For Quick Alerts
  ALLOW NOTIFICATIONS  
  For Daily Alerts

  ಭಾರತ-ಪಾಕ್ ಸಮಸ್ಯೆಗೆ ಸಲ್ಮಾನ್ ಹೇಳಿದ ಪರಿಹಾರವಿದು..

  By Suneel
  |

  ಸಲ್ಮಾನ್ ಖಾನ್ ಅಭಿನಯದ ಬಹು ನಿರೀಕ್ಷಿತ ಚಿತ್ರ 'ಟ್ಯೂಬ್ ಲೈಟ್' ಇದೇ ತಿಂಗಳ 23 ಕ್ಕೆ ಬಿಡುಗಡೆ ಆಗುತ್ತಿದೆ. ಈ ಚಿತ್ರದ ಪ್ರಮೋಶನ್ ಚಟುವಟಿಕೆಯಲ್ಲಿ ತೊಡಗಿರುವ ಸಲ್ಮಾನ್ ಖಾನ್ ಭಾರತ-ಪಾಕ್ ಯುದ್ಧದ ಬಗ್ಗೆ ಮಾತನಾಡಿ ಹೊಸ ವಿವಾದ ಸೃಷ್ಟಿಯಾಗಿದೆ.

  ಮಂಗಳವಾರ ಮುಂಬೈನಲ್ಲಿ 'ಟ್ಯೂಬ್ ಲೈಟ್' ಚಿತ್ರದ ಪ್ರಮೋಶನ್ ವೇಳೆ ಸಲ್ಮಾನ್ ಖಾನ್ ಗೆ ಭಾರತ ಮತ್ತು ಪಾಕ್ ಸಂಬಂಧದ ಕುರಿತು ಪ್ರಶ್ನೆಯೊಂದು ಮಾಧ್ಯಮ ಪ್ರತಿನಿಧಿಗಳಿಂದ ತೂರಿಬಂದಿತ್ತು. ಅದೇನಂದ್ರೆ 'ಟ್ಯೂಬ್‌ ಲೈಟ್' ಭಾರತ ಮತ್ತು ಪಾಕ್ ಯುದ್ಧದ ಆಂಗಲ್ ನ ಕಥೆ ಏನಾದರೂ ಹೊಂದಿದೆಯೇ ಎಂಬುದು. ಇದಕ್ಕೆ ಉತ್ತರಿಸಿದ ಸಲ್ಮಾನ್, "ಖಂಡಿತ ಇಲ್ಲ. ಅದನ್ನು ನಾವು ಟಚ್ ಮಾಡಿಲ್ಲ. ಎರಡು ದೇಶಗಳ ನಡುವೆ ಶಾಂತಿ ಕಾಪಾಡಬೇಕಿದೆ. ಯುದ್ಧದಿಂದ ಎರಡು ದೇಶಗಳಲ್ಲಿ ಪ್ರಾಣ ಹಾನಿಯಾಗುತ್ತದೆಯೇ ಹೊರತು ಲಾಭವಿಲ್ಲ. ಅದರ ಬದಲು ಶಾಂತಿ ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು" ಎಂದಿದ್ದಾರೆ.

  "ಎರಡು ದೇಶಗಳಲ್ಲಿ ಮನೆಯೊಳಗೆ ಕುಳಿತು ಯುದ್ಧ ಬೇಕು ಎನ್ನುವ ಸಾಮಾನ್ಯ ಜನರಿಗೆ ಅದರ ಪರಿಣಾಮ ಏನು ಎಂಬುದು ಸರಿಯಾಗಿ ಅರ್ಥವಾಗಿಲ್ಲ. ಯುದ್ಧ ಬೇಕು ಎನ್ನುವವರ ಕೈಗೆ ಗನ್ ಕೊಟ್ಟು ಹೋರಾಟಕ್ಕೆ ಕಳುಹಿಸಬೇಕು. ಆಗ ಮಾತ್ರ ಅವರಿಗೆ ಯುದ್ಧದಿಂದ ಆಗುವ ಸಮಸ್ಯೆ ಅರಿವಾಗುತ್ತದೆ' ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.

  ಸಲ್ಮಾನ್ ಖಾನ್ ಚಿತ್ರ ಪ್ರಮೋಶನ್ ವೇಳೆ ನೀಡಿದ ಈ ಹೇಳಿಕೆಗಳಿಗೆ ಶಿವಸೇನೆ ಆಕ್ಷೇಪಿಸಿ, ಇದು ಎಲ್ಲೆಯನ್ನು ಮೀರಿದ ಮಾತಾಗಿದೆ ಎಂದಿದೆ. ಅಲ್ಲದೇ ಹಲವರು ಸಲ್ಮಾನ್ ತಮ್ಮ ಚಿತ್ರದ ಪ್ರಮೋಶನ್ ದೃಷ್ಟಿಯಿಂದ ಈ ರೀತಿ ಮಾತನಾಡಿದ್ದಾರೆ ಎಂದಿದ್ದಾರೆ.

  ಅಂದಹಾಗೆ ಕಬೀರ್ ಖಾನ್ ಆಕ್ಷನ್ ಕಟ್ ಹೇಳಿರುವ 'ಟ್ಯೂಬ್ ಲೈಟ್' 1962 ರ ಕಾಲಘಟ್ಟದ ಚೀನ-ಭಾರತದ ನಡುವಿನ ಯುದ್ಧ ಕುರಿತ ಚಿತ್ರಕಥೆ ಹೊಂದಿದೆ.

  English summary
  About India and Pakistan war, Salman Khan says "War is not a sensible move. Nobody benefits from a war, and war is not a solution for both country's peace", the 50-year-old actor said at a press conference in Mumbai.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X