ಏರ್ ಪೋರ್ಟ್ ನಲ್ಲಿ ಅಭಿಶೇಕ್-ಐಶ್ವರ್ಯ ಕಿತ್ತಾಟ: ಇದು ನಿಜವೇ.?

By Harshitha

ಸೆಲೆಬ್ರಿಟಿಗಳು ಏನೇ ಮಾಡಿದ್ರೂ ಸುದ್ದಿನೇ... ತಾರೆಯರ ಜೀವನದಲ್ಲಿ ಒಂದು ಚೂರು ಹೆಚ್ಚು ಕಮ್ಮಿ ಆದರೂ ಅದೇ ಬ್ರೇಕಿಂಗ್ ನ್ಯೂಸ್.... ಸದ್ಯ ಬ್ಲಾಸ್ಟಿಂಗ್ ನ್ಯೂಸ್ ನಲ್ಲಿ ಕೇಳಿಬರುತ್ತಿರುವ ಹೆಸರು ಅಭಿಶೇಕ್ ಬಚ್ಚನ್.!

ಫಾರಿನ್ ಟ್ರಿಪ್ ನಲ್ಲಿದ್ದ ಅಭಿಶೇಕ್ ಬಚ್ಚನ್, ಐಶ್ವರ್ಯ ರೈ ಬಚ್ಚನ್, ಆರಾಧ್ಯ ಬಚ್ಚನ್ ಮೊನ್ನೆಮೊನ್ನೆಯಷ್ಟೇ ಮುಂಬೈ ವಿಮಾನ ನಿಲ್ದಾಣಕ್ಕೆ ವಾಪಸ್ ಬಂದಿಳಿದರು. ಇಮ್ಮಿಗ್ರೇಷನ್ ಪ್ರಕ್ರಿಯೆ ಮುಗಿಸಿ ಏರ್ ಪೋರ್ಟ್ ಹೊರಗೆ ನಿಂತಿದ್ದ ಕಾರಿನವರೆಗೂ ನಡೆದು ಕೊಂಡು ಬರುವಷ್ಟರಲ್ಲಿ ಅಭಿಶೇಕ್ ಫ್ಯಾಮಿಲಿಯ ಫೋಟೋಗಳನ್ನು ಸೆರೆಹಿಡಿಯುವುದರಲ್ಲಿಯೇ ಕ್ಯಾಮರಾಗಳು ಬಿಜಿಯಾಗಿದ್ದವು.

ಈ ನಡುವೆ ಸೆರೆಯಾದ ಒಂದು ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಪುತ್ರಿ ಆರಾಧ್ಯ ಬಚ್ಚನ್ ಕೈಹಿಡಿದುಕೊಳ್ಳಲು ಅಭಿಶೇಕ್ ಮುಂದಾದಾಗ ಐಶ್ವರ್ಯ ಏನಂದ್ರೋ ಏನೋ... ಆರಾಧ್ಯ ಕೈಬಿಟ್ಟು ಎರಡು ಹೆಜ್ಜೆ ಮುಂದಕ್ಕೆ ಅಭಿಶೇಕ್ ನಡೆದುಕೊಂಡು ಹೋಗುವುದು ವಿಡಿಯೋದಲ್ಲಿ ಸೆರೆ ಆಗಿದೆ.

ಇಷ್ಟಕ್ಕೆ, ಮುಂಬೈ ವಿಮಾನ ನಿಲ್ದಾಣದಲ್ಲಿ ಆರಾಧ್ಯ ಕೈಹಿಡಿದುಕೊಳ್ಳುವ ವಿಷಯಕ್ಕೆ ಅಭಿಶೇಕ್ ಮತ್ತು ಐಶ್ವರ್ಯ ಕಿತ್ತಾಡಿದ್ದಾರೆ ಅಂತ ವೆಬ್ ತಾಣವೊಂದು ವರದಿ ಪ್ರಕಟ ಮಾಡಿತ್ತು. ಈ ವರದಿಗೆ ಅಭಿಶೇಕ್ ಬಚ್ಚನ್ ಟ್ವಿಟ್ಟರ್ ನಲ್ಲಿ ಕಿಡಿಕಾರಿದ್ದಾರೆ. ಮುಂದೆ ಓದಿರಿ...

ಟ್ವಿಟ್ಟರ್ ನಲ್ಲಿ ಸಿಡಿದೆದ್ದ ಅಭಿಶೇಕ್ ಬಚ್ಚನ್

ಟ್ವಿಟ್ಟರ್ ನಲ್ಲಿ ಸಿಡಿದೆದ್ದ ಅಭಿಶೇಕ್ ಬಚ್ಚನ್

''ಸುಳ್ಳು ಸುದ್ದಿಗಳನ್ನು ಪ್ರಕಟ ಮಾಡುವುದನ್ನು ದಯವಿಟ್ಟು ನಿಲ್ಲಿಸಿ ಎಂದು ಗೌರವಪೂರ್ವಕವಾಗಿ ಕೇಳಿಕೊಳ್ಳುತ್ತಿದ್ದೇನೆ. ನೀವು ಸುದ್ದಿಗಳನ್ನು ನಿರಂತರವಾಗಿ ಪ್ರಕಟ ಮಾಡುತ್ತಿರಬೇಕು ನಿಜ. ಆದ್ರೆ, ಆ ಕೆಲಸವನ್ನ ಜವಾಬ್ದಾರಿಯಿಂದ ನಿರ್ವಹಿಸಿ. ಧನ್ಯವಾದಗಳು'' ಎಂದು ಟ್ವೀಟ್ ಮಾಡಿದ್ದಾರೆ ನಟ ಅಭಿಶೇಕ್ ಬಚ್ಚನ್

ತಂಟೆಗೆ ಬಂದ್ರೆ ಸುಮ್ನೆ ಬಿಡಲ್ಲ.!

ತಂಟೆಗೆ ಬಂದ್ರೆ ಸುಮ್ನೆ ಬಿಡಲ್ಲ.!

ಬಾಕಿ ಸೆಲೆಬ್ರಿಟಿಗಳ ತರಹ ಅಲ್ಲ ಅಭಿಶೇಕ್. ಯಾರೇ ಟ್ರೋಲ್ ಮಾಡಿದರೂ ತಿರುಗೇಟು ಕೊಡುವುದರಲ್ಲಿ ಅಭಿಶೇಕ್ ಬಚ್ಚನ್ ಎತ್ತಿದ ಕೈ. ಹೀಗಿರುವಾಗ, ವೆಬ್ ತಾಣವೊಂದು ಮನಬಂದಂತೆ ಸುದ್ದಿ ಪ್ರಕಟ ಮಾಡಿದ್ರೆ ಸುಮ್ಮನೆ ಬಿಡ್ತಾರಾ.? ಟ್ವೀಟ್ ಮೂಲಕವೇ ಚಾಟಿಯೇಟು ಕೊಟ್ಟಿದ್ದಾರೆ ಅಭಿಶೇಕ್.

ಮಗಳ ಬಗ್ಗೆ ಕಾಮೆಂಟ್

ಮಗಳ ಬಗ್ಗೆ ಕಾಮೆಂಟ್

''ನಿಮ್ಮ ಮಗಳು ಸ್ಕೂಲ್ ಗೆ ಹೋಗಲ್ವಾ.? ನಿಮಗೆ ಇಷ್ಟ ಬಂದಾಗೆಲ್ಲ ಟ್ರಿಪ್ ಗೆ ಹೋಗ್ತೀರಾ. ಅದ್ಯಾವ ಸ್ಕೂಲ್ ಆರಾಧ್ಯಗೆ ಪರ್ಮಿಷನ್ ಕೊಡುತ್ತೆ.? ನಿಮಗೆಲ್ಲ ಬುದ್ಧಿಗಿಂತ ಸೌಂದರ್ಯ ಮುಖ್ಯ ಅಂತ ಕಾಣುತ್ತೆ'' ಅಂತ ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಅದಕ್ಕೆ ಅಭಿಶೇಕ್ ಏನಂತ ಪ್ರತಿಕ್ರಿಯೆ ಕೊಟ್ಟಿದ್ದಾರೆ ಗೊತ್ತಾ.?

ಅಭಿಶೇಕ್ ಪ್ರತಿಕ್ರಿಯೆ ಹೇಗಿತ್ತು.?

ಅಭಿಶೇಕ್ ಪ್ರತಿಕ್ರಿಯೆ ಹೇಗಿತ್ತು.?

''ನನಗೆ ಗೊತ್ತಿರುವ ಹಾಗೆ ವಾರಾಂತ್ಯದಲ್ಲಿ ಬಹುತೇಕ ಎಲ್ಲಾ ಸ್ಕೂಲ್ ಗಳಿಗೂ ರಜೆ ಇದೆ. ಆರಾಧ್ಯ ವಾರದ ದಿನಗಳಲ್ಲಿ ಸ್ಕೂಲ್ ಗೆ ಹೋಗುತ್ತಾಳೆ'' ಎಂದು ಉತ್ತರ ಕೊಟ್ಟಿದ್ದರು ಅಭಿಶೇಕ್ ಬಚ್ಚನ್.

'ಮನ್ಮರ್ಝಿಯಾನ್' ಚಿತ್ರದಲ್ಲಿ ಅಭಿಶೇಕ್

'ಮನ್ಮರ್ಝಿಯಾನ್' ಚಿತ್ರದಲ್ಲಿ ಅಭಿಶೇಕ್

ಸ್ವಲ್ಪ ಗ್ಯಾಪ್ ನ ಬಳಿಕ ಅಭಿಶೇಕ್ ಬಚ್ಚನ್ ಇದೀಗ ಮತ್ತೆ ಬಣ್ಣ ಹಚ್ಚಿದ್ದಾರೆ. ತಾಪ್ಸಿ ಜೊತೆಗೆ 'ಮನ್ಮರ್ಝಿಯಾನ್' ಚಿತ್ರದಲ್ಲಿ ಅಭಿಶೇಕ್ ನಟಿಸಿದ್ದಾರೆ. ಸಿನಿಮಾ ಲೋಕದ ಜೊತೆಗೆ ಕ್ರೀಡಾ ಲೋಕದಲ್ಲೂ ತೊಡಗಿಸಿಕೊಂಡಿರುವ ಅಭಿಶೇಕ್ ಆಗಾಗ ಟ್ರೋಲ್ ಆಗುತ್ತಲೇ ಇರುತ್ತಾರೆ.

More from Filmibeat

English summary
Bollywood Actor Abhishek Bachchan slams report that Aishwarya Rai dint let him hold Aaradhya's Hand.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X