ತೆರೆಮೇಲೆ ಬರಲಿದೆ 76 ಮಕ್ಕಳನ್ನು ರಕ್ಷಿಸಿದ ದಕ್ಷ ಮಹಿಳಾ ಪೊಲೀಸ್ ಕಥೆ

ದೆಹಲಿಯ ದಕ್ಷ ಮಹಿಳಾ ಪೊಲೀಸ್ ಅಧಿಕಾರಿ ಸೀಮಾ ಢಾಕ ಅವರ ಜೀವನ ಕಥೆ ತೆರೆಮೇಲೆ ಬರಲಿದೆ. ಸೀಮಾ ಅವರ ಯಶಸ್ಸಿನ ಕಥೆಯನ್ನು ವೆಬ್ ಸಿರೀಸ್ ಮೂಲಕ ಜನರ ಮುಂದೆ ತರಲು ಬಾಲಿವುಡ್ ನಿರ್ಮಾಣ ಸಂಸ್ಥೆಯ ಮುಂದಾಗಿದೆ.

ದೆಹಲಿ ಮೂಲದ ಮಹಿಳಾ ಪೊಲೀಸ್ ಸೀಮಾ ಕೇವಲ 3 ತಿಂಗಳಲ್ಲಿ ಕಾಣೆಯಾಗಿದ್ದ 76 ಮಂದಿ ಮಕ್ಕಳನ್ನು ಪತ್ತೆ ಹಚ್ಚುವ ಮೂಲಕ ಸಾಹಸ ಮಾಡಿದ್ದರು. ಈ ಸಾಹಸ ಗುರುತಿಸಿದ ದೆಹಲಿ ಪೊಲೀಸ್ ಇಲಾಖೆಗೆ ಸೀಮಾ ಅವರಿಗೆ ಬಡ್ತಿ ನೀಡಿ ಗೌರವಿಸಿತ್ತು.

ಸೀಮಾ ಅವರ ಈ ಪತ್ತೆದಾರಿ ಹಿಂದಿನ ರೋಚಕ ಕಥೆಯನ್ನು ಈಗ ಸಿನಿಮಾ ಮಾಡಲು ಹೊರಟಿದೆ ಎಬಿಇ ನಿರ್ಮಾಣ ಸಂಸ್ಥೆ. ಈಗಾಗಲೇ ಚಿತ್ರದ ಹಕ್ಕು ಖರೀದಿಸಿದೆ. ವೆಬ್ ಸಿರೀಸ್ ಮೂಲಕ ಒಟಿಟಿಯಲ್ಲಿ ಈ ಚಿತ್ರ ತೆರೆಗೆ ಬರಲಿದೆ

Absolute Binge Entertainment Making Web series on Delhi cop Seema Dhaka

ತಮ್ಮ ಯಶೋಗಾಥೆ ಸಿನಿಮಾ ರೂಪ ಪಡೆಯುತ್ತಿರುವುದರ ಬಗ್ಗೆ ಮಾತನಾಡಿದ ಸೀಮಾ ಖುಷಿ ಹಂಚಿಕೊಂಡಿದ್ದಾರೆ.

''ಸಾಮಾನ್ಯವಾಗಿ ಮಹಳೆಯರು ಇಂತಹ ಕೇಸ್‌ಗಳಲ್ಲಿ ಗುರಿ ಮುಟ್ಟುವುದು ಅಸಾಧ್ಯ ಎಂಬ ಮಾತಿದೆ. ಆದರೆ, ನಾನು ಅದಕ್ಕೆ ವಿರುದ್ಧವಾದ ಉದಾಹರಣೆ. ನಾನು ಟೀಕೆಗಳಿಗೆ ತಲೆಕೊಡಲಿಲ್ಲ. ನನ್ನ ಕೆಲಸ ಮತ್ತು ಗುರಿ ಮುಟ್ಟುವುದು ಮಾತ್ರ ಉದ್ದೇಶವಾಗಿತ್ತು. ಆ ನಿಟ್ಟಿಯಲ್ಲಿ ರಾತ್ರಿ-ಹಗಲು ಕೆಲಸ ಮಾಡ್ತಿದ್ದೆ. ಕೇಸ್‌ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕ್ತಿದ್ದೆ, ಅಪಹರಣಕಾರರ ಚಲನವಲನ ಹುಡುಕುವುದು ಮಾಡ್ತಿದೆ. ಯಾವುದರ ಬಗ್ಗೆಯೂ ನನಗೆ ಭಯ ಇರಲಿಲ್ಲ. ಅಂತಿಮವಾಗಿ ಮಕ್ಕಳನ್ನು ಪತ್ತೆ ಹಚ್ಚಬೇಕು, ಅವರ ಕುಟುಂಬದ ಜೊತೆ ಸೇರಿಸಬೇಕು ಎನ್ನುವುದಷ್ಟೇ ನನ್ನ ಗುರಿಯಾಗಿತ್ತು'' ಎಂದು ಸೀಮಾ ಹೇಳಿಕೊಂಡಿದ್ದಾರೆ.

ಸೀಮಾ ಅವರ ಪಾತ್ರವನ್ನು ಯಾರು ನಿರ್ವಹಿಸಲಿದ್ದಾರೆ ಎನ್ನುವುದರ ಬಗ್ಗೆ ಸದ್ಯಕ್ಕೆ ಉತ್ತರ ಇಲ್ಲ. ಆದರೆ, ತಾಪ್ಸಿ ಪನ್ನು, ರಾಣಿ ಮುಖರ್ಜಿ ಅಥವಾ ವಿದ್ಯಾ ಬಾಲನ್ ಈ ಪಾತ್ರಕ್ಕೆ ಸೂಕ್ತ ಎನ್ನಲಾಗುತ್ತಿದೆ. ಈ ಮೂವರಲ್ಲಿ ಯಾರು ಆಸಕ್ತಿ ತೋರಬಹುದು ಎಂಬ ಕುತೂಹಲ ಪ್ರೇಕ್ಷಕರನ್ನು ಕಾಡ್ತಿದೆ.

More from Filmibeat

English summary
Absolute Binge Entertainment [ABE] acquires story rights of Delhi cop Seema Dhaka to make a web series.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X