For Quick Alerts
  ALLOW NOTIFICATIONS  
  For Daily Alerts

  ಫೋಟೋ ವೈರಲ್; ಬೆತ್ತಲಾಗಿ ಕಸದ ಗಾಡಿಯಲ್ಲಿ ಕುಳಿತ ನಟಿ ಪರಿಣೀತಿ ಚೋಪ್ರಾ

  |

  ಸಿನಿಮಾ ಸೆಲೆಬ್ರಿಟಿಗಳು ತರವೇವಾರಿ ರೀತಿಯಲ್ಲಿ ಫೋಟೋಶೂಟ್ ಮಾಡಿಸಿಕೊಳ್ಳುವ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ. ನಾನಾತರಹದ ಫೋಟೋಶೂಟ್ ಗಳು ಅನೇಕ ಬಾರಿ ಟ್ರೋಲಿಗರಿಗೆ ಆಹಾರವಾಗಿದ್ದು ಇದೆ.

  ಹಾಟ್ ಆಗಿ ಕ್ಯಾಮರಾಗೆ ಪೋಸ್ ನೀಡುವ ಅನೇಕ ಸಿನಿತಾರೆಯರ ಫೋಟೋಗಳು ಆಗಾಗ ವೈರಲ್ ಆಗುತ್ತಿರುತ್ತೆ. ಇದೀಗ ಬಾಲಿವುಡ್ ನ ಖ್ಯಾತ ನಟಿ ಪರಿಣೀತಿ ಚೋಪ್ರಾ ವಿಭಿನ್ನವಾಗಿ ಫೋಟೋಶೂಟ್ ಮೂಡುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

  ಜೊಮ್ಯಾಟೊ ಡೆಲಿವರಿ ಬಾಯ್ ಪರ ನಿಂತ ನಟಿ ಪ್ರಣಿತಾ ಮತ್ತು ಪರಿಣೀತಿ

  ಕಸದ ಗಾಡಿಯಲ್ಲಿ ಬೆತ್ತಲಾಗಿ ಕುಳಿತಿರುವ ಪರಿಣೀತಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದಹಾಗೆ ಈ ಫೋಟೋ ಸೆರಿಹಿಡಿದಿದ್ದು, ಬಾಲಿವುಡ್‌ನ ಖ್ಯಾತ ಸೆಲೆಬ್ರಿಟಿ ಫೋಟೋಗ್ರಾಫರ್ ಡಬ್ಬೂ ರತ್ನಾನಿ. ವಿಭಿನ್ನ ಮತ್ತು ವಿನೂತನವಾಗಿ ಫೋಟೋಶೂಟ್ ಮಾಡಿಸುವಲ್ಲಿ ಡಬ್ಬೂ ರತ್ನಾನಿ ಎತ್ತಿದ ಕೈ.

  ವಾರ್ಷಿಕ ಕ್ಯಾಲೆಂಡರ್ ಫೋಟೋಶೂಟ್ ಮೂಲಕ ಡಬ್ಬೂ ರತ್ನಾನಿ ಯಾವಾಗಲು ಗಮನ ಸೆಳೆಯುತ್ತಿರುತ್ತಾರೆ. ಡಬ್ಬೂ ರತ್ನಾನಿ ಸೆರೆಹಿಡಿಯುವ ಫೋಟೋ ಪ್ರತಿಬಾರಿಯೂ ವೈರಲ್ ಆಗುತ್ತೆ. ಇದೀಗ ಪರಿಣೀತಿ ಚೋಪ್ರಾರನ್ನು ಕಸದ ಗಾಡಿಯಲ್ಲಿ ಬೆತ್ತಲಾಗಿ ಕೂರಿಸಿ ಸೆರೆಹಿಡಿದಿರುವ ಫೋಟೋ ಅಭಿಮಾನಿಗಳ ಕಣ್ಣುಕುಕ್ಕುತ್ತಿದೆ.

  ಈ ಫೋಟೋವನ್ನು ಸ್ವತಃ ಡಬ್ಬೂ ರತ್ನಾನಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಈ ಫೋಟೋಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದುಬಂದಿದೆ. ಕಳೆದ ವರ್ಷ ಕೂಡ ಡಬ್ಬೂ ರತ್ನಾನಿ ಅವರ ವಾರ್ಷಿಕ ಕ್ಯಾಲೆಂಡರ್‌ಗಾಗಿ ಆಕರ್ಷಕ ಫೋಟೋಶೂಟ್ ಮಾಡಿಸಿದ್ದರು.

  ದಾವಣಗೆರೆಯಲ್ಲಿ ಯುವರತ್ನ ನೋಡಲು ನೂಕುನುಗ್ಗಲು:ಪೊಲೀಸರಿಂದ ಲಾಠಿ ಚಾರ್ಜ್ | Filmibeat Kannada

  ಅಂದಹಾಗೆ ಪರಿಣೀತಿ ಇತ್ತೀಚಿಗಷ್ಟೆ ಸದ್ಯ ಸೈನಾ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರ ಬಯೋಪಿಕ್ ಇದಾಗಿದ್ದು, ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

  English summary
  Famous Photographer Dabboo Ratnani shares new photoshoot of Parineeti Chopra.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X