ಸಿನಿಮಾ ಆಗಲಿದೆ 'ಗಲ್ವಾನ್ ಕಣಿವೆ' ಸಂಘರ್ಷ: ಕ್ಲೈಮ್ಯಾಕ್ಸ್ ಪಕ್ಕಾ ಇದೆ ಆಗಿರುತ್ತೆ ಎನ್ನುತ್ತಿದ್ದಾರೆ ನೆಟ್ಟಿಗರು
ನೈಜ ಘಟನೆ ಆಧಾರಿತ ಸಿನಿಮಾಗಳು ಈಗಾಗಲೆ ಸಾಕಷ್ಟು ಬಂದಿವೆ. ಅದರಲ್ಲೂ ಯುದ್ಧದ ಬಗ್ಗೆ ಅನೇಕ ಸಿನಿಮಾಗಳು ಬಂದಿದ್ದು, ಸಿನಿಪ್ರಿಯರ ಮೆಚ್ಚುಗೆ ಸಹ ಗಳಿಸಿವೆ. ಇತ್ತೀಚಿಗೆ ಬಂದ ಉರಿ, ಸರ್ಜಿಕಲ್ ಸ್ಟ್ರೈಕ್ ಸಿನಿಮಾಗಳು ಜನರ ಮೆಚ್ಚುಗೆ ಗಳಿಸಿ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿವೆ. ಇದೀಗ ಮತ್ತೊಂದು ನೈಜ ಘಟನೆ ಆಧಾರಿತ ಸಿನಿಮಾ ತೆರೆಮೇಲೆ ಬರಲು ಸಿದ್ಧವಾಗಿದೆ.
Recommended Video
ಜೂನ್ 15ರಂದು ಭಾರತ ಮತ್ತು ಚೀನಾ ಗಡಿ ಗಲ್ವಾನ್ ವ್ಯಾಲಿಯಲ್ಲಿ ನಡೆದ ಸಂಘರ್ಷ ಸಿನಿಮಾವಾಗಿ ಬರುತ್ತಿದೆ. ಈ ಚಿತ್ರಕ್ಕೆ ಬಾಲಿವುಡ್ ನ ಖ್ಯಾತ ನಟ ಅಜಯ್ ದೇವಗನ್ ಮುಂದಾಳತ್ವ ವಹಿಸಿದ್ದಾರೆ. ಈಗಾಗಲೆ ಸಿನಿಮಾ ಮಾಡುವುದಾಗಿ ಅಧಿಕೃತ ಘೋಷಣೆ ಮಾಡಿದ್ದಾರೆ. ಆದರೆ ಕಲಾವಿದರು ಮತ್ತು ಚಿತ್ರದ ಟೈಟಲ್ ಇನ್ನೂ ಫೈನಲ್ ಆಗಿಲ್ಲ. ಮುಂದೆ ಓದಿ..

ಗಲ್ವಾನ್ ಕಣಿವೆ ಸಂಘರ್ಷ
ಗಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಯಿಂದ ಭಾರತದ 20 ಸೈನಿಕರು ಹುತಾತ್ಮರಾಗಿದ್ದರು. ಇದನ್ನೆ ಇಟ್ಟುಕೊಂಡು ಸಿನಿಮಾ ಮಾಡಲಾಗುತ್ತಿದೆ. 20 ಯೋಧರು, ಸಂಘರ್ಷ ಮತ್ತು ಜೀವ ಹಾನಿಗೆ ಸೇಡು ತೀರಿಸಿಕೊಳ್ಳುವ ಬಗ್ಗೆ ಸಿನಿಮಾದಲ್ಲಿ ಇರಲಿದೆ ಎಂದು ಹೇಳಾಗುತ್ತಿದೆ.

ಅಜಯ್ ದೇವಗನ್ ಮುಂದಾಳತ್ವ
ಅಜಯ್ ದೇವಗನ್ ನಿರ್ಮಾಣದಲ್ಲಿ ಸಿನಿಮಾ ಮೂಡಿ ಬರುತ್ತಿದೆ. ಆದರೆ ಅಜಯ್ ನಟಿಸುತ್ತಾರಾ ಎನ್ನುವ ಬಗ್ಗೆ ಇನ್ನೂ ಫೈನಲ್ ಆಗಿಲ್ಲ. ಹೊಸಬರಿಗೆ ಅವಕಾಶ ನೀಡಲಿ ಎನ್ನುವ ಮಾತು ಕೇಳಿಬರುತ್ತಿದೆ. ಸಿನಿಮಾ ಅನೌನ್ಸ್ ಮಾಡುತ್ತಿದ್ದಂತೆ ನೆಟ್ಟಿಗರು ಚಿತ್ರದ ಕ್ಲೈಮ್ಯಾಕ್ಸ್ ಮಾಡಿ ಚರ್ಚೆ ಮಾಡುತ್ತಿದ್ದಾರೆ.

ಕ್ಲೈಮ್ಯಾಕ್ಸ್ ಪಕ್ಕಾ ಇದೇ ಆಗಿರುತ್ತೆ
ಗಲ್ವಾನ್ ಸಂಘರ್ಷದಲ್ಲಿ ಭಾರತ 20 ಸೈಕರನ್ನು ಕಳೆದುಕೊಂಡಿದೆ. ಇದೆ ಸೇಡಿನಿಂದ ಭಾರತ 59 ಚಿನ ಆಪ್ ಗಳನ್ನು ಬ್ಯಾನ್ ಮಾಡಿದೆ. ಈ ಸಿನಿಮಾದಲ್ಲಿ ಕ್ಲೈಮ್ಯಾಕ್ಸ್ ಖಂಡಿತವಾಗಿ ಚೀನಾ ಆಪ್ ಬ್ಯಾನ್ ಮಾಡಿರುವ ಬಗ್ಗೆ ಇರುತ್ತೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಸಾಕಷ್ಟು ಮಂದಿ ಕ್ಲೈಮ್ಯಾಕ್ಸ್ ಬಗ್ಗೆ ಚರ್ಚೆನಡೆಸುತ್ತಿದ್ದಾರೆ.

ಅಕ್ಷಯ್ ಅಭಿಮಾನಿಗಳ ಬೇಸರ
ಅಜಯ್ ದೇವಗನ್ ಸಿನಿಮಾ ಘೋಷಿಸುತ್ತಿದ್ದಂತೆ ಅಕ್ಷಯ್ ಕುಮಾರ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಸಾಕಷ್ಟು ಟ್ರೋಲ್ ಗಳು ಹರಿದಾಡುತ್ತಿವೆ. ಅಕ್ಷಯ್ ಕುಮಾರ್ ಸಾಕಷ್ಟು ದೇಶಭಕ್ತಿ ಸಿನಿಮಾಗಳನ್ನು ನೀಡಿದ್ದಾರೆ. ಈ ಸಿನಿಮಾ ಕೂಡ ಅಕ್ಷಯ್ ಕುಮಾರ್ ಮಾಡಿದ್ದರೆ ಚೆನ್ನಾಗಿರುತ್ತಿತ್ತು ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications