'ಮಹಾರಾಜ'ನಾಗಿ ಬಾಲಿವುಡ್ ಗೆ ಎಂಟ್ರಿ ಕೊಡಲು ಸಜ್ಜಾದ ಆಮೀರ್ ಖಾನ್ ಪುತ್ರ

ಬಾಲಿವುಡ್ ನ ಖ್ಯಾತ ನಟ ಆಮೀರ್ ಖಾನ್ ಪುತ್ರ ಜುನೈದ್ ಖಾನ್ ಬಾಲಿವುಡ್ ಗೆ ಎಂಟ್ರಿಗೆ ಸಜ್ಜಾಗಿದ್ದಾರೆ. ಈಗಾಗಲೇ ಎಲ್ಲಾ ತಯಾರಿಗಳನ್ನು ಮಾಡಿಕೊಂಡಿರುವ ಜುನೈದ್ ಖಾನ್ 2021ರಲ್ಲಿ ಮೊದಲ ಸಿನಿಮಾಗೆ ಬಣ್ಣಹಚ್ಚುವುದು ಖಚಿತವಾಗಿದೆ.

ಜುನೈದ್ ಖಾನ್ ಸಿನಿಮಾ ಲೋಕಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಎನ್ನುವ ಸುದ್ದಿ ಕೇಳುತ್ತಿದ್ದಂತೆ, ಜುನೈದ್ ಸಿನಿಮಾದ ಬಗ್ಗೆ ಸಾಕಷ್ಟು ಚರ್ಚೆ ಪ್ರಾರಂಭವಾಗಿದೆ. ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಜುನೈದ್ ಖಾನ್ ಮೊದಲ ಸಿನಿಮಾಗೆ ಟೈಟಲ್ ಫಿಕ್ಸ್ ಆಗಿದೆ ಎಂದು ಹೇಳಲಾಗುತ್ತಿದೆ.

ಹೌದು, ಆಮೀರ್ ಖಾನ್ ಪುತ್ರನ ಮೊದಲ ಸಿನಿಮಾಗೆ ಮಹಾರಾಜ ಎಂದು ಹೆಸರಿಡಲಾಗಿದೆಯಂತೆ. ಚಿತ್ರಕ್ಕೆ ರಾಣಿ ಮುಖರ್ಜಿ ನಟನೆಯ ಹಿಚ್ಕಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಸಿದ್ಧಾರ್ಥ್ ಮಲ್ಲೋತ್ರಾ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾ ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ನಲ್ಲಿ ಸಿನಿಮಾ ಮೂಡಿಬರುತ್ತಿದೆ.

 Actor Aamir Khans son Junaid khans debut film tentatively titled Maharaja

ಅಂದಹಾಗೆ ಜುನೈದ್ ಖಾನ್ ಗೆ ನಾಯಕಿಯಾಗಿ ಬಂಟಿ ಔರ್ ಬಬ್ಲಿ-2 ಸಿನಿಮಾ ಮೂಲಕ ಬಾಲಿವುಡ್ ಗೆ ಕಾಲಿಟ್ಟ ನಟಿ ಶಾರ್ವರಿ ವಾಗ್ ಜುನೈದ್ ಖಾನ್ ಗೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮೊದಲು ಅರ್ಜುನ್ ರೆಡ್ಡಿ ಖ್ಯಾತಿಯ ನಟಿ ಶಾಲಿನಿ ಪಾಂಡೆ, ಜುನೈದ್ ಖಾನ್ ಗೆ ನಾಯಕಿಯಾಗಿ ನಟಸಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಆದರೀಗ ಶಾರ್ವರಿ ಹೆಸರು ಕೇಳಿಬರುತ್ತಿದೆ.

ಇನ್ನು ಚಿತ್ರದ ಪ್ರಮುಖ ಪಾತ್ರದಲ್ಲಿ ಪಾತಾಳ್ ಲೋಕ್ ಖ್ಯಾತಿಯ ನಟ ಜೈದೀಪ್ ಅಹಲ್ವಾತ್ ಸಹ ಕಾಣಿಸಿಕೊಳ್ಳುತ್ತಿದ್ದಾರೆ. ಮಹಾರಾಜ ಸಿನಿಮಾ 1892ರಲ್ಲಿ ನಡೆದ ಮಹಾರಾಜ ಲೈಬೆಲ್ ಕೇಸ್ ಗೆ ಸಂಬಂಧ ಪಟ್ಟಿದ್ದಾಗಿರಲಿದೆಯಂತೆ. ಮುಲ್ಜಿ ಪಾತ್ರದಲ್ಲಿ ಜುನೈದ್ ಖಾನ್ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಮಹಾರಾಜ ಸಿನಿಮಾ 2021 ಫೆಬ್ರವರಿಯಲ್ಲಿ ಸೆಟ್ಟೇರುವ ಸಾಧ್ಯತೆ ಇದೆ.

Recommended Video

Mission Impossible 7 ಸಿಬ್ಬಂದಿ ವಿರುದ್ಧ ಕೂಗಾಡಿದ Tom Cruise | Filmibeat Kannada

More from Filmibeat

English summary
Aamir Khan's son Junaid khan's debut film titled Maharaja. Sharvari Wagh as the female lead in Maharaja.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X