ಹೆಸರು ಬದಲಾಯಿಸಿಕೊಂಡ ಬಾಲಿವುಡ್ ನಟ ಅಜಯ್ ದೇವಗನ್: ಕಾರಣವೆನು?

ಅನೇಕ ಸೆಲೆಬ್ರಿಟಿಗಳು ತಮ್ಮ ಮೂಲ ಹೆಸರನ್ನು ಬದಲಾಯಿಸಿಕೊಂಡು ಬೇರೆ ಹೆಸರಿನ ಮೂಲಕ ಖ್ಯಾತಿ ಗಳಿಸಿದ್ದಾರೆ. ಲಕ್ ಬದಲಾಗುತ್ತೆ ಎನ್ನುವ ಕಾರಣಕ್ಕೆ ತಮ್ಮ ಹೆಸರನ್ನು ಬದಾಲಿಯಿಸಿಕೊಂಡು ಪ್ರಸಿದ್ಧ ಪಡೆದ ಬಗ್ಗೆ ಅನೇಕ ಉದಾಹರಣೆಗಳಿವೆ. ಆದರೀಗ ಬಾಲಿವುಡ್ ನ ಸ್ಟಾರ್ ಅಜಯ್ ದೇವಗನ್ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ.

Recommended Video

Ajay Devgan ದಿಡೀರ್ ಅಂತ ಹೆಸರು ಚೇಂಜ್ ಮಾಡಿಕೊಳ್ಳುವುದಕ್ಕೆ ಕಾರಣ ಏನು? | Filmibeat Kannada

ಅಜಯ್ ದೇವಗನ್ ಹೆಸರಿನಲ್ಲೇ ಸ್ಟಾರ್ ಆಗಿ ಮರೆಯುತ್ತಿರುವ ನಟ ಈಗ ದಿಢೀರ್ ಅಂತ ಹೆಸರು ಬದಲಾಯಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದೆ. ಈ ಬಗ್ಗೆ ಸ್ವತಃ ಅಜಯ್ ದೇವಗನ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಅಂದಹಾಗೆ ಇನ್ಮುಂದೆ ಅಜಯ್ ದೇವಗನ್ ಎಂದು ಕರೆಯಬಾರದಂತೆ. ಬದಲಿಗೆ ಸುದರ್ಶನ್ ಎಂದು ಕರೆಯಿರಿ ಎಂದಿದ್ದಾರೆ.

ಈ ಬಗ್ಗೆ ವಿಡಿಯೋ ಮೂಲಕ ಮಾತನಾಡಿರುವ ಅಜಯ್, 'ನಾನು ನಿಮಗೆ ಎಷ್ಟು ಬಾರಿ ಹೇಳಬೇಕು. ಯಾರು ಅದು ಅಜಯ್? ನನ್ನ ಹೆಸರು ಸುದರ್ಶನ್' ಎಂದು ಹೇಳಿದ್ದಾರೆ.

Actor Ajay Devgn changes his name Sudharsan

ಅಷ್ಟಕ್ಕೂ ಅಜಯ್ ದಿಢೀರ್ ಅಂತ ಹೆಸರು ಬದಲಾಯಿಸಿಕೊಂಡಿದ್ದೇಕೆ ಅಂತ ಯೋಚಿಸುತ್ತಿದ್ದೀರಾ? ಅಜಯ್ ದೇವಗನ್ ಡಿಸ್ನಿ ಪ್ಲಸ್ ಹಾಟ್ ಸ್ಟಾರ್‌ನ ಒಂದು ಜಾಹೀರಾತಿನಲ್ಲಿ ಬರುವ ಪಾತ್ರವಿದು. ಜಾಹೀರಾತಿನಲ್ಲಿ ಅಜಯ್, ಸುದರ್ಶನ್ ಆಗಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ಹೆಸರು ಮಾತ್ರಲ್ಲದೆ ಅಜಯ್ ತನ್ನ ಲುಕ್‌ಅನ್ನು ಬದಲಾಯಿಸಿಕೊಂಡಿದ್ದಾರೆ. ಉದ್ದ ದಾಡಿ ಬಿಟ್ಟಿರುವ ಗೆಟಪ್‌ನಲ್ಲಿ ಅಜಯ್ ಕಾಣಿಸಿಕೊಂಡಿದ್ದಾರೆ.

ಈ ಜಾಹೀರಾತನ್ನು ವಿಭಿನ್ನವಾಗಿ ಪ್ರಮೋಟ್ ಮಾಡುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಅಂದಹಾಗೆ ಅಜಯ್ ದೇವಗನ್ ಸದ್ಯ ಬಿಗ್ ಬುಲ್ ಸಿನಿಮಾದ ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಅಜಯ್ ನಿರ್ಮಾಣದಲ್ಲಿ ಮೂಡಿಬಂದಿರುವ ಈ ಸಿನಿಮಾದಲ್ಲಿ ಅಭಿಷೇಕ್ ಬಚ್ಚನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಒಟಿಟಿಯಲ್ಲಿ ತೆರೆಗೆ ಬರುತ್ತಿದೆ.

Actor Ajay Devgn changes his name Sudharsan

ಇನ್ನು ಭುಜ್: ದಿ ಪ್ರೈಡ್ ಆಫ್ ಇಂಡಿಯಾ, ಮೈದಾನ್, ಮೇಡೇ ಸಿನಿಮಾಗಳಲ್ಲಿ ಅಜಯ್ ದೇವಗನ್ ಬ್ಯುಸಿಯಾಗಿದ್ದಾರೆ. ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾದಲ್ಲೂ ನಟಿಸಿದ್ದಾರೆ. ಜೊತೆಗೆ ಬಾಲಿವುಡ್‌ನ ಬಹುನಿರೀಕ್ಷೆಯ ಗಂಗೂಬಾಯಿ ಕಾಥಿಯಾವಾಡಿ ಸಿನಿಮಾದಲ್ಲೂ ಬಣ್ಣಹಚ್ಚಿದ್ದಾರೆ.

More from Filmibeat

English summary
Bollywood Actor Ajay Devgn changes his name Sudharsan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X