Aamir Khan: ಚೆನ್ನೈಗೆ ಶಿಫ್ಟ್ ಆಗಲಿದ್ದಾರೆ ನಟ ಆಮಿರ್ ಖಾನ್: ಕಾರಣ ಇಲ್ಲಿದೆ

ಸೌತ್ ಸ್ಟಾರ್‌ಗಳಿಗೆ ಬಾಲಿವುಡ್‌ನಲ್ಲಿ ಅವಕಾಶ ಸಿಗುವ ಸಂದರ್ಭಗಳಲ್ಲಿ ಅವರು ಮುಂಬೈಗೆ ಶಿಫ್ಟ್ ಆಗುತ್ತಾರೆ. ಹಲವು ನಟ ನಟಿಯರು ತಮ್ಮ ಮೂಲ ಸ್ಥಳ ಮತ್ತು ಮುಂಬೈ ಎರಡು ಕಡೆ ಮನೆಗಳನ್ನು ಮಾಡಿರುತ್ತಾರೆ. ಕೆಲವರು ಖಾಯಂ ಆಗಿ ಒಂದು ಹೋಟೆಲ್‌ನಲ್ಲಿ ಇರುತ್ತಾರೆ. ಆದರೆ, ಮುಂಬೈ ನಿವಾಸಿಯಾಗಿರುವ ಬಾಲಿವುಡ್ ನಟ ಆಮಿರ್ ಖಾನ್, ಚೆನ್ನೈಗೆ ಶಿಫ್ಟ್ ಆಗಲು ಯೋಜಿಸಿದ್ದಾರೆ.

ನಟ ಆಮಿರ್ ಖಾನ್ ಮುಂದಿನ ಎರಡು ತಿಂಗಳ ಕಾಲ ತಮಿಳಿನಾಡಿನ ಚೆನ್ನೈನಲ್ಲಿ ಇರಲಿದ್ದಾರೆ. ಇದಕ್ಕೆ ಕಾರಣ ಕೂಡ ಇದೆ. ಇದು ವೃತ್ತಿಗೆ ಸಂಬಂಧಿಸಿದಕ್ಕಿಂತ ಹೆಚ್ಚಾಗಿ ವೈಯಕ್ತಿಕವಾಗಿದೆ. ನಿಜ ಆಮಿತ್ ಖಾನ್ ತಮ್ಮ ವೈಯಕ್ತಿಕ ಕಾರಣದಿಂದ ಮುಂಬೈ ನಗರದಿಂದ ಚೆನ್ನೈಗೆ ಶಿಫ್ಟ್ ಆಗಲಿದ್ದಾರೆ.

Actor Aamir Khan to shift Chennai, here is the reason

ತಾಯಿಗಾಗಿ ಚೆನ್ನೈಗೆ ಶಿಫ್ಟ್ ಆಗಲಿರುವ ಆಮಿರ್ ಖಾನ್

ಆಮಿರ್ ಖಾನ್ ಮುಂದಿನ ಎರಡು ತಿಂಗಳು ಚೆನ್ನೈನಲ್ಲಿ ಕಳೆಯಲು ಇರುವ ಕಾರಣ ಅವರ ತಾಯಿ ಜೀನತ್ ಹುಸೇನ್. ಅನಾರೋಗ್ಯದಿಂದ ಬಳಲುತ್ತಿರುವ ಅವರ ಕಾರಣದಿಂದಲೇ ಚೆನ್ನೈಗೆ ಸ್ಥಳಾಂತರವಾಗಲಿದ್ದಾರೆ ಈ ಬಗ್ಗೆ ಇಂಡಿಯಾ ಟುಡೇ.ಇನ್‌ ವರದಿ ಮಾಡಿದೆ. ಆಮಿರ್ ಖಾನ್ ಕುಟುಂಬಕ್ಕೆ ಹೆಚ್ಚು ಆಪ್ತರಾಗಿರುವ ಮೂಲಗಳು ಈ ಬಗ್ಗೆ ತಿಳಿಸಿದ್ದಾರೆ.

ನಟ ಆಮಿರ್ ಖಾನ್ ತಮ್ಮ ಕುಟುಂಬದೊಂದಿಗೆ, ವಿಶೇಷವಾಗಿ ಅವರ ತಾಯಿ ಜೀನತ್ ಹುಸೇನ್ ಅವರ ಜೊತೆಗೆ ತುಂಬಾ ಆತ್ಮೀಯ ಸಂಬಂಧವಿದೆ. ಇದೇ ಕಾರಣಕ್ಕೆ ಅವರು ತಮ್ಮ ನೆಲೆಯನ್ನು ಚೆನ್ನೈಗೆ ಬದಲಾಯಿಸಲು ನಿರ್ಧರಿಸಿದ್ದಾರೆ. ಆಮಿರ್ ಖಾನ್ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದು, ಪ್ರಸ್ತುತ ಚೆನ್ನೈನಲ್ಲಿರುವ ಖಾಸಗಿ ಆಸ್ಪತ್ರೆಯ ವೈದ್ಯಕೀಯ ಆರೈಕೆಯಲ್ಲಿದ್ದಾರೆ.

Actor Aamir Khan to shift Chennai, here is the reason

ಇಂತಹ ಗಂಭೀರ ಪರಿಸ್ಥಿತಿಯಲ್ಲಿ ನಟ ಆಮಿರ್ ಖಾನ್ ತನ್ನ ತಾಯಿಯ ಜೊತೆಯಲ್ಲಿ ಇರಲು ಬಯಸಿದ್ದಾರೆ ಮೂಲಗಳು ಇಂಡಿಯಾ ಟುಡೇಗೆ ತಿಳಿಸಿವೆ. ಅಮೀರ್ ತನ್ನ ತಾಯಿಯ ಚಿಕಿತ್ರೆ ನಡೆಯುತ್ತಿರುವ ಆಸ್ಪತ್ರೆಯ ಸಮೀಪವಿರುವ ಹೋಟೆಲ್‌ನಲ್ಲಿ ಉಳಿದುಕೊಳ್ಳಲು ಯೋಜಿಸಿದ್ದಾರೆ ಎಂದು ಮೂಲಗಳು ಬಹಿರಂಗಪಡಿಸಿವೆ. ಹೀಗೆ ಮಾಡುವುದರಿಂದ ಅವರ ತಾಯಿಯನ್ನು ಹೆಚ್ಚು ನಿಗಾ ವಹಿಸಿ ನೋಡಿಕೊಳ್ಳಲು ಸಾಧ್ಯವಾಗುತ್ತದೆ ಎಂಬುದು ಅವರ ಲೆಕ್ಕಾಚಾರ.

ಇನ್ನು, ಇತ್ತೀಚೆಗೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ನಟ ಆಮಿರ್ ಖಾನ್ ಅವರು ತಾವು ಚಲನಚಿತ್ರಗಳನ್ನು ನಿರ್ಮಿಸುವುದು ಮತ್ತು ನಟನೆ ಮಾಡುವುದನ್ನು ಹೊರತುಪಡಿಸಿ ಈಗ ತಮ್ಮ ಕುಟುಂಬಕ್ಕೆ ಹೆಚ್ಚಿನ ಸಮಯವನ್ನು ಮೀಸಲಿಡಲು ಮತ್ತು ಅವರ ಜೊತೆಗೆ ಸಾಧ್ಯವಾದಷ್ಟು ಸಮಯ ಕಳೆಯಲು ಬಯಸುವುದಾಗಿ ಹೇಳಿಕೊಂಡಿದ್ದಾರೆ.

ಹೊಸ ಸಿನಿಮಾ ಘೋಷಿಸಿದ ನಟ ಆಮಿರ್ ಖಾನ್

'ಲಾಲ್ ಸಿಂಗ್ ಚಡ್ಡಾ' ಚಿತ್ರದ ನಂತರ, ಆಮಿರ್ ಖಾನ್ ಈಗ ತಮ್ಮ ಮುಂದಿನ ಸಿನಿಮಾವನ್ನು ಘೋಷಿಸಿದ್ದಾರೆ. ತಾರೆ ಜಮೀನ್ ಪರ್ ಸಿನಿಮಾದಂತೆಯೇ 'ಸಿತಾರೆ ಜಮೀನ್ ಪರ್' ಎಂಬ ಸಿನಿಮಾ ಘೋಷಿಸಿದ್ದಾರೆ. ಜೊತೆಗೆ ಸಿನಿಮಾ ಬಗ್ಗೆ ನಾನು ಹೆಚ್ಚು ಹೇಳಲು ಸಾಧ್ಯವಿಲ್ಲ ಆದರೆ ಶೀರ್ಷಿಕೆ ಮಾತ್ರ ಸಿತಾರೆ ಜಮೀನ್ ಪರ್ ಎಂದು ಹೇಳಿದ್ದರು.

ತಾರೆ ಜಮೀನ್ ಪರ್ ಚಿತ್ರಕ್ಕಿಂತ 10 ಹೆಜ್ಜೆ ಮುಂದೆ ಹೋಗಿರುವ ನಾವು ಅದೇ ಥೀಮ್‌ನೊಂದಿಗೆ ಈ ಸಿನಿಮಾ ಮಾಡುತ್ತಿದ್ದೇವೆ. 'ತಾರೆ ಜಮೀನ್ ಪರ್' ಒಂದು ಭಾವನಾತ್ಮಕ ಚಿತ್ರವಾಗಿತ್ತು. ಆ ಸಿನಿಮಾ ನಿಮ್ಮನ್ನು ಅಳುವಂತೆ ಮಾಡಿತ್ತು. ಈ ಚಿತ್ರ ನಿಮ್ಮನ್ನು ನಗಿಸುತ್ತದೆ ಮತ್ತು ಮನರಂಜನೆ ನೀಡುತ್ತದೆ ಎಂದಿದ್ದಾರೆ. ಜೊತೆಗೆ ಈ ಚಿತ್ರವನ್ನೂ ಆಮಿರ್ ಖಾನ್ ನಿರ್ಮಿಸಲಿದ್ದಾರೆ.

More from Filmibeat

English summary
Actor Aamir Khan to shift Chennai.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X