ಸಂಭಾವನೆ ಹೆಚ್ಚಿಸಿಕೊಂಡ ಅಕ್ಷಯ್: ವಿಜಯ್ ಹಿಂದಿಕ್ಕಿ ಮೊದಲ ಸ್ಥಾನ ಪಡೆಯುತ್ತಾರಾ ಕಿಲಾಡಿ?
ಬಾಲಿವುಡ್ ನ ಖ್ಯಾತ ನಟ ಅಕ್ಷಯ್ ಕುಮಾರ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕಡಿಮೆ ಅವಧಿಯಲ್ಲಿ ಅಧ್ಬುತ ಸಿನಿಮಾಗಳ ಮೂಲಕ ಪ್ರೇಕ್ಷಕರ ಮುಂದೆ ಬರುವ ಅಕ್ಷಯ್ ಈಗ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಕ್ಷಯ್ ಸಂಭಾವನೆ ಹೆಚ್ಚಿಸಿಕೊಂಡಿರುವುದೆಷ್ಟು ಎಂದು ಕೇಳಿದರೆ ನಿಜಕ್ಕು ಅಚ್ಚರಿ ಪಡುತ್ತೀರಿ.
Recommended Video
ಸಾಲು ಸಾಲು ಸಿನಿಮಾಗಳನ್ನು ಇಟ್ಟುಕೊಂಡಿರುವ ಅಕ್ಷಯ್ ತಮಿಳು ನಟ ಧನುಷ್ ಮತ್ತು ಸಾರಾ ಅಲಿಖಾನ್ ಜೊತೆ ಹೊಸ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾಗೆ ಅಕ್ಷಯ್ ಅತೀ ಹೆಚ್ಚು ಸಂಭಾವನೆ ಕೇಳುತ್ತಿದ್ದಾರಂತೆ. ಅಕ್ಷಯ್ ಬಳಿ ಸದ್ಯ ಸೂರ್ಯವಂಶಿ, ಲಕ್ಷ್ಮಿ ಬಾಂಬ್ ಮತ್ತು ಪೃಥ್ವಿರಾಜ್ ಸಿನಿಮಾಗಳಿವೆ. ಸದ್ಯ ಮತ್ತೊಂದು ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿರುವ ಹೆಚ್ಚು ಸಂಭಾವನೆ ಬೇಡಿಕೆ ಇಟ್ಟಿದ್ದಾರೆ.

100 ಕೋಟಿಗೂ ಅಧಿಕ ಸಂಭಾವನೆ
ಮುಂದಿನ ಸಿನಿಮಾಗೆ ಬರೋಬ್ಬರಿ 100 ಕೋಟಿಗೂ ಅಧಿಕ ಸಂಭಾವನೆ ಬೇಡಿಕೆ ಇಟ್ಟಿದ್ದಾರಂತೆ. ಆನಂದ್ ಎಲ್ ರೈ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರ ಇದಾಗಿದ್ದು, ಈ ಸಿನಿಮಾಗೆ ಅಕ್ಷಯ್ 100 ಕೋಟಿಗೂ ಅಧಿಕ ಸಂಭಾವನೆ ಕೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಸಂಭಾವನೆ ಹೆಚ್ಚಿಸಿಕೊಳ್ಳಲು ಕಾರಣ
ಅಕ್ಷಯ್ ಕುಮಾರ್ ದಿಢೀರನೆ ಸಂಭಾವನೆ ಹೆಚ್ಚಿಕೊಳ್ಳಲು ಕಾರಣ ಬ್ಯಾಕ್ ಟು ಬ್ಯಾಕ್ ಬ್ಲಾಕ್ ಬಸ್ಟರ್ ಸಿನಿಮಾಗಳು ನೀಡಿರುವುದು ಮತ್ತು ಬ್ರಾಂಡ್ ಮೌಲ್ಯ ಹೆಚ್ಚಾಗಿರುವುದು. ಅಕ್ಷಯ್ ಅಭಿನಯದ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸುತ್ತಿವೆ. ಒಂದೊಂದು ಸಿನಿಮಾನೂ 200 ಕೋಟಿಗೂ ಅಧಿಕ ಕಲೆಕ್ಷನ್ ಮಾಡುತ್ತಿವೆ. ಸಹಜವಾಗಿ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ.

ಒಂದೆ ವರ್ಷಕ್ಕೆ 700 ಕೋಟಿಗೂ ಅಧಿಕ ಕಲೆಕ್ಷನ್
ಕಳೆದ ವರ್ಷ ಅಕ್ಷಯ್ ಸಿನಿಮಾಗಳಿಂದ ಬರೋಬ್ಬರಿ 700 ಕೋಟಿಗೂ ಅಧಿಕ ಬ್ಯುಸಿನೆಸ್ ಆಗಿದೆ. ಕಳೆದ ವರ್ಷ ರಿಲೀಸ್ ಆದ ಅಕ್ಷಯ್ ಮೊದಲ ಸಿನಿಮಾ 'ಕೇಸರಿ' ಸೂಪರ್ ಹಿಟ್ ಆಗಿದೆ. 'ಕೇಸರಿ' ಬಾಕ್ಸ್ ಆಫೀಸ್ ನಲ್ಲಿ 154.41 ಕೋಟಿ ಬಾಚಿಕೊಂಡಿದೆ. ನಂತರ ಬಂದ 'ಮಿಷನ್ ಮಂಗಲ್' 202.98 ಕೋಟಿ ಕಲೆಕ್ಷನ್ ಮಾಡಿತ್ತು. 'ಹೌಸ್ ಫುಲ್-4' 194.60 ಕೋಟಿ ಕಲೆಕ್ಷನ್ ಮಾಡಿದ್ರೆ, ಇನ್ನು ಡಿಸೆಂಬರ್ ನಲ್ಲಿ ತೆರೆಗೆ ಬಂದ ಗುಡ್ ನ್ಯೂಸ್ 162 ಕೋಟಿ ಬಾಚಿಕೊಂಡಿದೆ. ಅಲ್ಲದೆ ಸಿನಿಮಾ ಇನ್ನು ಉತ್ತಮ ಪ್ರದರ್ಶನ ಕಾಣುತ್ತಿದೆ.

ಇಳಯದಳಪತಿಯನ್ನು ಹಿಂದಿಕ್ಕುತ್ತಾರಾ ಅಕ್ಷಯ್
ಇಳಯದಳಪತಿ ವಿಜಯ್ ಮುಂದಿನ ಸಿನಿಮಾಗೆ 100ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನುವ ಸುದ್ದಿ ಭಾರಿ ವೈರಲ್ ಆಗಿತ್ತು. ಸದ್ಯ ಮಾಸ್ಟರ್ ಸಿನಿಮಾದಲ್ಲಿ ಬ್ಯುಸಿ ಇರುವ ವಿಜಯ್ ಮುಂದಿನ ಹೊಸ ಸಿನಿಮಾಗೆ ಅತೀ ಹೆಚ್ಚು ಸಂಭಾವನೆ ಪಡೆಯುವ ಮೂಲಕ ಭಾರತದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟ ಆಗ್ತಾರೆ ಎಂದು ಹೇಳಲಾಗುತ್ತಿದೆ. ಆದರೀಗ ಅಕ್ಷಯ್ ಅತೀ ಹೆಚ್ಚು ಸಂಭಾವನೆ ಪಡೆದರೆ ಮೊದಲ ಸ್ಥಾನ ಅಕ್ಷಯ್ ಪಾಲಾಗುತ್ತೆ.


Click it and Unblock the Notifications











