I Want To Talk Box Office Collection Day 3 ; ಛೇ 'ಬಚ್ಚನ್‌' ಹೆಸರಿಗಾದರೂ ಮರ್ಯಾದೆ ಬೇಡವೇ ?

ಬಾಲಿವುಡ್‌ನಲ್ಲಿ ಲಕ್ಷವೆಲ್ಲಾ ಅಲಕ್ಷ್ಯ. ಒಂದೆರಡು ಕೋಟಿಗಳಂತೂ ಕಾಲ ಕಸ. ಅಲ್ಲೇನೇ ಇದ್ದರೂ 100-200 ಕೋಟಿಗಳದ್ದೇ ಕಾರು ಬಾರು ಅನ್ನುವ ಮಾತು ಈ ಹಿಂದೆ ಇತ್ತು. ಆದರೆ ಈಗ ಕಾಲ ಮೊದಲಿನಂತೆ ಇಲ್ಲ. ಬಾಲಿವುಡ್‌ಗೆ ಈಗ ಈ ಹಿಂದೆಯಂತೆ ಕುಬೇರ ವರ ಸಿಕ್ತಿಲ್ಲ. ಇದಕ್ಕೆ ಐ ವಾಂಟ್ ಟು ಟಾಕ್ ಸದ್ಯದ ಉದಾಹರಣೆ.

ಹೌದು, ಮೊನ್ನೆ ಶುಕ್ರವಾರದಂದು ಅಭಿಷೇಕ್ ಬಚ್ಚನ್ ಅಭಿನಯದ ಐ ವಾಂಟ್ ಟು ಟಾಕ್ ಚಿತ್ರ ತೆರೆಗೆ ಬಂದಿದೆ. ವಿಮರ್ಷಕರ ಪ್ರೀತಿಗೆ ಕೂಡ ಈ ಚಿತ್ರ ಪಾತ್ರವಾಗಿದೆ. ಆದರೆ, ದುರಂತ.. ಪ್ರೇಕ್ಷಕರು ಈ ಚಿತ್ರವನ್ನು ಮೊದಲೆರಡು ದಿನ ನಿರಾಕರಿಸಿದ್ದಾರೆ. ಚಿತ್ರ ನೋಡಲು ಯೋಚನೆ ಮಾಡುತ್ತಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಚಿತ್ರದ ಗಳಿಕೆ ಪಾತಾಳಕ್ಕೆ ಕುಸಿದಿದೆ. ಬಿಡುಗಡೆಗೊಂಡು ಮೂರು ದಿನವಾದರೂ ಒಂದು ಕೋಟಿಯ ಗಡಿಯನ್ನು ತಲುಪಲು ಸಾಧ್ಯವಾಗದೇ ಚಿತ್ರ ಬಾಕ್ಸಾಫೀಸ್‌ನಲ್ಲಿ ವಿಲ ವಿಲ ಒದ್ದಾಡುತ್ತಿದೆ.

Abhishek Bachchan s I Want to Talk Struggles at the Box Office Earning 69 Lakhs in 2 Days

ಹೌದು, ನಿಮಗೆ ಗೊತ್ತಿರಲಿ... ಸದ್ದು ಗದ್ದಲ ಇಲ್ಲದೇ, ಹೆಚ್ಚು ಪ್ರಚಾರ ಇಲ್ಲದೇ ಬಿಡುಗಡೆಯಾದ ಈ ಚಿತ್ರ ಮೊದಲ ದಿನ ಕೇವಲ 25 ಲಕ್ಷವನ್ನಷ್ಟೇ ಗಳಿಸಿತ್ತು. ಈ ಮೂಲಕ ಬಚ್ಚನ್ ಕುಟುಂಬದಲ್ಲಿಯೇ ಅತ್ಯಂತ ಕಳಪೆ ಗಳಿಕೆ ಮಾಡಿದ ಚಿತ್ರ ಎನ್ನುವ ಕುಖ್ಯಾತಿಗೆ ಈ ಚಿತ್ರ ಪಾತ್ರವಾಗಿತ್ತು. ಆದರೆ, ಎರಡನೇ ದಿನ ಚಿತ್ರದ ಗಳಿಕೆಯಲ್ಲಿ ಭಾರೀ ಏರಿಕೆಯಾಯ್ತು. ಅದಕ್ಕೆ ಕಾರಣ ಮೌತ್ ಪಬ್ಲಿಸಿಟಿ. ಚಿತ್ರವನ್ನು ನೋಡಿದ ಪ್ರತಿಯೊಬ್ಬರು ಚಿತ್ರವನ್ನು ಮೆಚ್ಚಿಕೊಂಡ ಕಾರಣಕ್ಕೆ ನಿನ್ನೆ ಚಿತ್ರದ ಗಳಿಕೆಯಲ್ಲಿ ಏರಿಕೆ ಕಂಡಿತ್ತು. ಮೊದಲ ದಿನದ ಗಳಿಕೆಗೆ ಹೋಲಿಸಿದರೆ ಎರಡನೇ ದಿನದ ಗಳಿಕೆ 108.00% ಹೆಚ್ಚಾಗಿತ್ತು. ಆದರೆ ಇಂದು ಈ ಚಿತ್ರದ ಗಳಿಕೆ ಮತ್ತೆ ನೆಲಕಚ್ಚಿದೆ. ಮೊದಲ ದಿನಕ್ಕಿಂತ ಚೂರೇ ಚೂರು ಹೆಚ್ಚಿನ ಗಳಿಕೆಯನ್ನು ಚಿತ್ರ ಮಾಡಿದೆ. 30 ಲಕ್ಷಕ್ಕೆ ಭಾನುವಾರದ ಪ್ರದರ್ಶನವನ್ನು ಚಿತ್ರ ಕೊನೆಗೊಳಿಸಿದೆ.

ಮುಂಬೈನಲ್ಲಿ ಇಂದು ಈ ಚಿತ್ರವನ್ನು ನೋಡಲು ಮುಂಬೈನಲ್ಲಿ ಕೇವಲ 11.50% ಪ್ರೇಕ್ಷಕರು ಮಾತ್ರ ಇಂದು ಉತ್ಸಾಹ ತೋರಿಸಿದ್ದರೆ, ಬೆಂಗಳೂರಿನಲ್ಲಿ ಇಂದು ಚಿತ್ರಮಂದಿರ 18.50% ತುಂಬಿತ್ತು. ಉಳಿದಂತೆ ಹೈದ್ರಾಬಾದ್‌ನ ಜನ ಈ ಚಿತ್ರವನ್ನು ನೋಡುವ ಆಸಕ್ತಿಯನ್ನು ತೋರಿಸುತ್ತಿದ್ದಾರೆ. ಈ ಮೂರು ಪ್ರದೇಶಗಳನ್ನು ಹೊರತು ಪಡಿಸಿದರೆ ಬೇರೆ ಕಡೆ ಈ ಚಿತ್ರವನ್ನು ಕಣ್ತುಂಬಿಕೊಳ್ಳುವ ಮನಸನ್ನು ಯಾರು ಮಾಡುತ್ತಿಲ್ಲ. ಅದರಲ್ಲಿಯೂ ಸೂರತ್ ಮತ್ತು ಚಂದೀಗಡ್‌ದಲ್ಲಿ ಐ ವಾಂಟ್ ಟು ಟಾಕ್ ಚಿತ್ರವನ್ನು ಪ್ರದರ್ಶಿಸುತ್ತಿರುವ ಚಿತ್ರಮಂದಿರಗಳು ಸಂಪೂರ್ಣ ಖಾಲಿ ಹೊಡೆಯುತ್ತಿವೆ.

ಇನ್ನುಳಿದಂತೆ ತಂದೆ ಮತ್ತು ಮಗಳ ಸುತ್ತ ಸುತ್ತುವ ಈ ಚಿತ್ರ, ಅಭಿಷೇಕ್ ಬಚ್ಚನ್ ವೃತ್ತಿ ಬದುಕಿನ ಅತ್ಯುತ್ತಮ ಚಿತ್ರ ಎನ್ನುವ ಮಾತು ಕೇಳಿ ಬರುತ್ತಿದೆ. ಆದರೂ ದುರಾದೃಷ್ಟ ಅಭಿಷೇಕ್ ಬಚ್ಚನ್ ಬೆನ್ನು ಬಿಡುತ್ತಿಲ್ಲ. ಐ ವಾಂಟ್ ಟು ಟಾಕ್ ಚಿತ್ರ ನೋಡಲು ಪ್ರೇಕ್ಷಕರು ಬರುತ್ತಿಲ್ಲ. ಇನ್ನುಳಿದಂತೆ ಈ ಹಿಂದೆ ಪಿಕು, ವಿಕ್ಕಿ ಡೋನರ್, ಅಕ್ಟೋಬರ್ ಚಿತ್ರಗಳನ್ನು ನಿರ್ದೇಶಿಸಿರುವ ಶೂಜಿತ್ ಸಿರ್ಕಾರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದಲ್ಲಿ ಜಾನಿ ಲಿವರ್, ಅಹಲ್ಯಾ ಬಾಮ್ರೂ, ಬನಿತಾ ಸಂಧು ಮತ್ತು ಪರ್ಲೆ ಮಾನಿ ಮುಂತಾದವರು ನಟಿಸಿದ್ದಾರೆ. ಒಟ್ನಲ್ಲಿ ಸದ್ಯಕ್ಕೆ ಐ ವಾಂಟ್ ಟು ಟಾಕ್ ಚಿತ್ರ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದೆ. ಹಣ ಗಳಿಸುವಲ್ಲಿ ವಿಫಲವಾಗಿದೆ. ಸದ್ಯಕ್ಕೆ ಲೆಕ್ಕಾಚಾರ ನೋಡುತ್ತಿದ್ದರೆ ಚಿತ್ರಮಂದಿರದಿಂದ ಎತ್ತಂಗಡಿಯಾಗುವ ಮುನ್ನ ಈ ಚಿತ್ರ ಐದು ಕೋಟಿಯನ್ನು ಕೂಡ ಗಳಿಸುವುದು ಅನುಮಾನ ಎನ್ನುವ ಮಾತು ಕೇಳಿ ಬರುತ್ತಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X