For Quick Alerts
  ALLOW NOTIFICATIONS  
  For Daily Alerts

  ಡ್ರಗ್ಸ್ ಪ್ರಕರಣದಲ್ಲಿ ಬಂಧನವಾಗಿದ್ದ ಏಜಾಜ್ ಖಾನ್‌ಗೆ ಕೊರೊನಾ

  |

  ಡ್ರಗ್ಸ್ ಪ್ರಕರಣದಲ್ಲಿ ಎನ್‌ಸಿಬಿಯಿಂದ ಬಂಧನವಾಗಿರುವ ಏಜಾಜ್ ಖಾನ್‌ಗೆ ಕೊರೊನಾ ವೈರಸ್ ತಗುಲಿದೆ ಎಂದು ಎಎನ್‌ಐ ವರದಿ ಮಾಡಿದೆ.

  ಏಜಾಜ್ ಖಾನ್‌ಗೆ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆ ಸೋಮವಾರ (ಏಪ್ರಿಲ್ 5) ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅದಕ್ಕೂ ಮುಂಚೆ ವೈದ್ಯಕೀಯ ಪರೀಕ್ಷೆ ಮಾಡಲಾಗಿತ್ತು. ಏಜಾಜ್ ಖಾನ್ ಪ್ರಕರಣ ವಿಚಾರಣೆ ನಡೆಸಿದ್ದ ಮುಂಬೈ ವಿಶೇಷ ನ್ಯಾಯಾಲಯ ಏಪ್ರಿಲ್ 3 ರವರೆಗೂ ಎನ್‌ಸಿಬಿ ಕಸ್ಟಡಿಗೆ ನೀಡಿತ್ತು.

  ಡ್ರಗ್ಸ್ ಪ್ರಕರಣ: ಖಳನಟನ ಬಂಧಿಸಿ ಎಳೆದೊಯ್ದ ಪೊಲೀಸರುಡ್ರಗ್ಸ್ ಪ್ರಕರಣ: ಖಳನಟನ ಬಂಧಿಸಿ ಎಳೆದೊಯ್ದ ಪೊಲೀಸರು

  ಡ್ರಗ್ಸ್ ಕೇಸ್‌ನಲ್ಲಿ ತನಿಖೆ ಮಾಡುತ್ತಿರುವ ಎನ್‌ಸಿಬಿ ಅಧಿಕಾರಿಗಳು ಕಳೆದ ಮಂಗಳವಾರ (ಮಾರ್ಚ್ 30) ರಂದು ಅರೆಸ್ಟ್ ಮಾಡಿದ್ದರು. ರಾಜಸ್ಥಾನದಿಂದ ಆಗಷ್ಟೇ ಮುಂಬೈಗೆ ಬಂದಿಳಿದಿದ್ದ ನಟನನ್ನು ಪೊಲೀಸರು ಬಲವಂತವಾಗಿ ಎಳೆದೊಯ್ದು ಘಟನೆ ನಡೆದಿತ್ತು.

  ಏಜಾಜ್ ಖಾನ್ ಮನೆ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ 4.5 ಗ್ರಾಂ ಆಲ್ಪ್ರೋಜೋಲ್ ಮಾತ್ರೆಗಳು ಸಿಕ್ಕಿವೆ ಎಂದು ವರದಿಯಾಗಿವೆ. ಜೊತೆಗೆ ಏಜಾಜ್ ಖಾನ್ ಬಟಾಟಾ ಗ್ಯಾಂಗ್ ಜೊತೆ ಸಂಪರ್ಕ ಹೊಂದಿದ್ದರು ಎಂಬ ಆರೋಪವೂ ಇದೆ.

  ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಕೋಮುಗಳ ಮಧ್ಯೆ ದ್ವೇಷ ಹುಟ್ಟಿಸುವ ಹೇಳಿಕೆ ನೀಡಿದ ಪ್ರಕರಣದಲ್ಲಿ ಏಜಾಜ್ ಖಾನ್ ಬಂಧನವಾಗಿದ್ದರು.

  Puneeth Rajkumar ಗೆ ಅನ್ಯಾಯ ಮಾಡಿದ ರಾಜ್ಯ ಸರ್ಕಾರ | Filmibeat Kannada

  ಬಾಲಿವುಡ್‌ ಹಾಗೂ ತೆಲುಗಿನ ಹಲವು ಸಿನಿಮಾಗಳಲ್ಲಿ ಏಜಾಜ್ ಖಾನ್ ನಟಿಸಿದ್ದಾರೆ. ಜೊತೆಗೆ ಹಲವು ಧಾರಾವಾಹಿಗಳು ಹಾಗೂ ರಿಯಾಲಿಟಿ ಶೋಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.

  English summary
  Actor Ajaz Khan, who was arrested by NCB in a drug case, has tested positive for COVID19. He is being shifted to a hospital.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X