For Quick Alerts
  ALLOW NOTIFICATIONS  
  For Daily Alerts

  ಅಪ್ಪ ನನಗಾಗಿ ಒಂದು ಸಿನಿಮಾವನ್ನೂ ಮಾಡಿಲ್ಲ: ಅಭಿಷೇಕ್ ಬಚ್ಚನ್

  |

  ಬಾಲಿವುಡ್ ನಲ್ಲಿ ಇತ್ತೀಚಿಗೆ ನೆಪೋಟಿಸಂ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಸ್ಟಾರ್ ಮಕ್ಕಳ ವಿರುದ್ಧ ನೆಟ್ಟಿಗರು ರೊಚ್ಚಿಗೆದ್ದಾರೆ. ನೆಪೋಟಿಸಂ ಬಗ್ಗೆ ಮಾತು ಕೇಳಬಂದಾಗಲೆಲ್ಲ, ಅಭಿಷೇಕ್ ಬಚ್ಚನ್ ಹೆಸರು ಸಹ ಕೇಳಿಬರುತ್ತಿದೆ.

  ಬಾಲಿವುಡ್ ನ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಪುತ್ರ ಅಭಿಷೇಕ್ ತಂದೆಯ ನೆರವಿನಿಂದಲೇ ಚಿತ್ರರಂಗದಲ್ಲಿ ಉಳಿದಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿರುತ್ತೆ. ಹಾಗಾಗಿ ಅಭಿಷೇಕ್ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಟ್ರೋಲ್ ಆಗುತ್ತಿರುತ್ತಾರೆ.

  ಪತ್ನಿ ಐಶ್ವರ್ಯಾ ರೈ ಗಾಗಿ ಉಪವಾಸ ವ್ರತ ಆಚರಿಸಿದ ಅಭಿಷೇಕ್ ಬಚ್ಚನ್!ಪತ್ನಿ ಐಶ್ವರ್ಯಾ ರೈ ಗಾಗಿ ಉಪವಾಸ ವ್ರತ ಆಚರಿಸಿದ ಅಭಿಷೇಕ್ ಬಚ್ಚನ್!

  ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅಭಿಷೇಕ್ ನೆಪೋಟಿಸಂ ಬಗ್ಗೆ ಬಹಿರಂಗ ಪಡಿಸಿದ್ದಾರೆ. 'ನಿಜವೇನೆಂದರೆ ಅಪ್ಪ ನನಗೋಸ್ಕರ ಯಾರೆ ಫೋನ್ ಮಾಡಿದರೂ ಸಹ ಸ್ವೀಕರಿಸುವುದಿಲ್ಲ. ಆದರೆ ನಾನೇ ಅವರಿಗಾಗಿ ಪಾ ಎನ್ನುವ ಸಿನಿಮಾ ಮಾಡಿದ್ದೇನೆ' ಎಂದು ಹೇಳಿದ್ದಾರೆ.

  ಅಮಿತಾಬ್ ಬಚ್ಚನ್ ಮಗ ಎನ್ನುವ ಕಾರಣಕ್ಕೆ ಅಭಿಷೇಕ್ ಬಚ್ಚನ್ ಗೆ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸುಲಭವಾಯಿತು. ಆದರೆ ಸಿನಿಮಾರಂಗದಲ್ಲಿ ಶಾಶ್ವತವಾಗಿ ನೆಲೆಸಲು ಶ್ರಮವಹಿಸಬೇಕು. ಈ ಬಗ್ಗೆ ಅಭಿಷೇಕ್ ಯಾವಾಗಲು ಹೇಳುತ್ತಿರುತ್ತಾರೆ. ಇಲ್ಲಿ ಬರುವುದು ಸುಲಭ ಆದರೆ ಚಿತ್ರರಂಗದಲ್ಲಿ ಉಳಿಯಲು ಸಾಕಷ್ಟು ಕಷ್ಟ ಪಡಬೇಕು, ಹೋರಾಟ ಮಾಡಬೇಕು, ಇದನ್ನ ನಾನು ನಿರಂತರ ಮಾಡುತ್ತಲೇ ಬಂದಿರುವುದಾಗಿ ಹೇಳಿದ್ದಾರೆ.

  ಅಪ್ಪ ಸೂಪರ್ ಸ್ಟಾರ್ ಪತ್ನಿ ಐಶ್ವರ್ಯ ರೈ ಸಹ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದವರು. ಆದರೆ ಅಭಿಷೇಕ್ ಬಚ್ಚನ್ ಇತ್ತೀಚಿಗೆ ಚಿತ್ರರಂಗದಲ್ಲಿ ಯಶಸ್ವಿ ನಟನಾಗಿ ಉಳಿದಿಲ್ಲ. ಹಾಗಾಗಿ ಆಗಾಗ ಟ್ರೋಲಿಗರಿಗೆ ಆಹಾರವಾಗುತ್ತಿರುತ್ತಾರೆ. ಎಲ್ಲವನ್ನೂ ಪಾಸಿಟಿವ್ ಆಗಿಯೇ ಸ್ವೀಕರಿಸುವ ಅಭಿಷೇಕ್, ಆಗಾಗ ಟ್ರೋಲ್ ಗಳಿಗೆ ಖಡಕ್ ಉತ್ತರ ನೀಡುತ್ತಿರುತ್ತಾರೆ.

  ಅಭಿಷೇಕ್ ಸದ್ಯ ವೆಬ್ ಸೀರಿಸ್ ನಲ್ಲಿ ಬ್ಯುಸಿಯಾಗಿದ್ದಾರೆ. ಬ್ರೀದ್-2 ವೆಬ್ ಸೀರಿಸ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಇದೀಗ ಲೂಡೊ ವೆಬ್ ಸೀರಿಸ್ ರಿಲೀಸ್ ಗೆ ರೆಡಿಯಾಗಿದೆ. ನವೆಂಬರ್ 1ರಂದು ರಿಲೀಸ್ ಆಗುತ್ತಿದೆ.

  English summary
  Bollywood Actor Abhishek bachchan opens up about Nepotism, He says papa never made film for me.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X