For Quick Alerts
  ALLOW NOTIFICATIONS  
  For Daily Alerts

  ಶಸ್ತ್ರಚಿಕಿತ್ಸೆ ಬಳಿಕ ಮೊದಲ ಫೋಟೋ ಹಂಚಿಕೊಂಡ ನಟ ಅಭಿಷೇಕ್ ಬಚ್ಚನ್

  |

  ಚಿತ್ರೀಕರಣ ವೇಳೆ ಗಾಯಗೊಂಡಿದ್ದ ಬಾಲಿವುಡ್ ಖ್ಯಾತ ನಟ ಅಭಿಷೇಕ್ ಬಚ್ಚನ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಇತ್ತೀಚಿಗಷ್ಟೆ ಅಭಿಷೇಕ್ ಬಚ್ಚನ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಅಭಿಷೇಕ್ ಬಚ್ಚನ್ ನೋಡಲು ಅಮಿತಾಬ್ ಬಚ್ಚನ್ ಮತ್ತು ಶ್ವೇತಾ ಬಚ್ಚನ್ ಸೇರಿದಂತೆ ಕುಟುಂಬದವರು ಆಸ್ಪತ್ರೆಗೆ ತೆರಳಿದ್ದರು. ಬಚ್ಚನ್ ಕುಟುಂಬ ಆಸ್ಪತ್ರೆಯಲ್ಲಿದ್ದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಆದರೆ ಈ ಬಗ್ಗೆ ಬಚ್ಚನ್ ಕುಟುಂಬದ ಕಡೆಯಿಂದ ಯಾವುದೇ ಮಾಹಿತಿ ಬಹಿರಂಗ ಪಡಿಸಿರಲಿಲ್ಲ.

  ಇದೀಗ ಅಭಿಷೇಕ್ ಬಚ್ಚನ್ ಶಸ್ತ್ರ ಚಿಕಿತ್ಸೆ ಬಳಿಕ ಮೊದಲ ಫೋಟೋ ಶೇರ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ. ಚಿತ್ರೀಕರಣ ವೇಳೆ ಅಭಿಷೇಕ್ ಕೈಗೆ ತೀವ್ರವಾದ ಏಟು ಬಿದ್ದಿತ್ತು. ಚೆನ್ನೈನಲ್ಲಿ ಚಿತ್ರೀಕರಣ ಮಾಡುತ್ತಿದ್ದ ವೇಳೆ ಸಂಭವಿಸಿದ ಈ ಅವಘಡದ ಬಳಿಕ ಅಭಿಷೇಕ್ ತಕ್ಷಣ ಮುಂಬೈಗೆ ವಾಪಸ್ ಆಗಿದ್ದರು. ಮುಂಬೈ ವಿಮಾನ ನಿಲ್ದಾಣನಲ್ಲಿ ಪುತ್ರಿ ಆರಾಧ್ಯ ಮತ್ತು ಪತ್ನಿ ಐಶ್ವರ್ಯಾ ಇಬ್ಬರು ಅಭಿಷೇಕ್ ನನ್ನು ಸ್ವಾಗತಿಸಿದ್ದರು. ಈ ಫೋಟೋಗಳು ಸಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಬಳಿಕ ತಕ್ಷಣ ಆಸ್ಪತ್ರೆಗೆ ದಾಖಲಾಗಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು.

  ಈ ಬಗ್ಗೆ ಅಭಿಷೇಕ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. "ಕಳೆದ ಬುಧವಾರ ನನ್ನ ಹೊಸ ಸಿನಿಮಾದ ಚಿತ್ರೀಕರಣವೇಳೆ ಚೆನ್ನೈನಲ್ಲಿ ಸಂಭವಿದ ಅವಘಡದಲ್ಲಿ, ನನ್ನ ಬಲಗೈ ಮುರಿದಿದೆ. ಶಸ್ತ್ರ ಚಿಕಿತ್ಸೆಯ ಅಗತ್ಯವಿತ್ತು. ಹಾಗಾಗಿ ಚೆನ್ನೈನಿಂದ ಮುಂಬೈಗೆ ತ್ವರಿತವಾಗಿ ಹೊರಟೆ. ಇದೀಗ ಶಸ್ತ್ರ ಚಿಕಿತ್ಸೆ ಮುಗಿದಿದೆ. ಎಲ್ಲಾ ಪ್ಯಾಚ್ ಅಪ್ ಮಾಡಲಾಗಿದೆ. ಈಗ ಮತ್ತೆ ಕೆಲಸಕ್ಕೆ ಚೆನ್ನೈಗೆ ಹೋಗಬೇಕು. ನನ್ನ ತಂದೆ ಹೇಳಿದಂತೆ ಗಂಡಸರಿಗೆ ನೋವಾಗಲ್ಲ. ಓಕೆ...ಓಕೆ.. ಸ್ವಲ್ಪ ನೋವಾಯಿತು" ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಗುಣಮುಖರಾಗಲಿ ಎಂದು ಹಾರೈಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದು ಹೇಳಿದ್ದಾರೆ.

  ಅಭಿಷೇಕ್ ಬಚ್ಚನ್ ಸದ್ಯ ಬಾಬ್ ಬಿಸ್ವಾಸ್ ಮತ್ತು ದಸ್ವಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಾಬ್ ಬಿಸ್ವಾಸ್ ಚಿತ್ರದಲ್ಲಿ ಅಭಿಷೇಕ್ ಬಚ್ಚನ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಭಿಷೇಕ್ ಬಚ್ಚನ್ ಲುಕ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಸದ್ಯ ಚೆನ್ನೈನಲ್ಲಿ ಯಾವ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಬಗ್ಗೆ ಮಾಹಿತಿ ರಿವೀಲ್ ಮಾಡಿಲ್ಲ. ಅಭಿಷೇಕ್ ಕೊನೆಯದಾಗಿ ದಿ ಬಿಗ್ ಬುಲ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಒಟಿಟಿಯಲ್ಲಿ ಸಿನಿಮಾ ಬಿಡುಗಡೆಯಾಗಿತ್ತು. ಈ ಸಿನಿಮಾವನ್ನು ಬಾಲಿವುಡ್ ಖ್ಯಾತ ನಟ ಅಜಯ್ ದೇವಗನ್ ನಿರ್ಮಾಣ ಮಾಡಿದ್ದರು.

  ಇತ್ತೀಚಿಗಷ್ಟೆ ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟ ಪ್ರಕಾಶ್ ರೈ ಚಿತ್ರೀಕರಣ ವೇಳೆ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಚೆನ್ನೈನಲ್ಲಿ ಚಿತ್ರೀಕರಣ ಮಾಡುತ್ತಿದ್ದ ಪ್ರಕಾಶ್ ರೈ ಕೈಗೆ ಬಲವಾದ ಏಟು ಬಿದ್ದಿತ್ತು. ಬಳಿಕ ಹೈದರಾಬಾದ್ ನ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ಚೇತರಿಸಿಕೊಂಡಿರುವ ಪ್ರಕಾಶ್ ರೈ ಮತ್ತೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.

  English summary
  Actor Abhishek Bachchan undergoes Surgery after freak accident in Shooting set.
  Thursday, August 26, 2021, 11:15
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X