ಅಮಿತಾಬ್ ಬಚ್ಚನ್ ಪ್ರಕಾರ ಬಾಲಿವುಡ್ 'ನಂ. 1' ನಟಿಯಾರು ಗೊತ್ತಾ?

Recommended Video

ಬಾಲಿವುಡ್ ನಂ 1 ನಟಿ ಅಂದ್ರೆ ಅಮಿತಾಬ್ ಬಚ್ಚನ್ ಪ್ರಕಾರ ಯಾರು? | Filmibeat kannada

ಬಾಲಿವುಡ್ ಮೇರು ನಟ ಬಿಗ್ ಬಿ ಅಮಿತಾಬ್ ಬಚ್ಚನ್ ಸದ್ಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇಳಿ ವಯಸ್ಸಿನಲ್ಲಿಯೂ ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುವ ಅಮಿತಾಬ್, ಯುವ ಪ್ರತಿಭೆಗಳ ಶ್ರಮಕ್ಕೆ ಸದಾ ಬೆನ್ನುತಟ್ಟುತ್ತಿರುತ್ತಾರೆ.

ಯುವಕಲಾವಿದರಿಗೆ ಸಾಥ್ ನೀಡುವ ಅಮಿತಾಬ್ ಇತ್ತೀಚಿಗೆ ಬಾಲಿವುಡ್ ನ ಟಾಪ್ ನಟಿ ಯಾರು ಎನ್ನುವುದನ್ನು ರಿವೀಲ್ ಮಾಡಿದ್ದಾರೆ. ಅಮಿತಾಬ್ ಪ್ರಕಾರ ಕಂಗನಾ ರಣಾವತ್ ಬಾಲಿವುಡ್ ನ ಟಾಪ್ ಅಂಡ್ ಬ್ಯೂಟಿಫುಲ್ ನಟಿಯಂತೆ. ಇತ್ತೀಚಿಗೆ 'ಕೌನ್ ಬನೇಗ ಕರೋಡ್ ಪತಿ' ಕಾರ್ಯಕ್ರಮದಲ್ಲಿ ಬಿಗ್ ಬಿ ಈ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.

ಹಾಟ್ ಸೀಟಿನಲ್ಲಿ ಕೂಳಿತಿದ್ದ ಸ್ಪರ್ಧಿಗೆ ಬಾಲಿವುಟ್ ನಟಿಯ ಧ್ವನಿಯನ್ನು ಕೇಳಿಸಲಾಗಿತ್ತು. ಈ ದ್ವನಿ ಯಾವ ನಟಿಯದ್ದು ಎಂದು ಹೇಳಬೇಕಿತ್ತು. ನಾಲ್ಕು ಆಯ್ಕೆಗಳಲ್ಲಿ ಅಮೀಶಾ ಪಟೇಲ್, ಕಂಗನಾ ರಣಾವತ್, ಪ್ರೀತಿ ಜಿಂಟಾ ಮತ್ತು ಕೃತಿ ಸನೂನ್ ಹೆಸರುಗಳು ಇತ್ತು.

According To Amitabh Bachchan, Kangana Ranaut Is The Nmber 1 Actress

ಈ ಸಮಯದಲ್ಲಿ ಅಮಿತಾಬ್ ಕಂಗನಾ ಅಭಿನಯವನ್ನು ಹಾಡಿಹೊಗಳಿದ್ದಾರೆ. "ಕಂಗನಾ ತುಂಬ ಸುಂದರವಾದ ಮತ್ತು ನಂಬರ್ ಒನ್ ನಟಿ. ರಾಷ್ಟ್ರ ಪ್ರಶಸ್ತಿಗಳು ಮತ್ತು ಅನೇಕ ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ" ಎಂದು ಹೇಳಿದ್ದಾರೆ. ಜೊತೆಗೆ ಪ್ರತಿಯೊಬ್ಬ ನಟಿಯರು ವಿಶಿಷ್ಟ ರೀತಿಯ ವಿಶೇಷತೆ ಹೊಂದಿದ್ದಾರೆ ಎಂದು ಬಾಲಿವುಡ್ ನಟಿಮಣಿಯರನ್ನು ಕೊಂಡಾಡಿದ್ದಾರೆ.

ಅಮಿತಾಬ್ ಬಳಿ ಸದ್ಯ ಸಾಕಷ್ಟು ಸಿನಿಮಾಗಳಿವೆ. ಆರರಿಂದ ಏಳು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಅಮಿತಾಬ್ ಎಲ್ಲಾ ಸಿನಿಮಾಗಳಲ್ಲಿಯೂ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಮಿತಾಬ್ ಕೊನೆಯದಾಗಿ ತೆಲುಗಿನ ಸೈರಾ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

More from Filmibeat

English summary
According to Big B Amitabh Bachchan, Kangana Ranaut is the number 1 actress in Bollywood.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X