twitter
    For Quick Alerts
    ALLOW NOTIFICATIONS  
    For Daily Alerts

    ಫೇಸ್‌ಬುಕ್ ಲೈವ್‌ನಲ್ಲಿ ಆಕ್ಷೇಪಾರ್ಹ ಹೇಳಿಕೆ: ಬಾಲಿವುಡ್ ನಟ ಅಜಾಜ್ ಖಾನ್ ಬಂಧನ

    |

    ನಟ ಹಾಗೂ ಮಾಜಿ ಬಿಗ್ ಬಾಸ್ ಸ್ಪರ್ಧಿ ಅಜಾಜ್ ಖಾನ್ ಅವರನ್ನು ಮುಂಬೈ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಫೇಸ್‌ಬುಕ್ ಲೈವ್ ಸೆಷನ್‌ನಲ್ಲಿ ಅವರು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರು ಎಂಬ ಆರೋಪದಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಅಜಾಜ್ ಖಾನ್ ಅವರು ಸಾಮಾಜಿಕ ಜಾಲತಾಣದಲ್ಲಿ ಜನರನ್ನು ಪ್ರಚೋದಿಸುವಂತಹ ಹೇಳಿಕೆ ನೀಡಿದ್ದರು. ಆಕ್ಷೇಪಾರ್ಹ ಹೇಳಿಕೆಗೆ ಸಂಬಂಧಿಸಿದಂತೆ ಖಾನ್ ಅವರಿಗೆ ಖಾರ್ ಪೊಲೀಸ್ ಸ್ಟೇಷನ್‌ನಿಂದ ಸಮನ್ಸ್ ನೀಡಲಾಗಿತ್ತು. ಬಳಿಕ ಅವರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

    ಅಜಾಜ್ ಖಾನ್ ವಿರುದ್ಧ ಖಾರ್ ಪೊಲೀಸ್ ಠಾಣೆಯಲ್ಲಿ ಅಪರಾಧ ದಂಡ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್ಸ್ 153 A, 121, 117, 188, 501, 504, 505 (2) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಮುಂದೆ ಓದಿ...

    ಈ ಹಿಂದೆ ಎರಡು ಬಾರಿ ಅರೆಸ್ಟ್

    ಈ ಹಿಂದೆ ಎರಡು ಬಾರಿ ಅರೆಸ್ಟ್

    ಸಮುದಾಯಗಳ ನಡುವೆ ವೈಷಮ್ಯ ಮೂಡಿಸುವಂತಹ ಆಕ್ಷೇಪಾರ್ಹ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದಕ್ಕಾಗಿ ಖಾನ್ ಅವರನ್ನು ಕಳೆದ ವರ್ಷದ ಜುಲೈನಲ್ಲಿ ಬಂಧಿಸಲಾಗಿತ್ತು. ಅದಕ್ಕೂ ಮುನ್ನ 2018ರ ಅಕ್ಟೋಬರ್‌ನಲ್ಲಿ ನಿಷೇಧಿತ ಡ್ರಗ್ಸ್‌ಗಳನ್ನು ಸೇವಿಸುತ್ತಿರುವ ಆರೋಪದಲ್ಲಿಯೂ ಬಂಧನಕ್ಕೆ ಒಳಗಾಗಿದ್ದರು.

    ಎಲ್ಲದಕ್ಕೂ ಮುಸ್ಲಿಮನೇ ಹೊಣೆಯೇ?

    ಎಲ್ಲದಕ್ಕೂ ಮುಸ್ಲಿಮನೇ ಹೊಣೆಯೇ?

    ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ಲೈವ್ ಬಂದಿದ್ದ ಅಜಾಜ್ ಖಾನ್, 'ಒಂದು ಇರುವೆ ಸತ್ತರೆ ಮುಸ್ಲಿಮನೇ ಹೊಣೆಗಾರ, ಆನೆ ಸತ್ತರೂ ಮುಸ್ಲಿಮನೇ ಹೊಣೆಗಾರ. ದೆಹಲಿಯಲ್ಲಿ ಭೂಕಂಪ ಆದರೆ ಮುಸ್ಲಿಮನೇ ಹೊಣೆ. ಯಾವುದೇ ಘಟನೆಗೂ ಮುಸ್ಲಿಮನೇ ಹೊಣೆಗಾರ. ಆದರೆ ಈ ಸಂಚಿಗೆ ಯಾರು ಹೊಣೆಗಾರರು ಎಂದು ನೀವು ಎಂದಾದರೂ ಯೋಚಿಸಿದ್ದೀರಾ?' ಎಂದು ಅವರು ಕೇಳಿದ್ದರು.

    ಕೆಟ್ಟ ಹೆಸರು ತರುವ ಸಂಚು

    ಕೆಟ್ಟ ಹೆಸರು ತರುವ ಸಂಚು

    ರೈಲ್ವೆ ನಿಲ್ದಾಣದಲ್ಲಿ ಸಾವಿರಾರು ವಲಸಿಗರು ನೆರೆದ ಘಟನೆ ಬಗ್ಗೆ ಫೇಸ್‌ಬುಕ್ ಲೈವ್‌ನಲ್ಲಿ ಮಾತನಾಡಿದ್ದ ಅವರು, ಮುಸ್ಲಿಮರು, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಅವರ ಮಗ ಆದಿತ್ಯ ಠಾಕ್ರೆಗೆ ಕೆಟ್ಟ ಹೆಸರು ತರಲು ಬಿಜೆಪಿ ಮಾಡಿದ ಸಂಚು ಇದು ಎಂದು ಆರೋಪಿಸಿದ್ದರು.

    ಅಧಿಕಾರ ಕಸಿದುಕೊಳ್ಳಲು ಪ್ರಯತ್ನ

    ಅಧಿಕಾರ ಕಸಿದುಕೊಳ್ಳಲು ಪ್ರಯತ್ನ

    ಮಹಾರಾಷ್ಟ್ರದಲ್ಲಿ ಕೋಮು ಭಾವನೆ ಕೆರಳಿರುವ ರಾಜಕೀಯವನ್ನು ಮಾಡುವ ಮೂಲಕ ಬಿಜೆಪಿಯು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಅಧಿಕಾರ ಕಸಿದುಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ದೂರಿದ್ದರು. ಅವರ ಹೇಳಿಕೆ ವಿರುದ್ಧ ದೂರು ನೀಡಲಾಗಿತ್ತು.

    English summary
    Bollywood actor Ajaz Khan was arrested by Mumbai police over objectionable comments in facebook live.
    Saturday, May 30, 2020, 14:27
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X