For Quick Alerts
  ALLOW NOTIFICATIONS  
  For Daily Alerts

  ಬಾಯ್ ಫ್ರೆಂಡ್ ಜೊತೆ ಆಮೀರ್ ಮಗಳ ರೊಮ್ಯಾಂಟಿಕ್ ಟೈಂ: ಫೋಟೋ ವೈರಲ್

  |

  ಬಾಲಿವುಡ್ ಖ್ಯಾತ ನಟ ಆಮೀರ್ ಖಾನ್ ತನ್ನ ಎರಡನೇ ಪತ್ನಿ ಕಿರಣ್ ರಾವ್ ಗೆ ವಿಚ್ಛೇದನ ನೀಡುವ ಮೂಲಕ ಇತ್ತೀಚಿಗೆ ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು. ಇದೀಗ ಆಮೀರ್ ಖಾನ್ ಮಗಳು ಇರಾ ಖಾನ್ ತನ್ನ ಬಾಯ್ ಫ್ರೆಂಡ್ ಜೊತೆಗಿನ ಫೋಟೋ ಶೇರ್ ಮಾಡುವ ಮೂಲಕ ಸದ್ದು ಮಾಡುತ್ತಿದ್ದಾರೆ.

  ಇರಾ ಖಾನ್ ತನ್ನ ಬಾಯ್ ಫ್ರೆಂಡ್ ನೂಪುರ್ ಶಿಖಾರೆ ಜೊತೆಗಿನ ರೊಮ್ಯಾಂಟಿಕ್ ಸಮಯದ ಫೋಟೋವನ್ನು ಶೇರ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ನೂಪುರ್ ಜೊತೆ ಆಪ್ತವಾಗಿರುವ ಇರಾ ತನ್ನ ಕೈಯಿಂದ ನೂಪುರ್ ಕತ್ತನ್ನು ಒತ್ತಿ ಹಿಡಿದಿರುವ ಫೋಟೋ ಸೇರಿದಂತೆ ಇಬ್ಬರು ನಗುತ್ತಾ, ಸಂತೋಷವಾಗಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

  ಇಬ್ಬರ ಫೋಟೋಗೆ ನೆಟ್ಟಿಗರಿಂದ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. 'ಇಬ್ಬರು ವಿಶೇಷ ಕಪಲ್', 'ಅದ್ಭುತವಾದ ಫೋಟೋ' ಎಂದು ಕಾಮೆಂಟ್ ಮಾಡುತ್ತಿದ್ದಾರೆ.

  ಆಮೀರ್ ಖಾನ್ ಪುತ್ರಿ ಇರಾ ಖಾನ್ ಫೆಬ್ರವರಿ 14 ಪ್ರೇಮಿಗಳ ದಿನಾಚರಣೆ ಸಮಯದಲ್ಲಿ ತನ್ನ ಪ್ರೀತಿ ವಿಚಾರ ಬಹಿರಂಗ ಪಡಿಸುವ ಮೂಲಕ ಅಚ್ಚರಿ ಮೂಡಿಸಿದ್ದರು. ತನ್ನ ಫಿಟ್ನೆಸ್ ತರಬೇತುದಾರ ನೂಪುರ್ ಶಿಖಾರೆ ಜೊತೆಗಿನ ಫೋಟೋ ಶೇರ್ ಮಾಡಿ ಪ್ರೀತಿ ವಿಚಾರ ಹಂಚಿಕೊಂಡಿದ್ದರು.

  Darshan ವಿಚಾರದಲ್ಲಿ ಸುಳ್ಳು ಹೇಳಿದ್ರ ಹೋಟೆಲ್ ಮಾಲೀಕ ಸಂದೇಶ್ | Darshan Hotel Controversy |Filmibeat Kannada

  "ನಿನ್ನಜೊತೆಗೆ, ನಿನಗಾಗಿ ಜೊತೆಯಾಗಿರುವ ಪ್ರತಿಜ್ಞೆ ಮಾಡುವುದಕ್ಕೆ ಬಹಳ ಹೆಮ್ಮೆ ಆಗುತ್ತಿದೆ" ಎಂದು ಬರೆದುಕೊಂಡು, ಜೊತೆಗೆ ನನ್ನ ಕನಸಿನ ಹುಡುಗ, ನನ್ನ ವ್ಯಾಲೆಂಟೈನ್ ಹ್ಯಾಷ್ ಟ್ಯಾಗ್ ಅನ್ನು ಸಹ ಬಳಸಿದ್ದರು. ಸದಾ ಬಾಯ್ ಫ್ರೆಂಡ್ ಜೊತೆ ಕಾಣಿಸಿಕೊಳ್ಳುವ ಇರಾ ರಂಗಭೂಮಿಯಲ್ಲಿ ಸಕ್ರೀಯರಾಗಿದ್ದಾರೆ. ನಿರ್ದೇಶಕಿಯಾಗುವ ಕನಸು ಕಂಡಿರುವ ಇರಾ ಸದ್ಯದಲ್ಲೇ ಬಾಲಿವುಡ್ ಗೆ ಎಂಟ್ರಿ ಕೊಡುವ ಸಾಧ್ಯತೆ ಇದೆ.

  English summary
  Bollywood Actor Aamir Khan daughter ira khan shares romantic photo with her boyfriend.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X