ಐಶಾರಾಮಿ ಮನೆ ಮಾರಿದ ಅಭಿಷೇಕ್ ಬಚ್ಚನ್: ಕಾರಣ?

ನಟ ಅಭಿಷೇಕ್ ಬಚ್ಚನ್ ಬಾಲಿವುಡ್‌ನಲ್ಲಿ ಆರಕ್ಕೇರದ ಮೂರಕ್ಕೇರದ ನಟನಾಗಿ ಉಳಿದುಬಿಟ್ಟಿದ್ದಾರೆ. ಖ್ಯಾತ ನಟ ಅಮಿತಾಬ್ ಬಚ್ಚನ್ ಮಗನಾದರೂ ಬಾಲಿವುಡ್‌ನಲ್ಲಿ ಸ್ಟಾರ್ ಪಟ್ಟ ಗಳಿಸಿಕೊಳ್ಳಲು ಅಭಿಷೇಕ್‌ಗೆ ಸಾಧ್ಯವಾಗಿಲ್ಲ.

ಅಭಿಷೇಕ್ ಬಚ್ಚನ್ ಹಿಟ್ ಸಿನಿಮಾ ಒಂದನ್ನು ನೀಡಿ ಬಹಳ ಕಾಲವೇ ಆಯ್ತು. ಈ ನಡುವೆ ವೆಬ್ ಸರಣಿಯಲ್ಲಿಯೂ ನಟಿಸಿ ಬಂದ ಅಭಿಷೇಕ್‌ರ ಈ ಹಿಂದಿನ ಸಿನಿಮಾ 'ಬಿಗ್ ಬುಲ್'ಗೆ ಒಳ್ಳೆಯ ವಿಮರ್ಶೆಗಳೇನೂ ಸಿಗಲಿಲ್ಲ. ಇದೀಗ ಅಭಿಷೇಕ್ ಬಚ್ಚನ್ ಕೈಯಲ್ಲಿ ಅಷ್ಟೇನೂ ದೊಡ್ಡ ಸಿನಿಮಾಗಳಿಲ್ಲ.

ಈ ನಡುವೆ ಅಭಿಷೇಕ್ ಬಚ್ಚನ್ ಮುಂಬೈನಲ್ಲಿನ ತಮ್ಮ ಐಶಾರಾಮಿ ನಿವಾಸವನ್ನು ಮಾರಿದ್ದಾರೆ. ಮಾರಾಟದ ಪ್ರಕ್ರಿಯೆಯಿಂದ ದೊಡ್ಡ ಮೊತ್ತದ ಹಣವನ್ನು ಅಭಿಷೇಕ್ ತಮ್ಮ ಖಾತೆಗೆ ಬರಮಾಡಿಕೊಂಡಿದ್ದಾರೆ. ಆದರೆ ಅಭಿಷೇಕ್ ವೃತ್ತಿ ಜೀವನದಲ್ಲಿ ಸತತ ಸೋಲು ಕಾಣುತ್ತಿರುವ ಕಾರಣದಿಂದಲೇ ಹೀಗೆ ಆಸ್ತಿ ಮಾರಾಟ ಮಾಡಿದ್ದಾರೆ ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ.

ಅಭಿಷೇಕ್ ಬಚ್ಚನ್ 2014ರಲ್ಲಿ ಮುಂಬೈನ ಒಬೆರಾಯ್ ವೆಸ್ಟ್‌ನಲ್ಲಿ ಐಶಾರಾಮಿ ಅಪಾರ್ಟ್‌ಮೆಂಟ್‌ನಲ್ಲಿ ಫ್ಲಾಟ್‌ ಒಂದನ್ನು ಖರೀದಿಸಿದ್ದರು. ಆ ಫ್ಲಾಟ್‌ ಅನ್ನು ಇದೀಗ ಅಭಿಷೇಕ್ ಬಚ್ಚನ್ ಮಾರಾಟ ಮಾಡಿದ್ದಾರೆ. 2014ರಲ್ಲಿ 41 ಕೋಟಿಗೆ ಖರೀದಿಸಿದ್ದ ಅಪಾರ್ಟ್‌ಮೆಂಟ್ ಅನ್ನು 45 ಕೋಟಿಗೆ ಅಭಿಷೇಕ್ ಬಚ್ಚನ್ ಮಾರಾಟ ಮಾಡಿದ್ದಾರೆ. ಆ ಹಣವನ್ನು ಬೇರೆಡೆ ವಿನಿಯೋಗಿಸುವ ಗುರಿಯನ್ನು ಅಭಿಷೇಕ್ ಹೊಂದಿದ್ದಾರಂತೆ.

ಅಮಿತಾಬ್ ಬಚ್ಚನ್ ಜೊತೆ ವಾಸವಿರುವ ಅಭಿಷೇಕ್

ಅಮಿತಾಬ್ ಬಚ್ಚನ್ ಜೊತೆ ವಾಸವಿರುವ ಅಭಿಷೇಕ್

ಅಭಿಷೇಕ್ ಬಚ್ಚನ್‌, ಐಶ್ವರ್ಯಾ ರೈ ಹಾಗೂ ಮಗಳು ಆಧ್ಯಾ ಜುಹುನಲ್ಲಿರುವ ತಂದೆ ಅಮಿತಾಬ್ ಬಚ್ಚನ್ ಮನೆಯಲ್ಲಿಯೇ ವಾಸವಿದ್ದಾರೆ. ಬಹಳ ವರ್ಷಗಳಿಂದಲೂ ಈ ಕುಟುಂಬ ಒಟ್ಟಾಗಿಯೇ ಇದೆ. ಜುಹುವಿನಲ್ಲಿರುವ ಮನೆಯು ಮುಂಬೈನ ಐಶಾರಾಮಿ ಮನೆಗಳಲ್ಲಿ ಒಂದಾಗಿದ್ದು, ದೊಡ್ಡ ವಿಸ್ತಾರ ಹಾಗೂ ದೊಡ್ಡ ಒಳಾಂಗಣವನ್ನು ಈ ಮನೆ ಹೊಂದಿದೆ. ಈ ಮನೆಯನ್ನು ನಿರ್ದೇಶಕ ರಮೇಶ್ ಸಿಪ್ಪಿ ಅಮಿತಾಬ್ ಬಚ್ಚನ್‌ಗೆ ಉಡುಗೊರೆಯಾಗಿ ನೀಡಿದ್ದರು. ಮನೆಯ ಹೆಸರು ಜಲ್ಸಾ.

ಶಾಹಿದ್ ಕಪೂರ್, ಅಕ್ಷಯ್ ಕುಮಾರ್ ಮನೆ ಖರೀದಿಸಿದ್ದಾರೆ

ಶಾಹಿದ್ ಕಪೂರ್, ಅಕ್ಷಯ್ ಕುಮಾರ್ ಮನೆ ಖರೀದಿಸಿದ್ದಾರೆ

ಅಭಿಷೇಕ್ ಬಚ್ಚನ್ ಈಗ ಮಾರಾಟ ಮಾಡಿರುವ ಅಪಾರ್ಟ್‌ಮೆಂಟ್‌ನಲ್ಲಿಯೇ ಶಾಹಿದ್ ಕಪೂರ್ ಮತ್ತು ಅಕ್ಷಯ್ ಕಪೂರ್ ಫ್ಲಾಟ್‌ ಖರೀದಿ ಮಾಡಿದ್ದಾರೆ. ಶಾಹಿದ್ ಕಪೂರ್ 56 ಕೋಟಿ ತೆತ್ತು ಫ್ಲಾಟ್ ಖರೀದಿಸಿದ್ದರೆ, ಅಕ್ಷಯ್ ಕುಮಾರ್ 52 ಕೋಟಿ ತೆತ್ತು ಫ್ಲಾಟ್‌ ಖರೀದಿಸಿದ್ದಾರೆ. ಶಾಹಿದ್ ಕಪೂರ್ ಖರೀದಿಸಿರುವ ಫ್ಲ್ಯಾಟ್‌ 42,43ನೇ ಮಹಡಿಯಲ್ಲಿದ್ದು, ತಮ್ಮ ಹೊಸ ನಿವಾಸದ ಕೆಲವು ಚಿತ್ರ, ವಿಡಿಯೋಗಳನ್ನು ಶಾಹಿದ್ ಪತ್ನಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಹಲವು ನಟ-ನಟಿಯರು ಮನೆಗಳನ್ನು ಖರೀದಿಸಿದ್ದಾರೆ

ಹಲವು ನಟ-ನಟಿಯರು ಮನೆಗಳನ್ನು ಖರೀದಿಸಿದ್ದಾರೆ

ಇತ್ತೀಚಿನ ದಿನಗಳಲ್ಲಿ ಹಲವು ಬಾಲಿವುಡ್ ಸೆಲೆಬ್ರಿಟಿಗಳು ಹೊಸ ಮನೆಗಳನ್ನು ಖರೀದಿಸಿದ್ದಾರೆ. ಹೃತಿಕ್ ರೋಷನ್, ರಾಣಿ ಮುಖರ್ಜಿ, ದಿಶಾ ಪಟಾನಿ, ಸನ್ನಿ ಲಿಯೋನ್, ಜಾಹ್ನವಿ ಕಪೂರ್ ಇನ್ನೂ ಹಲವರು ಮುಂಬೈನ ಐಶಾರಾಮಿ ಪ್ರದೇಶಗಳಲ್ಲಿ ಮನೆಗಳನ್ನು ಖರೀದಿಸಿದ್ದಾರೆ. ತೆಲುಗಿನ ನಟ ರಾಮ್ ಚರಣ್, ಕನ್ನಡತಿ ರಶ್ಮಿಕಾ ಮಂದಣ್ಣ ಸಹ ಮುಂಬೈನಲ್ಲಿ ಇತ್ತೀಚೆಗೆ ಮನೆಗಳನ್ನು ಖರೀದಿಸಿದ್ದಾರೆ.

ಅಭಿಷೇಕ್ ಬಚ್ಚನ್ ಕೈಲಿರುವ ಸಿನಿಮಾಗಳು

ಅಭಿಷೇಕ್ ಬಚ್ಚನ್ ಕೈಲಿರುವ ಸಿನಿಮಾಗಳು

ಅಭಿಷೇಕ್ ಬಚ್ಚನ್ ಸಿನಿಮಾಗಳನ್ನು ಗಮನಿಸುವುದಾದರೆ ಇತ್ತೀಚೆಗಷ್ಟೆ ಬಿಡುಗಡೆ ಆದ 'ಬಿಗ್ ಬುಲ್' ಸಿನಿಮಾ ಪ್ರೇಕ್ಷಕರನ್ನು ಸೆಳೆಯಲು ವಿಫಲವಾಗಿದೆ. ಕೆಲವೇ ದಿನಗಳಲ್ಲಿ 'ಬಾಬ್ ಬಿಸ್ವಾಸ್' ಹೆಸರಿನ ಸಿನಿಮಾ ಬಿಡುಗಡೆ ಆಗಲಿದೆ. ಅದರ ನಂತರ 'ದಾಸವಿ' ಆ ಸಿನಿಮಾದ ಬಳಿಕ 'ಗುಲಾಬ್ ಜಾಮೂನ್' ಸಿನಿಮಾ ಬಿಡುಗಡೆ ಆಗಲಿದೆ. ಇನ್ನು ನಟಿ ಐಶ್ವರ್ಯಾ ರೈ ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್ ಸೆಲ್ವನ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
Actor Abhishek Bachchan sold his luxury apartment in Mumbai for 45 crore. He was purchased this apartment in 2014 for 41 crore rs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X