ಬ್ರೇಕ್‌ನಿಂದ ವಾಪಸ್ ಬಂದ ಆಮಿರ್ ಖಾನ್, 2024ರ ಕ್ರಿಸ್‌ಮಸ್‌ಗೆ ಹೊಸಚಿತ್ರ ಬಿಡುಗಡೆ!?
ಕಳೆದ 2022 ರಲ್ಲಿ ಬಿಡುಗಡೆಯಾಗಿ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದು ಗಲ್ಲಾಪೆಟ್ಟಿಗೆಯಲ್ಲಿ ಸೋಲು ಕಂಡಿದ್ದ 'ಲಾಲ್ ಸಿಂಗ್ ಚಡ್ಡಾ' ಸಿನಿಮಾ ಬಳಿಕ ನಟ ಆಮಿರ್ ಖಾನ್ ಬ್ರೇಕ್ ತೆಗೆದುಕೊಂಡಿದ್ದರು. ಮುಂದಿನ ಸಿನಿಮಾಗಳನ್ನು ಒಪ್ಪಿಕೊಳ್ಳುವ ಮುನ್ನ ಕೆಲಸ ಕಾಲ ವಿರಾಮ ತೆಗೆದುಕೊಂಡಿದ್ದ ಅವರು ಮತ್ತೆ ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ವಿರಾಮದಿಂದ ಹಿಂತಿರುಗಿರುವ ಆಮಿರ್ ಖಾನ್ ಮತ್ತೆ ಸಿನಿಮಾದಲ್ಲಿ ತೊಡಗಿಸಿಕೊಳ್ಳುವುದಾಗಿ ಮತ್ತು ಅವರ ಮುಂದಿನ ಸಿನಿಮಾ ಕ್ರಿಸ್ಮಸ್ 2024 ಕ್ಕೆ ಬಿಡುಗಡೆಯಾಗಲಿದೆ ಎಂಬ ವರದಿಗಳು ಬರುತ್ತಿವೆ.

ವಿರಾಮದ ನಂತರ ಮತ್ತೆ ಆಮಿರ್ ಖಾನ್ ಸಿನಿಮಾ
ಸ್ವಲ್ಪ ವಿರಾಮದ ನಂತರ, ಆಮಿರ್ ಖಾನ್ ಮತ್ತೆ ಕೆಲಸ ಮಾಡುತ್ತಿದ್ದಾರೆ. ನಟನು ತನ್ನ ಮುಂದಿನ ಪ್ರಾಜೆಕ್ಟ್‌ನ ಕೆಲಸವನ್ನು ಪ್ರಾರಂಭಿಸಿದ್ದಾರೆ ಎಂದು ವರದಿಯಾಗಿದೆ. ನಟನ ಮುಂದಿನ ಸಿನಿಮಾ ಕ್ರಿಸ್ಮಸ್ 2024ಕ್ಕೆ ಬಿಡುಗಡೆಯಾಗಲಿದೆ. ಇನ್ನು ಹೆಸರಿಡದ ಚಲನಚಿತ್ರಕ್ಕೆ ನಟನ ನಿರ್ಮಾಣ ಕಂಪನಿ ಬಂಡವಾಳ ಹೂಡಲಿದೆ.
ಇದರ ಬಗ್ಗೆ ಹೆಚ್ಚಿನ ವಿವರಗಳನ್ನು ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ. "ಆಮಿರ್ ಖಾನ್ ಮುಂದಿನ ಚಿತ್ರ ಬಿಡುಗಡೆಗೆ ಕ್ರಿಸ್‌ಮಸ್ 2024 ಅನ್ನು ಲಾಕ್ ಮಾಡಿದ್ದಾರೆ. ಅಮೀರ್ ಖಾನ್ ಪ್ರೊಡಕ್ಷನ್ಸ್‌ನ ಸಿನಿಮಾ ಸಂಖ್ಯೆ. 16 ರಲ್ಲಿ (ಇನ್ನೂ ಶೀರ್ಷಿಕೆ ಇಡಲಾಗಿಲ್ಲ) ಆಮಿರ್ ಖಾನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದು 20 ಡಿಸೆಂಬರ್ 2024 ರಂದು ಬಿಡುಗಡೆಯಾಗಲಿದೆ. ಚಿತ್ರದ ಪ್ರಿ-ಪ್ರೊಡಕ್ಷನ್ ನಡೆಯುತ್ತಿದೆ .ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ಹಂಚಿಕೊಳ್ಳಲಾಗುವುದು" ಎಂದು ಹೇಳಿದ್ದಾರೆ.

ಆಮಿರ್ ಖಾನ್ 'ಲಾಲ್ ಸಿಂಗ್ ಚಡ್ಡಾ' ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. ಬಿಡುಗಡೆಗೂ ಮು್ನನ ಸಾಕಷ್ಟು ಸದ್ದು ಮಾಡಿದ್ದ ಸಿನಿಮಾ, ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿತು. 'ಲಾಲ್ ಸಿಂಗ್ ಚಡ್ಡಾ' ಸಿನಿಮಾ 180 ಕೋಟಿ ರೂಪಾಯಿ ಬಜೆಟ್ನಲ್ಲಿ ನಿರ್ಮಾಣ ಮಾಡಲಾಗಿತ್ತು. ಆದರೆ ಗಳಿಸಿದ್ದು ಮಾತ್ರ 129 ಕೋಟಿ ರೂಪಾಯಿ.
3 ಈಡಿಯಟ್ಸ್ ಬಳಿಕ ಆಮಿರ್ ಖಾನ್ ಜೊತೆಗೆ ಲಾಲ್ ಸಿಂಗ್ ಚಡ್ಡಾ ಚಿತ್ರದಲ್ಲಿ ಕರೀನಾ ಕಪೂರ್ ಖಾನ್ ಕಾಣಿಸಿಕೊಂಡಿದ್ದರು. ಈ ಸಿನಿಮಾ 1994 ರ ಹಾಲಿವುಡ್ ಕ್ಲಾಸಿಕ್ 'ಫಾರೆಸ್ಟ್ ಗಂಪ್'ನ ಅಧಿಕೃತ ಹಿಂದಿ ರಿಮೇಕ್ ಆಗಿದೆ. ಬಾಕ್ಸ್ ಆಫೀಸ್‌ನಲ್ಲಿ ಗೆಲುವು ದಾಖಲಿಸದಿದ್ದರೂ, ಅನೇಕರು ನಟರ ಅಭಿನಯವನ್ನು ಹೊಗಳಿದ್ದರು. ಇದಾದ ಕೆಲವೇ ದಿನಗಳಲ್ಲಿ ಕಾಜೋಲ್ ಅಭಿನಯದ 'ಸಲಾಮ್ ವೆಂಕಿ' ಚಿತ್ರದಲ್ಲಿ ಆಮಿರ್ ಖಾನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.


Click it and Unblock the Notifications











