ಮೊದಲ ಬಾರಿ ವೆಡ್ಡಿಂಗ್ ರಿಂಗ್ ಇಲ್ಲದೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಅಭಿಷೇಕ್ ಬಚ್ಚನ್!: ಅಭಿಮಾನಿಗಳ ಆತಂಕ

ಬಾಲಿವುಡ್‌ನ ಪ್ರಮುಖ ಜೋಡಿಗಳಲ್ಲಿ ನಟ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ಕೂಡ ಒಂದು. ಕಳೆದ 16 ವರ್ಷಗಳಿಂದ ಮುದ್ದಾಗಿ ಸಂಸಾರ ಮಾಡುತ್ತಿರುವ ಈ ಜೋಡಿಗೆ ಆರಾಧ್ಯ ಬಚ್ಚನ್ ಎಂಬ ಕ್ಯೂಟ್ ಆದ ಹೆಣ್ಣು ಮಗುವಿದೆ. ಮದುವೆಯ ಬಳಿಕವೂ ಇಬ್ಬರು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಇನ್ನು, ಇಬ್ಬರ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ಚರ್ಚೆಯಾಗುವುದಿಲ್ಲ. ತಮ್ಮ ತಮ್ಮ ವೈಯಕ್ತಿಕ ಜೀವನವನ್ನು ಸಾರ್ವಜನಿಕರಿಂದ ಹೆಚ್ಚು ಅಂತರದಲ್ಲಿ ಇಡುವ ಈ ಜೋಡಿ, ಈಗ ಮತ್ತೆ ಸುದ್ದಿಯಲ್ಲಿದೆ. ಅದು ಅವರ ಅಭಿಮಾನಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. ಒಬ್ಬರ ನಡುವೆ ಎಲ್ಲವೂ ಸರಿಯಿಲ್ಲವೇ ಎಂಬ ಅನುಮಾನ ಆರಂಭವಾಗಿದೆ.

Actor Abhishek Bachchan makes public appearance without his wedding ring, pictures went viral

ಅಭಿಷೇಕ್ ಬಚ್ಚನ್ ಹೊಸ ಫೊಟೋಗಳು ವೈರಲ್

ಇತ್ತೀಚೆಗೆ ನಟ ಅಭಿಷೇಕ್ ಬಚ್ಚನ್ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕಾರ್ಯಕ್ರಮದ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಹಲವು ಅನುಮಾನ ಮತ್ತು ವದಂತಿಗಳಿಗೆ ಕಾರಣವಾಗಿದೆ. ಏಕೆಂದರೆ ನಟ ಅಭಿಷೇಕ್ ಬಚ್ಚನ್ ಮದುವೆಯಾದ ಬಳಿಕ ಮೊದಲ ಬಾರಿಗೆ ತಮ್ಮ ವೆಡ್ಡಿಂಗ್ ರಿಂಗ್ (ಮದುವೆಯ ಉಂಗುರ) ಇಲ್ಲದೆ ಕಾಣಿಸಿಕೊಂಡಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಅಭಿಷೇಕ್ ಬಚ್ಚನ್ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ಅವರ ಕೈಯಲ್ಲಿ ಮದುವೆಯ ಉಂಗುರ ಇಲ್ಲದಿರುವುದನ್ನು ನೆಟ್ಟಿಗರು ಗಮನಿಸಿದ್ದಾರೆ. ರೆಡ್ಡಿಟ್ ಬಳಕೆದಾರರು ಕೂಡ ಈ ಚಿತ್ರಗಳಲ್ಲಿ ಇರುವ ಲೋಪವನ್ನು ಹುಡುಕಿ ಶೇರ್ ಮಾಡುತ್ತಿದ್ದಾರೆ. ಚಿತ್ರಗಳು ಅಂತರ್ಜಾಲದಲ್ಲಿ ವೈರಲ್ ಆಗಿವೆ.

ರೆಡ್ಡಿಟ್ ಬಳಕೆದಾರರು , "ಅಭಿಷೇಕ್ ಬಚ್ಚನ್ ಅವರು ತಮ್ಮ ಇತ್ತೀಚಿನ ಕಾರ್ಯಕ್ರಮದಲ್ಲಿ ತಮ್ಮ ಮದುವೆಯ ಉಂಗುರವನ್ನು ಧರಿಸಿಲ್ಲ, ಇಲ್ಲಿಯವರೆಗೆ ಅವರು ಯಾವಾಗಲೂ ಅದನ್ನು ತೆಗೆದು ಇಟ್ಟಿರಲಿಲ್ಲ" ಎಂದು ಬರೆದಿದ್ದಾರೆ. ಈ ಚಿತ್ರಗಳು ಅಭಿಮಾನಿಗಳಲ್ಲಿ ಊಹಾಪೋಹಕ್ಕೆ ಕಾರಣವಾಗಿವೆ.

Actor Abhishek Bachchan makes public appearance without his wedding ring, pictures went viral

ಅಭಿಷೇಕ್ ಬಚ್ಚನ್ ಇನ್‌ಸ್ಟಾಗ್ರಾಮ್ ಫೋಟೋಗಳಿಗೂ ಹಲವು ಕಾಮೆಂಟ್‌ಗಳು ಬಂದಿದ್ದು, "ನಿಮ್ಮ ಹೆಂಡತಿಯಿಂದ ವಿಚ್ಛೇದನ ಪಡೆದಿರಾ ನೀವು?" ಎಂದು ಪ್ರಶ್ನಿಸಿದ್ದಾರೆ. ಮತ್ತೆ ಕೆಲವರು ನೀವೊಬ್ಬ ಪ್ಲಾಪ್ ಹೀರೋ ನಿಮ್ಮನ್ನು ಐಶ್ವರ್ಯಾ ಬಿಟ್ಟು ಬಿಡುವುದು ಒಳ್ಳೆಯದು ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಅಭಿಷೇಕ್ ಬಚ್ಚನ್ ಮತ್ತು ಐರ್ಶರ್ಯಾ ರೈ ನಡುವೆ ಈ ಹಿಂದೆ ಯಾವುದೇ ಅಸಮಾಧಾನ ಇರುವುದು ಹೊರಬಂದಿಲ್ಲ. ಆದರೆ, ಕೆಲವು ಬಾರಿ ಐಶ್ವರ್ಯಾ ಮತ್ತು ಅವರ ಅತ್ತೆ, ನಟಿ ಜಯಾ ಬಚ್ಚನ್ ನಡುವೆ ಮನಸ್ತಾಪ ಇದೆ ಎಂಬ ವದಂತಿಗಳು ಆಗ್ಗಾಗೆ ಕೇಳಿ ಬರುತ್ತವೆ. ಆದರೂ ಕೂಡ ಈ ಹದಿನಾರು ವರ್ಷಗಳ ಸಂಸಾರದಲ್ಲಿ ಎಲ್ಲಿಯೂ ತಮ್ಮ ನಡುವಿನ ಅಪಸ್ವರವನ್ನು ಬಚ್ಚನ್ ಕುಟುಂಬ ಹೊರ ಹಾಕಿಲ್ಲ.

ಅಭಿಷೇಕ್ ಬಚ್ಚನ್ ಮುಂದಿನ ಕೆಲಸಗಳು

ನಟ ಅಭಿಷೇಕ್ ಬಚ್ಚನ್ ಕೊನೆಯ ಬಾರಿಗೆ 'ಘೂಮರ್' ಎಂಬ ಸ್ಪೋರ್ಟ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಆರ್.ಬಾಲ್ಕಿ ನಿರ್ದೇಶಿಸಿದ ಈ ಚಿತ್ರದಲ್ಲಿ ಸಯಾಮಿ ಖೇರ್ ಅವರ ಜೊತೆ ನಟಿಸಿದ್ದರು. ಘೂಮರ್ ಚಿತ್ರದಲ್ಲಿ ಅವರು ಕ್ರಿಕೆಟ್ ಕೋಚ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ, ಹೌಸ್‌ಫುಲ್ ಫ್ರಾಂಚೈಸಿಯ ಐದನೇ ಕಂತು ಅಂದರೆ 'ಹೌಸ್‌ಫುಲ್ 5' ಸಿನಿಮಾಗಾಗಿ ಅಭಿಷೇಕ್ ಬಚ್ಚನ್ ಸಾಜಿದ್ ನಾಡಿಯಾಡ್‌ವಾಲಾ ಅವರ ಜೊತೆಗೆ ಕೆಲಸ ಮಾಡಲಿದ್ದಾರೆ. ಚಿತ್ರದಲ್ಲಿ ಅಕ್ಷಯ್ ಕುಮಾರ್, ಜಾನ್ ಅಬ್ರಹಾಂ ಮತ್ತು ಬಾಬಿ ಡಿಯೋಲ್ ಕೂಡ ನಟಿಸಿದ್ದಾರೆ.

More from Filmibeat

English summary
Abhishek Bachchan makes public appearance without his wedding ring.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X