಸೃಜನಶೀಲ ದೃಷ್ಟಿಕೋನವಿದೆ. ನಿರ್ಮಾಪಕರು-ನಿರ್ದೇಶಕರರೂ ಅವರದ್ದೇ ದೃಷ್ಟಿಕೋನ ಹೊಂದಿರುತ್ತಾರೆ. ಅವರು ಅದರಲ್ಲಿ ರಾಜಿಯಾಗಲು ಬಯಸದೆ ಇದ್ದರೆ ನಾನು ಸಂಪೂರ್ಣವಾಗಿ ಅದನ್ನು ಗೌರವಿಸುತ್ತೇನೆ. ಅದೇನೂ ತೊಂದರೆಯಿಲ್ಲ ಎಂದು ಹೇಳಿದ್ದಾರೆ.


Click it and Unblock the Notifications











