ಬಾಲಿವುಡ್ ನಟ ಅಕ್ಷಯ್ ಕುಮಾರ್‌ಗೆ ಕೊರೊನಾ, ಕೇನ್ಸ್‌ ಚಲನಚಿತ್ರೋತ್ಸವಕ್ಕೆ ಗೈರು!

ದೇಶದಲ್ಲಿ ಕೊರೊನಾ ನಾಲ್ಕನೇ ಅಲೆ ಭೀತಿ ಶುರುವಾಗಿದೆ. ಈಗಾಗಲೇ ಹಲವು ರಾಜ್ಯಗಳಲ್ಲಿ ಸೋಂಕಿನ ಆರ್ಭಟ ಮುಂದುವರೆದಿದೆ. ಹೀಗಾಗಿ ಆಯಾ ರಾಜ್ಯದ ಸರ್ಕಾರಗಳು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿವೆ. ಮುಂಬೈನಲ್ಲೂ ಸೋಂಕಿನ ಪ್ರಮಾಣ ಹೆಚ್ಚಿದ್ದು, ಸದ್ಯ ನಟ ಅಕ್ಷಯ್ ಕುಮಾರ್‌ಗೆ ಎರಡನೇ ಬಾರಿ ಕೋವಿಡ್ ದೃಢಪಟ್ಟಿದೆ.

ಬಾಲಿವುಡ್ ನಟ ಅಕ್ಷಯ್ ಕುಮಾರ್‌ಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಈ ಬಗ್ಗೆ ಸ್ವತಃ ಅಕ್ವಯ ಕುಮಾರ್ ಶನಿವಾರ (ಮೇ 14) ಟ್ವೀಟ್ ಮಾಡುವ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಸದ್ಯ ಅಕ್ಷಯ್ ಕುಮಾರ್‌ಗೆ ಕೊರೊನಾ ಸೋಂಕು ಪತ್ತೆಯಾಗಿರುವ ಹಿನ್ನಲೆ ಕೇನ್ಸ್ ಚಲನಚಿತ್ರತೋತ್ಸವ ಭೇಟಿಯನ್ನು ರದ್ದು ಗೊಳಿಸಿದ್ದಾರೆ.

ನಟ ಅಕ್ಷಯ್ ಕುಮಾರ್‌ಗೆ ಎರಡನೇ ಬಾರಿ ಸೋಂಕು ತಗುಲಿದ್ದು, ಹೆಚ್ಚಿನ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಸದ್ಯ ನೆಚ್ಚಿನ ನಟ ಆದಷ್ಟು ಬೇಗ ಸೋಂಕಿನಿಂದ ಗುಣಮುಖವಾಗಲಿ ಎಂದು ಅಭಿಮಾನಿಗಳು ಟ್ವೀಟ್ ಮಾಡಿ ಹಾರೈಸುತ್ತಿದ್ದಾರೆ.

ಕೋವಿಡ್ ಬಗ್ಗೆ ಅಕ್ಷಯ್ ಕುಮಾರ್‌ ಟ್ವೀಟ್

ಕೊರೊನಾ ಸೊಂಕು ತಗುಲಿರುವ ಬಗ್ಗೆ ಟ್ವೀಟ್‌ ಮಾಡಿ ಮಾಹಿತಿ ನೀಡಿರುವ ಅಕ್ಷಯ್ "ಕೇನ್ಸ್ 2022 ರಲ್ಲಿ ಇಂಡಿಯಾ ಪೆವಿಲಿಯನ್‌ನಲ್ಲಿ ನಮ್ಮ ಸಿನಿಮಾಗಳು ಬೇರೂರುವುದನ್ನು ನೋಡಲು ನಾನು ನಿಜವಾಗಿಯೂ ಎದುರು ನೋಡುತ್ತಿದ್ದೆ. ಆದರೆ, ದುಃಖದ ವಿಚಾರವೆನೆಂದರೆ, ನನಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಹೀಗಾಗಿ ನಾನು ವಿಶ್ರಾಂತಿ ಪಡೆಯಬೇಕಾದ ಅನಿವಾರ್ಯತೆ ಇದೆ. ಕೇನ್ಸ್‌ನಲ್ಲಿ ಭಾಗವಹಿಸುವುದನ್ನು ನಾನು ಮಿಸ್ ಮಾಡಿಕೊಳ್ಳುತ್ತೇನೆ," ಎಂದು ನಟ ಅಕ್ಷಯ್ ಕುಮಾರ್‌ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

2ನೇ ಬಾರಿ ಸೋಂಕು ತಗುಲಿಸಿಕೊಂಡ ಅಕ್ಷಯ್‌

2ನೇ ಬಾರಿ ಸೋಂಕು ತಗುಲಿಸಿಕೊಂಡ ಅಕ್ಷಯ್‌

ನಟ ಅಕ್ಷಯ್ ಕುಮಾರ್‌ಗೆ ಕೊರೊನಾ ಸೋಂಕು ಎರಡನೇ ಬಾರಿ ತಗುಲಿದೆ. ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ಅಕ್ಷಯ್ ಕುಮಾರ್‌ಗೆ ಕೊರೊನಾ ಸೋಂಕು ತಗುಲಿತ್ತು. ಆದಾದ ಬಳಿಕ ಸೂಕ್ತ ಚಿಕಿತ್ಸೆ ತೆಗೆದುಕೊಂಡು ಸೋಂಕಿನಿಂದ ಚೇತರಿಸಿಕೊಂಡಿದ್ದರು. ಸದ್ಯ ಈಗ ಮತ್ತೆ ಕೊರೊನಾ ಸೋಂಕು ಪತ್ತೆಯಾಗಿರುವುದರಿಂದ ವೈದ್ಯರ ಸಲಹೆ ಮೇರೆಗೆ ಮನೆಯಲ್ಲಿಯೇ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ.

ಕೇನ್ಸ್‌ ಚಲನಚಿತ್ರೋತ್ಸವಕ್ಕೆ ಹೋಗುತ್ತಿಲ್ಲ ಅಕ್ಷಯ್

ಕೇನ್ಸ್‌ ಚಲನಚಿತ್ರೋತ್ಸವಕ್ಕೆ ಹೋಗುತ್ತಿಲ್ಲ ಅಕ್ಷಯ್

ಈ ಬಾರಿಯ ಪ್ರತಿಷ್ಠಿತ ಕೇನ್ಸ್ ಚಲನಚಿತ್ರೋತ್ಸವ ಮೇ 17 ರಿಂದ ಪ್ರಾರಂಭವಾಗಲಿದೆ. ಕೇನ್ಸ್‌ ಚಲನಚಿತ್ರೋತ್ಸವದಲ್ಲಿ ಈ ಬಾರಿ ತಾರೆಯರ ದಂಡೇ ಹರಿದು ಬರಲಿದೆ. ಅದರಲ್ಲೂ ದಕ್ಷಿಣ ಭಾರತದ ನಟ ನಟಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್, ನಟಿ ಪೂಜಾ ಹೆಗಡೆ ಸೇರಿದಂತೆ ಹಲವು ತಾರೆಯರು ಭಾಗವಹಿಸಲಿದ್ದಾರೆ. ಭಾರತದ ಸಿನಿ ತಾರೆಯರ ನೇತೃತ್ವವನ್ನು ಕೇಂದ್ರ ಸಚಿವ ಅನುರಾಗ್ ಠಾಕೂರ್ ವಹಿಸಲಿದ್ದಾರೆ. ಕೇನ್ಸ್ ಚಲನಚಿತ್ರೋತ್ಸವದಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತೀರ್ಪುಗಾರರಾಗಿದ್ದಾರೆ. ಈ ಚಲನಚಿತ್ರೋತ್ಸವದಲ್ಲಿ ಅಕ್ಷಯ್ ಕುಮಾರ್ ಕೂಡ ಭಾಗಿಯಾಗಬೇಕಿತ್ತು. ಆದರೆ, ಕೊರೊನಾ ಪಾಸಿಟಿವ್ ಎಂದು ಗೊತ್ತಾಗಿದ್ದ ಕಾರಣ ಕಾರ್ಯಕ್ರಮದಿಂದ ದೂರ ಉಳಿದುಕೊಂಡಿದ್ದಾರೆ.

ಐತಿಹಾಸಿಕ ಚಿತ್ರದಲ್ಲಿ ನಟ ಅಕ್ಷಯ್ ಕುಮಾರ್

ಐತಿಹಾಸಿಕ ಚಿತ್ರದಲ್ಲಿ ನಟ ಅಕ್ಷಯ್ ಕುಮಾರ್

ನಟ ಅಕ್ಷಯ್ ಕುಮಾರ್ ನಟನೆಯ ಐತಿಹಾಸಿಕ ಸಿನಿಮಾ ಪೃಥ್ವಿರಾಜ್ ಬಿಡುಗಡೆಗೆ ಸಿದ್ದವಾಗಿದೆ. ಚೌಹಾಣ್ ರಾಜವಂಶದ ರಜಪೂತ ದೊರೆ ಪೃಥ್ವಿರಾಜ್ ಚೌಹಾಣ್ ರವರ ಜೀವನ ಚರಿತ್ರೆಯನ್ನು ಆಧರಿಸಿ ಈ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ. ಪೃಥ್ವಿರಾಜ್ ಪಾತ್ರದಲ್ಲಿ ಅಕ್ಷಯ್ ಕುಮಾರ್ ಕಾಣಿಸಿಕೊಳ್ಳುತ್ತಿದ್ದು, ಇದೇ ವರ್ಷ ಸಿನಿಮಾ ಬೆಳ್ಳಿತೆರೆ ಮೇಲೆ ಬರಲಿದೆ. ಪೃಥ್ವಿರಾಜ್ ಜೊತೆಗೆ 'ರಕ್ಷಾ ಬಂಧನ್', 'ರಾಮ್ ಸೇತು', 'ಮಿಷನ್ ಸಿಂಡ್ರೆಲ್ಲಾ',' ಓ ಮೈ ಗಾಡ್ 2', 'ಸೆಲ್ಫಿ' ಸಿನಿಮಾಗಳಲ್ಲಿ ಅಕ್ಷಯ್ ನಟಿಸಲಿದ್ದಾರೆ. ತಮಿಳನ ಸೂರ್ಯ ನಟನೆಯ 'ಸೂರರೈ ಪೋಟ್ರು' ಹಿಂದಿ ರಿಮೇಕ್‌ನಲ್ಲೂ ಅಕ್ಷಯ್ ಕಾಣಿಸಿಕೊಳ್ಳಲಿದ್ದಾರೆ.

More from Filmibeat

English summary
Bollywood Actor Akshay Kumar Covid Positive For the second Time, He Cancels Cannes Visit.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X