For Quick Alerts
  ALLOW NOTIFICATIONS  
  For Daily Alerts

  ಐಶ್ವರ್ಯ ತುಟಿಗೆ ಎಲ್ಲರೂ ಗೇಲಿ ಮಾಡಿದ್ರು, ಆದ್ರೆ ಅಭಿಷೇಕ್ ಏನಂದ್ರು?

  By ಸೋನು ಗೌಡ
  |

  69ನೇ ಕೇನ್ಸ್ ಅಂತಾರಾಷ್ಟ್ರೀಯ ಚಲನಚಿತ್ರೊತ್ಸವದಲ್ಲಿ ವಿಭಿನ್ನವಾಗಿ ವೇಷ ತೊಟ್ಟು ಭಾಗವಹಿಸಿದ್ದ ಬಚ್ಚನ್ ಫ್ಯಾಮಿಲಿ ಸೊಸೆ ನಟಿ ಐಶ್ವರ್ಯ ರೈ ಅವರು ನೇರಳೆ ಬಣ್ಣದ ಲಿಪ್ ಸ್ಟಿಕ್ ಹಾಕಿ ಇಡೀ ಪ್ರಪಂಚಕ್ಕೆ ಸುದ್ದಿಯಾಗಿರುವ ವಿಚಾರವನ್ನು ನಾವು ನಿಮಗೆ ಇದೇ ಫಿಲ್ಮಿಬೀಟಲ್ಲಿ ಹೇಳಿದ್ವಿ ತಾನೆ.

  ಇದೀಗ ಟ್ವಿಟ್ಟರ್ ಮೂಲಕ ಎಲ್ಲರೂ ಗೇಲಿ ಮಾಡಿದ್ದು ಓಕೆ, ಆದರೆ ತಮ್ಮ ಮುದ್ದು ಪತ್ನಿಯ ತರೇಹವಾರಿ ವೇಷಕ್ಕೆ ಐಶ್ ಡಾರ್ಲಿಂಗ್ ಪತಿದೇವ ಅಭಿಷೇಕ್ ಬಚ್ಚನ್ ಅವರು ಏನಂದ್ರು? ಗೊತ್ತಾ?.[ಟ್ವಿಟ್ಟರ್ ನಲ್ಲಿ ನಗೆಪಾಟಲಿಗೀಡಾಗುತ್ತಿದೆ ಐಶ್ವರ್ಯ ರೈ ತುಟಿ]

  ನ್ಯೂಸ್ ಎಜೆನ್ಸಿ ಒಂದಕ್ಕೆ ಐಶ್ ಲಿಪ್ ಸ್ಟಿಕ್ ಬಗ್ಗೆ ಮಾತನಾಡಿರುವ ಅಭಿಷೇಕ್ ಬಚ್ಚನ್ ಅವರು "ನೇರಳೆ ಬಣ್ಣದ ಲಿಪ್ ಸ್ಟಿಕ್ ನಲ್ಲಿ ನನಗೆ ಅವರು ಅದ್ಭುತವಾಗಿ ಕಾಣಿಸುತ್ತಿದ್ದರು. ಅವರು ಯಾವಾಗಲೂ ಹಾಗೆ ಡಿಫರೆಂಟ್ ಆಗಿ ಇರುತ್ತಾರೆ" ಎಂದು ಹೆಂಡತಿ ಪರ ಅಭಿಷೇಕ್ ಬಚ್ಚನ್ ವಕಾಲತ್ತು ವಹಿಸಿದ್ದಾರೆ.[ಚಿತ್ರಗಳು: 9ನೇ ವರ್ಷದ ಮದುವೆ ವಾರ್ಷಿಕೋತ್ಸವ ಸಂಭ್ರಮದಲ್ಲಿ ಐಶ್-ಅಭಿ]

  'ಲಾರಿಯಲ್ ಪ್ಯಾರಿಸ್' ಸೌಂದರ್ಯ ವರ್ಧಕದ ಪ್ರತಿನಿಧಿಯಾಗಿ ಕೇನ್ಸ್ ಚಲನಚಿತ್ರೋತ್ಸವದ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದ ನಟಿ ಐಶ್ವರ್ಯ ರೈ ಅವರು ತಮ್ಮ ಮೇಕಪ್ಪ್ ಹಾಗೂ ಡ್ರೆಸ್ಸಿಂಗ್ ಸ್ಟೈಲ್ ನಿಂದ ಎಲ್ಲರ ಗಮನ ತಮ್ಮತ್ತ ಸೆಳೆಯುವಂತೆ ಮಾಡಿದ್ದರು.[ಫೋಟೋ ಗ್ಯಾಲರಿ; ಕೇನ್ಸ್ ಚಿತ್ರೋತ್ಸವದಲ್ಲಿ ಸುರಸುಂದರಿ ಐಶ್ವರ್ಯ ರೈ]

  ಸತತ 15 ವರ್ಷದಿಂದ ಕೇನ್ಸ್ ಚಲನಚಿತ್ರೊತ್ಸವದಲ್ಲಿ ಭಾಗವಹಿಸುತ್ತಿರುವ ನಟಿ ಐಶ್ವರ್ಯ ರೈ ಅವರು ವಿಶೇಷವಾಗಿ ತಮ್ಮ ಉಡುಗೆ-ತೊಡುಗೆ ಕಡೆ ಹೆಚ್ಚಿನ ಗಮನ ಹರಿಸುತ್ತಿದ್ದು, ಈ ಮೂಲಕವೇ ಹೆಚ್ಚು ಸುದ್ದಿಯಾಗುತ್ತಾರೆ.

  English summary
  Bollywood Actress Aishwarya Rai Bachchan was recently criticised a lot for her purple lip colour at the Cannes Film Festival 2016. But her husband Abhishek Bachchan has supported and praised her for trying the bold look.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X